ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಪರಶುರಾಂಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಪರಿಗಣಿಸುವಂತೆ ಜನಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಪರಶುರಾಂಪುರ ಶಾಖೆ ಅನಿರ್ದಿಷ್ಟ ಕಾಲ ಮುಷ್ಕರ ಹೂಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 20 ವರ್ಷದಿಂದ ಈ ಬೇಡಿಕೆಯನ್ನು ನಿರಂತರವಾಗಿ ಶಾಸಕರು ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಸಲ್ಲಿಸುತ್ತಾ ಬಂದಿದ್ದರೂ, ತಾಲೂಕಿನಲ್ಲಿರುವ ರೈತರಿಗೆ ಬೆಳೆ ವಿಮೆ ಸಂದಾಯವಾಗಿಲ್ಲ. ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರವನ್ನು ಕೈಬಿಡುವುದಿಲ್ಲ ಎಂದು ಮುಷ್ಕರ ನಿರತರು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ರಘುಮೂರ್ತಿ ಸರ್ಕಾರದ ಮಟ್ಟದಲ್ಲಿ ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಪರಿಗಣಿಸಲು ಪರಿಶೀಲನೆ ಹಂತದಲ್ಲಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಂಬಂಧಿಸಿದ ಕಂಪನಿಯ ಜನರೊಂದಿಗೆ ಮಾತನಾಡಿ ಹಾಗೂ ಸಭೆ ಮಾಡಿ ಒಂದು ತಿಂಗಳ ಒಳಗಾಗಿ ಹಣವನ್ನು ರೈತರ ಖಾತೆಗೆ ಹಾಕುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಯಾವುದೇ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ರೈತರಿಗೋಸ್ಕರ ತಾಲೂಕಿನಲ್ಲಿ ಈಗಾಗಲೇ ೬೭ ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಪರಿಹಾರ ನೀಡಲಾಗಿದೆ. ದಾರಿ, ಸ್ಮಶಾನ ಮುಂತಾದ ಸಮಸ್ಯೆಗಳನ್ನು ನೇರವಾಗಿ ಗ್ರಾಮಕ್ಕೆ ಹೋಗಿ ಬಗೆಹರಿಸಲಾಗುತ್ತಿದೆ. ಅತಿ ಮಳೆಯಿಂದ ನಷ್ಟವಾಗದಂತೆ ಎಲ್ಲಾ ರೈತರಿಗೂ ಈಗಾಗಲೇ ಪರಿಹಾರ ನೀಡಲಾಗಿದೆ ತಾಲೂಕಿನಲ್ಲಿರುವ ಎಲ್ಲಾ ಗ್ರಾಮಗಳನ್ನು ಮನೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ 40 ಗ್ರಾಮಗಳನ್ನು ಮಾಡಲಾಗಿದೆ ಎಂದರು.
ಉಳಿದಂತೆ ಎಲ್ಲಾ ಗ್ರಾಮಗಳನ್ನು ಕೂಡ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುತ್ತಿದೆ. ರೈತರ ಹಿತಕಾಯುವ ದೃಷ್ಟಿಯಲ್ಲಿ ತಾಲೂಕಾಡಳಿತ ರೈತರೊಂದಿಗೆ ಉದ್ದೇಶಿತ ಮುಷ್ಕರವನ್ನು ಕೈ ಬಿಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಚಿತ್ರ ಲಿಂಗಪ್ಪ ಇನ್ನಿತರರು ಇದ್ದರು.
Also read: ರಾಜೇಂದ್ರ ಪ್ರಸಾದ್ ಗೆ ಕುವೆಂಪು ವಿವಿ ಪಿಎಚ್.ಡಿ ಪದವಿ ಪ್ರದಾನ
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post