ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಆಯುರ್ವೇದದಲ್ಲಿ ಔಷಧ ಭೂಮಿಯಲ್ಲಿ ದೊರಕುವ ಸಸ್ಯಗಳು ಸಾಮಾನ್ಯವಾಗಿ ಹಲವು ಔಷಧಿ ಸಸ್ಯಗಳು ಮಿಶ್ರಣದಿಂದ ತಯಾರಿಸಿದ ಔಷಧವನ್ನು ಕಾಯಿಲೆಗಳ ನಿವಾರಣೆ ಹಾಗೂ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ತಾಲೂಕಿನ ದೇವರ ಮರಿಕುಂಟೆ ಗ್ರಾಮದ ವಾಲ್ಮೀಕಿ ಭವನ ಕಲಾಮಂದಿರದಲ್ಲಿ ಸರ್ಕಾರಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಚಳ್ಳಕೆರೆ ಶಾಖೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಇವರ ಸಹಯೋಗದಲ್ಲಿ ನಡೆದ ಎಸ್’ಸಿಪಿಟಿಎಸ್’ಪಿ ಯೋಜನೆಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸ ಪೂರ್ವ ಕಾಲದಿಂದಲೂ ಸಾಂಪ್ರದಾಯಿಕ ಪದ್ದತಿ ಔಷಧಿಗಳನ್ನು ಬಳಕೆ ಮಾಡುತ್ತಾ ಬಂದಿದ್ದಾರೆ. ಈಗ ಆರ್ಯುವೇದಿಕ್ ಚಿಕಿತ್ಸೆಯಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲೂ ಬಹುಮುಖ್ಯವಾಗಿ ಹಮ್ಮಿಕೊಳ್ಳುವುದರಿಂದ ಗ್ರಾಮೀಣ ಪ್ರದೇಶದ ಬಡವರಿಗೆ, ರೈತರಿಗೆ, ಹಿಂದುಳಿದ ಸಮುದಾಯದವರಿಗೆ ಸಹಕಾರಿಯಾಗಲಿದೆ. ಈ ಶಿಬಿರದಲ್ಲಿ 18 ವಿವಿಧ ಕಾಯಿಲೆಗಳಿಗೆ 18 ಜನ ಡಾಕ್ಟರ್ ಇದ್ದು ಪ್ರತಿಯೊಬ್ಬರು ತಮಗೆ ಇರುವ ಕಾಯಿಲೆ ಬಗ್ಗೆ ತಪಾಸಣೆ ಮಾಡಿಸಿಕೊಂಡು ಅವರು ನೀಡುವ ಔಷಧಿಗಳನ್ನು ಬಳಕೆ ತೆಗೆದುಕೊಳ್ಳಿ. ಗಂಭೀರ ಕಾಯಿಲೆಗಳಿಗೂ ಸಹ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವುದು. ಮೊದಲೆಲ್ಲಾ ಕಾಯಿಲೆ ಬಂದಾಗ ನಗರಕ್ಕೆ ಹೋಗಬೇಕಿತ್ತು. ಆದರೆ ಈಗ ಟಿ.ಎನ್. ಕೋಟೆ, ಗೋಪನಹಳ್ಳಿ, ಸಾಣಿಕೆರೆ ಗ್ರಾಮಗಳಲ್ಲಿ ಆಸ್ಪತ್ರೆಗಳು ಇವೆ. ಹೊಸದಾಗಿ ಆಸ್ಪತ್ರೆಗಳು ಮಂಜೂರಾತಿಗೆ ಅವಕಾಶವಿಲ್ಲ. ಜೊತೆಗೆ ಡಾಕ್ಟರ್ ಕೊರತೆಯು ಸಹ ಕಾರಣವಾಗುತ್ತದೆ. ಈ ಶಿಬಿರ ಹಮ್ಮಿಕೊಂಡಿರುವುದರಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲ ಎಂ. ಕರಿಯಪ್ಪ ಮಾತನಾಡಿ, ಈ ಭಾಗದಲ್ಲಿ ಇದೇ ತರಹದ ಶಿಬಿರಗಳನ್ನು ಮಾಡುತ್ತಿರುವುದು ಇದು ನಾಲ್ಕನೆಯ ಬಾರಿ. ಇದಕ್ಕೆ ಸಹಕಾರ ಶಾಸಕರಾದ ರಘುಮೂರ್ತಿಯವರು ಈ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ವಹಿಸಿ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.
ಶಾಸಕರು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಇಂಜನಿಯರ್ ಕಾಲೇಜು, ಕೆಎಸ್’ಆರ್’ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಎಲ್ಲಾ ಸಮುದಾಯದ ಮಕ್ಕಳಿಗೆ ಹಾಸ್ಟಲ್ ವ್ಯವಸ್ಥೆ, ಪ್ರತಿಯೊಂದು ಸಮುದಾಯದವರಿಗೆ ಸಮುದಾಯ ಭವನ ಹೀಗೆ ಸಾಲು ಸಾಲು ಅಭಿವೃದ್ದಿಯನ್ನು ಮಾಡಿದ್ದಾರೆ. ಇವರು ಮತ್ತೊಮ್ಮೆ ಆಯ್ಕೆಯಾದರೆ ಇಡಿ ರಾಜ್ಯವೇ ತಿರುಗಿ ನೋಡುವಂತೆ ಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ ಎಂದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ.ಶ್ರೀನಿವಾಸ್ ಯಾದವ್ ಮಾತನಾಡಿ, ಶಿಬಿರದಲ್ಲಿ ದೊರೆಯುವ ಸೌಲಭ್ಯಗಳೆಂದರೆ. ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಮಂಡಿನೋವು, ಕೈಕಾಲು ನೋವು, ಕಿವಿ, ಮೂಗು, ಗಂಟಲು, ತೊಂದರೆ, ಮಕ್ಕಳ ಸಮಸ್ಯೆಗಳು ಅಸ್ತಮಾ, ಚರ್ಮರೋಗ, ಕಣ್ಣಿನ ತಪಾಸಣೆ ಸೇರಿಂತೆ 18 ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗವುದು ಎಂದರು.
ಸಾಹಿತಿ ಮರಿಕುಂಟೆ ತಿಪ್ಪಣ್ಣ, ಸರ್ಕಾರಿ ಗಂಗಾಧರ್ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ತಾಲೂಕು ಗೊಲ್ಲ ಸಂಘದ ಅಧ್ಯಕ್ಷ ರವಿಕುಮಾರ್, ತಾಲೂಕು ಪಂಚಾಯ್ತಿ ಸದಸ್ಯೆ ಎನ್.ರಂಜಿತ, ದೇವರ ಮರಿಕುಂಟೆ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷ ಹೇಮಣ್ಣ, ಗ್ರಾಮಪಂಚಾಯ್ತಿ ಪಿಡಿಓ ಇರ್ಫಾನ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಡಿ. ಭೂಲಿಂಗಪ್ಪ, ಸರ್ಕಾರಿ ನಿವೃತ್ತ ಸಂಘದ ಸದಸ್ಯ ಮೂಡಲ ಗಿರಿಯಪ್ಪ, ಮುಖಡರಾದ ಓ. ತಿಪ್ಪೇಸ್ವಾಮಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾಕ್ಟರ್’ಗಳು ಗ್ರಾಮದ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post