ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲೂಕಿನ ಕಸಬಾ ಹೋಬಳಿಯ ದೇವರಮರಿಕುಂಟೆ ಗ್ರಾಮದಲ್ಲಿ ನೆಲೆಸಿರುವಂತಹ ಚಳ್ಳಕೆರಮ್ಮ ದೇವಸ್ಥಾನವನ್ನು ಕಳೆದ ವರ್ಷದ ಹಿಂದೆ ಸ್ಥಳೀಯ ಶಾಸಕರ ಅನುದಾನ ಮತ್ತು ಭಕ್ತಾದಿಗಳ ವಂತಿಕೆಯಿಂದ ಕಟ್ಟಿಸಲಾಗಿತ್ತು. ತದನಂತರ ಗ್ರಾಮದಲ್ಲಿ ಉಂಟಾದ ವೈಶಮ್ಯದಿಂದ ಆರು ತಿಂಗಳುಗಳಿಂದ ಸ್ಥಗಿತಗೊಳಿಸಿದ್ದ ಪೂಜಾ ಕಾರ್ಯಗಳನ್ನು ತಹಶೀಲ್ದಾರ್ ಎನ್. ರಘುಮೂರ್ತಿ ಪುನರಾರಂಭಿಸುವಂತೆ ಮಾಡಿದರು.

ಗ್ರಾಮದ ತಿಪ್ಪೇಸ್ವಾಮಿ ದೇವರ ಮರಿಕುಂಟೆಯ ಕೆಲವು ಜನರು ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿ ದೇವಸ್ಥಾನಕ್ಕೆ ಬಾಗಿಲು ಹಾಕಿದ್ದು ಗ್ರಾಮಸ್ಥರುಗಳ ಮನವಿಗೆ ಸ್ಪಂದಿಸದೆ ಇದ್ದುದರಿಂದ ಬೇಸತ್ತ ಗ್ರಾಮಸ್ಥರು ತಹಶೀಲ್ದಾರ್ ಮೊರೆಹೋಗಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಎನ್. ರಘುಮೂರ್ತಿ ಇಂದು ಬೆಳಗ್ಗೆ ಗ್ರಾಮಸ್ಥರೊಂದಿಗೆ ಚಳ್ಳಕೆರೆಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನ ನಿರ್ಮಾಣ ಮಾಡಿರುವುದು ಸರ್ಕಾರಿ ಜಾಗದಲ್ಲಿ ಸರ್ಕಾರದ ಒಡೆತನದ ಸ್ವತ್ತಾಗಿರುತ್ತದೆ. ಭಕ್ತಾದಿಗಳ ಭಾವನೆಗೆ ಸರ್ಕಾರ ಸ್ಪಂದಿಸಬೇಕಿದೆ ಗ್ರಾಮದಲ್ಲಿ ಸಾಮರಸ್ಯವನ್ನು ಕಾಪಾಡಬೇಕಿದೆ ಈ ರೀತಿ ದೇವಸ್ಥಾನದ ಪೂಜಾ ಕೈಂಕಾರ್ಯಗಳಿಗೆ ಅಡ್ಡಿಪಡಿಸುವ ವ್ಯಕ್ತಿಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ವಹಿಸಲಾಗುತ್ತದೆ ಎಂದು ಎಚ್ಚರಿಸಿದರು.

ದೇವಸ್ಥಾನದ ಬಾಗಿಲನ್ನು ತೆರೆಸಿ ಪೂಜಾ ಕಾರ್ಯಕ್ಕೆ ಅನುವು ಮಾಡಿಕೊಟ್ಟರು .ನಿರ್ಭೀತಿಯಿಂದ ಮತ್ತು ಭಕ್ತಿಪೂರ್ವಕವಾಗಿ ಈ ದೇವಿಯ ಪೂಜಾ ಕೈಂಕರ್ಯ\ ಗಳನ್ನು ನಿರ್ವಿಗ್ನ ವಾಗಿ ಮಾಡಿಕೊಂಡು ಹೋಗುವಂತೆ ಅರ್ಚಕರಿಗೆ ಸೂಚಿಸಿದರು.
Also read: ಅನ್ವೇಷಣೆಗೆ ಒತ್ತು ನೀಡುವ ಸಂಸ್ಥೆಗಳತ್ತ ಹೂಡಿಕೆದಾರರು ಗಮನಹರಿಸಿ: ರೆಹಮತ್ ಬೇಗ್ ಸಲಹೆ
ಈ ಸಂದರ್ಭದಲ್ಲಿ ಪೊಲೀಸ್ ಉಪನಿರೀಕ್ಷಕ ಕೆ ಸತೀಶ್ ನಾಯ್ಕ ಅವರಿಗೆ ಸೂಚನೆ ನೀಡಿ ದೇವಿಯ ಪೂಜೆಗೆ ಅಡ್ಡಿಪಡಿಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ಈ ಸಂದರ್ಭದಲ್ಲಿ ಪಂಚಾಯ್ತಿ ಅಧ್ಯಕ್ಷ ರಾಜಶೇಖರ್, ಸಾಹಿತಿ ತಿಪ್ಪಣ್ಣ ಮರೀಕುಂಟೆ, ರಾಜಶ್ವ ನಿರೀಕ್ಷಕರಾದ ಲಿಂಗೇಗೌಡ ಉಪಸ್ಥಿತರಿದ್ದರು.


ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















