ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಶ್ರೀ ದೋಡ್ಡೇರಿ ಕನ್ನೇಶ್ವರ ಆಶ್ರಮದ ದತ್ತ ಅವಧೂತರಾದ ಸತ್‌ಉಪಾಸಿ ಮಲ್ಲಪ್ಪಸ್ವಾಮಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರದುರ್ಗ ರಸ್ತೆಯ ಸುಧಾಕರ್ ಕ್ರೀಡಾಂಗಣದ ಮುಂದೆ ಕುರುಡಿಹಳ್ಳಿ ಲಂಬಾಣಿಹಟ್ಟಿಯ ವೆಂಕಟೆಶ್ವರ ದೇವಸ್ಥಾನ ಬವಾಜಿ ಆಶ್ರಮ ಶಿವಸಾಧುಸ್ವಾಮಿಜಿ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಆಹಾರ ಧಾನ್ಯ, ಬಟ್ಟೆ, ಹಾಲು, ಬ್ರೇಡ್ ವಿತರಿರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿತ್ತು. ಈ ಸಮಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗ ರಸ್ತೆಯ ಸುಧಾಕರ್ ಕ್ರೀಡಾಗಣದ ಮುಂದೆ ಅಲೆಮಾರಿ ಸಮುದಾಯವು ಸಣ್ಣ-ಸಣ್ಣ ಗುಡಿಸಿಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಕುಟುಂಬಗಳು ಸಣ್ಣಮಕ್ಕಳು, ಬಾಣಂತಿಯರು ಚಿಕ್ಕ ಮಕ್ಕಳು ಇರುವುದನ್ನು ಗಮನಿಸಿ ಹೊಸಪೇಟೆ ತಾಲ್ಲೂಕಿನ ಸೀತರಾಮ್ ತಾಂಡದ ಹಾಗೂ ಗ್ರಾಮದವರು ಮಠಕ್ಕೆ ಆಹಾರವನ್ನು ನೀಡಿದ್ದರು. ಆಧಾನ್ಯದ ಜೊತೆಗೆ ಅವರಿಗೆ ಬಟ್ಟೆ, ಆಹಾರ ಧಾನ್ಯ, ಹಾಲು ಬ್ರೇಡ್ ವಿತರಿಸಲಾಗುತ್ತಿದೆ. ಈ ಹಿಂದೆಯು ಸಹ ಮಳೆಯಿಂದ ನಷ್ಟಕೊಳಗಾದ ಮನ್‌ಮೈನ್ ಹಟ್ಟಿಯಲ್ಲಿ 50 ಕುಟುಂಬಗಳಿ ಆಹಾರ ಕಿಟ್ ವಿತರಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೂಜಾರಿ ರಾಮನಾಯ್ಕ್ ಮುಂಡರಾದ ದೋರೆ ಬೈಯಪ್ಪ, ಮಂಜುನಾಥ, ಅಲೆಮಾರಿ ಕುಟುಂಬದ ಸದಸ್ಯರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post