ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ನಗರದ ಹಿರಿಯೂರು ರಸ್ತೆಯಲ್ಲಿ ನಗರಸಭೆ ಪೌರಯುಕ್ತ ಪಾಲಯ್ಯ ಅವರ ಸೂಚನೆ ಮೇರೆಗೆ ಪುಟ್’ಬಾತ್ ಮೇಲೆ ಇರುವಂತಹ ಪೆಟ್ಟಿಗೆ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.
ಪುಟ್’ಬಾತ್ ಮೇಲೆ ವ್ಯಾಪಾರ ವಹಿವಾಟುಗಳು ನಡೆಸುವುದರಿಂದ ಸಾರ್ವಜನಿಕರಿಗೆ ಸಂಚಾರ ಮಾಡಲು ತೊಂದರೆಯಾಗಿತ್ತು. ಇದನ್ನು ಅರಿತು ಈ ಹಿಂದೆ ಕೂಡ ನಗರಸಭೆ ವತಿಯಿಂದ ಪುಟ್’ಬಾತ್ ಅಂಗಡಿಗಳನ್ನು ತೆರುವು ಮಾಡುವಂತೆ ಪುಟ್’ಬಾತ್ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಆದರೆ ಅಂಗಡಿ ಮಾಲೀಕರು ಮಾತ್ರ ಅಂಗಡಿಗಳನ್ನು ತೆರವುಗೊಳಿಸದೆ ಪುಟ್ಬಾತ್ ಮೇಲೆ ವ್ಯಾಪಾರ ನಡೆಸುತ್ತಿದ್ದರು. ಇಂದು ಖುದ್ದಾಗಿ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಹಿರಿಯೂರು ರಸ್ತೆಯ ಪಕ್ಕದ ಪುಟ್ ಬಾತ್ ಮೇಲೆ ಇರುವ ಅಂಗಡಿಗಳನ್ನು ತೆರವುಗೊಳಿಸಿದರು.
ಪುಟ್ ಬಾತ್ ಮೇಲೆ ವ್ಯಾಪಾರ ನಡೆಸುವ ವ್ಯಾಪಾರಸ್ಥರಿಗೆ ಪಾದಚಾರಿಗಳ ಒಡಾಟಕ್ಕೆ ತೊಂದರೆಯಾಗುತ್ತಿದೆ. ನಿಮ್ಮ ಅಂಗಡಿಗಳು ತೆರವುಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಇದುವರೆಗೆಯಾದರೂ ಅಂಗಡಿಗಳನ್ನು ತೆರವು ಮಾಡಿಕೊಂಡಿರಲಿಲ್ಲ. ಆದ್ದರಿಂದ ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರ ಸಹಕಾರದೊಂದಿಗೆ ಇಂದು ನಗರದಲ್ಲಿ ಪುಟ್ಬಾತ್ ಮೇಲಿರುವ ಅಂಗಡಿಗಳು ತೆರವುಗೊಳಿಸಲಾಗುತ್ತಿದೆ.
-ಪಾಲಯ್ಯ
ಪೌರಾಯುಕ್ತರು
ನಗರಸಭೆ, ಚಳ್ಳಕೆರೆ
ಹಿರಿಯೂರು ರಸ್ತೆಯ ಪಕ್ಕದಲ್ಲಿರುವ ಪುಟ್ಪಾತ್ ಮೇಲೆ ಕೃಷಿ ಸಲಕರಣೆಗಳು, ಪಾಸ್ಟ್‌ಪುಡ್ ಅಂಗಡಿಗಳು, ಚರ್ಮಾಕಾರರ ಕಟೀರದ ಸಣ್ಣ ಅಂಗಡಿಗಳು, ಚಪ್ಪಲಿ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಸ್ಥರು ಅಂಗಡಿಗಳನ್ನು ಪುಟ್‌ಬಾತ್ ಮೇಲೆ ಇದ್ದವು. ಈ ಅಂಗಡಿಗಳಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಆದರಿಂದ ನಗರಸಭೆ ವತಿಯಿಂದ ಪುಟ್ ಪಾತ್ ಮೇಲಿರುವ ಅಂಗಡಿಗಳನ್ನು ತೆರುವುಗೊಳಿಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು. ಈ ಸೂಚನೆಯನ್ನು ಪಾಲಿಸದೆ ನಿದ್ದೆಯ ಗಾಡ ನಿದ್ದೆಯಲ್ಲಿರುವ ಅಂಗಡಿ ಮಾಲೀಕರಿಗೆ ಇಂದು ನಗರಸಭೆ ಶಾಕ್ ನೀಡಿದೆ.
ನಗರಸಭೆ ವತಿಯಿಂದ ಏಕಾಏಕಿ ಪುಟ್‌ಬಾತ್ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸಿದರೆ, ನಾವು ಎಲ್ಲಿ ಹೋಗಿ ವ್ಯಾಪಾರ ನಡೆಸಬೇಕು. ನಾವು ಅನೇಕ ವರ್ಷಗಳಿಂದ ಪುಟ್ಪಾತ್ ಮೇಲೆ ಅಂಗಡಿಗಳನ್ನು ಇಟ್ಟು ಜೀವನ ನಡೆಸುತ್ತಿದ್ದೇವೆ. ಆದರೆ ಇಂದು ನಗರಸಭೆ ವತಿಯಿಂದ ಪುಟ್‌ಪಾತ್ ಮೇಲಿರುವ ಅಂಗಡಿ ತೆರವುಗೊಳಿಸಿದರೆ ನಮ್ಮ ಜೀವನ ಬೀದಿ ಬೀಳುತ್ತಿದೆ. ಇಂತಹ ಕೊರೋನಾದ ಸಂಕಷ್ಟ ಸಮಯದಲ್ಲಿ ನಗರಸಭೆ ಅಧಿಕಾರಿಗಳು ತೆರವುಗೊಳಿಸುವುದು ಸೂಕ್ತವಲ್ಲ. ಸ್ವಲ್ಪ ದಿನಗಳ ಕಾಲಾವಕಾಶ ನೀಡಿ ಅಂಗಡಿ ತೆರವುಗೊಳಿಸಬೇಕು.
-ವಿಜಯಕುಮಾರ್
ಬೀದಿಬದಿ ವ್ಯಾಪಾರಸ್ಥರು
ಬುಧವಾರ ಬೆಳಿಗ್ಗೆ ನಗರಸಭೆ ಅಧಿಕಾರಿಗಳು ಹಿರಿಯೂರು ರಸ್ತೆಯ ಪಕ್ಕದ ಪುಟ್‌ಬಾತ್ ಮೇಲೆ ಇದ್ದ ಅಂಗಡಿಗಳನ್ನು ಪೌರಕಾರ್ಮಿಕರ ಸಹಾಯದೊಂದಿಗೆ ತೆರವುಗೊಳಿಸಿದರು.
ಈ ವೇಳೆ ನಗರಸಭೆ ವ್ಯವಸ್ಥಾಪಕ ಲಿಂಗರಾಜ್, ಆರೋಗ್ಯ ನಿರೀಕ್ಷರಾದ ಗಣೇಶ್, ದಾದಾಪೀರ್, ಪೌರಕಾರ್ಮಿಕರು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















