ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ತಾಲೂಕು ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ನಾಮಪತ್ರ ಸಲ್ಲಿಸಿದರು.
ಅವಧೂತ ಪರಂಪರೆಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಸ್ವಾಮಿಗಳ ಒಳಮಠದ ಗದ್ದುಗೆಗೆ ನಮಸಿ ಆಶೀರ್ವಾದ ಪಡೆದುಕೊಂಡು ಕನ್ನಡ ಮನಸ್ಸುಗಳೊಂದಿಗೆ ಚಿತ್ರದುರ್ಗಕ್ಕೆ ತೆರಳಿ ಕಲ್ಲಿನ ಕೋಟೆಯನ್ನು ವೈರಿಗಳಿಂದ ರಕ್ಷಿಸಿದ ಮಹಾತಾಯಿ ಒನಕೆ ಓಬವ್ವ ಅವರ ಪ್ರತಿಮೆಗೆ ಪೂಜಿಸಿ ಆಶೀರ್ವಾದ ಪಡೆದು ಚಿತ್ರದುರ್ಗದ ತಾಲ್ಲೂಕು ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಹಿತೈಷಿಗಳು, ಕನ್ನಡ ಪರ ಕೆಲಸ ಮಾಡಲು ತುಡಿಯುವ ಮನಸ್ಸುಗಳೊಂದಿಗೆ ಗುರುವಾರ ಉಮೇದುವಾರಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಿ.ಎಂ. ತಿಪ್ಪೇರುದ್ರಸ್ವಾಮಿ, ಪ.ಮ.ಗುರುಲಿಂಗಯ್ಯ, ಚಳ್ಳಕೆರೆ ತಾಲ್ಲೂಕು ಕಸಾಪ ಕಾರ್ಯದರ್ಶಿ ಸದಾಶಿವ, ಕೋಶಾಧ್ಯಕ್ಷ ಚೌಳೂರು ಲೋಕೇಶ್, ನಿವೃತ್ತ ಶಿಕ್ಷಣ ಸಂಯೋಜಕ ನಾರಾಯಣ ನಾಯಕ, ಫಣಿಯಪ್ಪ, ನಾಯಕನಹಟ್ಟಿ ಪ.ಪಂ.ಸದಸ್ಯರಾದ ಟಿ.ಬಸಣ್ಣ, ಮನ್ಸೂರ್, ಮಲ್ಲೂರಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಕಾಟಯ್ಯ. ಪ್ರಜಾವಾಣಿ ವರದಿಗಾರ ವಿ.ಧನುಂಜಯ, ಪತ್ರಕರ್ತರಾದ ಶ್ರೀಕಾಂತ್, ಉಪನ್ಯಾಸಕ ಪಿ.ಎಂ.ಜಿ. ರಾಜೇಶ್, ಬಿಜೆಪಿ ಮುಖಂಡ ಕರವೇ ಸಂಘಟನೆಯ ತಿಪ್ಪೇಶ್, ಗೋಪಿ, ಹಿರಿಯೂರಿನ ಸಿಆರ್‌ಪಿ ರಾಮಚಂದ್ರಪ್ಪ, ಯೋಗೀಶ್ ಮತ್ತು ನಾಯಕನಹಟ್ಟಿ ಕಸಾಪ ಆಜೀವ ಸದಸ್ಯರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post