ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಸರ್ಕಾರದ ಪತ್ರಕರ್ತರನ್ನು ಕೊರೋನ ಫ್ರಂಟ್ ಲೈನ್ ವಾರಿಯರ್‍ಸ್ ಎಂದು ಪರಿಗಣಿಸಿದ್ದರೂ, ನಿಮಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಲಸಿಕೆ ಇಲ್ಲ ಎಂಬ ಉಡಾಫೆ ಉತ್ತರ ನೀಡಲಾಗುತ್ತಿದೆ ಎಂದು ತಾಲೂಕು ಪತ್ರಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೋನ ಲಸಿಕೆ ಹಾಕಿಸಲು ಪತ್ರಕರ್ತರು ನಗರ ಆರೋಗ್ಯ ಕೇಂದ್ರ, ಅಂಗನವಾಡಿ, ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿದರೆ ಅಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಸಿಕೆ ಇಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದು, ರಿಜಿಸ್ಟರ್ ಆದವರಿಗೆ ಮಾತ್ರ ಲಸಿಕೆ ಎನ್ನುತ್ತಿದ್ದಾರೆ.
ಎಷ್ಟೋ ಜನ ಸಾರ್ವಜನಿಕರು ಲಸಿಕೆ ಹಾಕಿಸಲು ಬಂದು ಲಸಿಕೆ ದಸ್ತಾನು ಇಲ್ಲದೆ ಸರ್ಕಾರಕ್ಕೆ ಛೀಮಾರಿ ಹಾಕಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಇಲ್ಲಿ ಸರ್ಕಾರ ಪತ್ರಕರ್ತರನ್ನು ಕೊರೋನ ಫ್ರಂಟ್ ಲೈನ್ ವಾರಿಯರ್ ಎಂದು ಘೋಷಿಸಿ ಅವರಿಗೆ ಇಂದು ಲಸಿಕೆ ಲಭ್ಯವಿಲ್ಲದಿರುವುದನ್ನು ನೋಡಿದರೆ, ಇನ್ನು ಸಾರ್ವಜನಿಕರ ಪಾಡೆನು ಎಂಬ ಹತಾಶೆ ವ್ಯಕ್ತವಾಗಿದೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post