ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ನಮ್ಮ ರಾಷ್ಟ್ರದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿಕೋರಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇಣದ ಬತ್ತಿ ಬೆಳಗಿಸುವ ಮೂಲಕ ಪುಲ್ವಾಮ ವೀರ ಸೈನಿಕರನ್ನು ಸ್ಮರಣೆ ಮಾಡಲಾಯಿತು.

ಸಾರ್ವಜನಿಕರು ಭಾರತ ಮಾತೆಯ ಜಯಘೋಷ ಮಾಡುತ್ತ, ಕೈಯಲ್ಲಿ ಕ್ಯಾಂಡಲ್ ಹಿಡಿದು ಹೆಜ್ಜೆ ಹಾಕುವ ಮೂಲಕ ದೇಶಪ್ರೇಮ ಮೆರೆದರು. ನೆಹರೂ ವೃತ್ತಕ್ಕೆ ಆಗಮಿಸಿ ಅಗಲಿದ ಯೋಧರಿಗೆ ನಮನ ಸಲ್ಲಿಸಿದರು.

ಪುರಸಭೆ ಮಾಜಿ ಸದಸ್ಯ ಎಂ. ಚೇತನ್‌ಕುಮಾರ್, ವಕೀಲ ಎಂ.ಎಸ್. ವಿಶ್ವನಾಥ, ಓಬಳೇಶ್, ಪ್ರಸನ್ನಕುಮಾರ್, ಗಿರೀಶ್, ಚನ್ನಮ್ಮ ನಾಗತಿಹಳ್ಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದ್‌ಕುಮಾರ್, ಆಚಾರಿ ಇನ್ನಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















