ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸ್ವಚ್ಚ ಭಾರತ್ ಮಿಶನ್‌ಯೋಜನೆಡಿಯಲ್ಲಿ 40ಲಕ್ಷ ರೂ. ವೆಚ್ಚದಲ್ಲಿ ನಗರಸಭೆ ವತಿಯಿಂದ ಕಸ ವಿಲೇವಾರಿಗಾಗಿ ಖರೀದಿಸಿದ ವಾಹನಗಳಿಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.
ಜಿಲ್ಲೆಯಲ್ಲೆ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕು ಚಳ್ಳಕೆರೆ. ಆದ್ದರಿಂದ ಕಸದ ವಿಲೇವಾರಿ ಸಮಸ್ಯೆ ಉದ್ಭವವಾಗಬಾರದು ಮತ್ತು ನಗರ ಸ್ವಚ್ಚವಾಗಿದ್ದರೆ ಯಾವುದೇ ಸಮಸ್ಯೆ ತೆಲೆ ದೂರಿವುದಿಲ್ಲ. ಅದಕ್ಕಾಗಿಯೇ ಪ್ರತಿ ವಾರ್ಡ್‌ನ ಕಸವಿಲೇವಾರಿಗಾಗಿ ನೂತನ ವಾಹನಗಳನ್ನು ನೀಡಲಾಗಿದೆ ಹಾಗೂ ಕಸ ನಿರ್ವಹಣೆಯ ಬಗೆಗೆ ಹೆಚ್ಚಿನ ಜವಬ್ಧಾರಿ ನಿರ್ವಹಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಮಾತನಾಡಿ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಸಹಕಾರದಿಂದಾಗಿ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದು, ಮಂದಿನ ದಿನಗಳಲ್ಲಿ ನಗರ ಅಭಿವೃದ್ದಿಗಾಗಿ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ನಗರದಲ್ಲಿ ನಡೆಯಬೇಕಿದ್ದ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡು ಅಭಿವೃದ್ದಿಗೆ ಅಡಚಣೆಯಾಗಿದೆ. ಕೆಲವು ಕಟ್ಟಡ ನಿರ್ಮಾಣ ಕಾರ್ಯ ಪೂರ್ತಿಯಾಗದೆ ಅರ್ಧಕ್ಕೆ ನಿಂತಿದ್ದು, ಸರ್ಕಾರ ದಯವಿಟ್ಟು ಉಳಿದ ಕಾಮಗಾರಿಗಳನ್ನು ಪೂರ್ಣ ಮಾಡಲು ಹಣ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಪೌರಾಯುಕ್ತ ಪಾಲಯ್ಯ ಮಾತನಾಡಿ, ಘನತ್ಯಾಜ್ಯ ವಸ್ತು ನಿರ್ವಹಣೆಗೆ ಪ್ರತಿ ಮನೆಗೆ ಎರಡು ಡಸ್ಟ್‌ಬಿನ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಜೈತುನ್ಬಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ಗೌಡ ಮಾತನಾಡಿದರು. ಸದಸ್ಯ ವೈ.ಪ್ರಕಾಶ್, ಕೆ.ವೀರಭದ್ರಯ್ಯ, ಶ್ರೀನಿವಾಸ್, ವಿಶುಕುಮಾರ್, ಸದಸ್ಯೆ ಮಂಜುಳಾ ಆರ್.ಪ್ರಸನ್ನಕುಮಾರ್, ಕವಿತಾ, ರುದ್ರನಾಯಕ, ಆರ್.ಮಲ್ಲಿಕಾರ್ಜುನ, ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ, ಎಂಜಿನಿಯರ್ ಲೋಕೇಶ್, ಗಣೇಶ, ದಾದು ಕಂದಾಯ ಅಧಿಕಾರಿ ಈರಮ್ಮ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post