ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಚಳ್ಳಕೆರೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಇನ್ನೂ ಸಮಗ್ರ ಅಭಿವೃದ್ಧಿಯಾಗಬೇಕಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಬೊಸೆದೇವರಹಟ್ಟಿ ಗ್ರಾಮದಲ್ಲಿ ಮನೆಮನೆಗೆ ಹೋಗಿ ಮತಪ್ರಚಾರ ಮಾಡಿದ ಅವರು, ನಾಯಕನಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಈ ಭಾಗಕ್ಕೆ ತಾವು ಬಂದ ನಂತರ ಪಟ್ಟಣಕ್ಕೆ ವಾಣಿ ವಿಲಾಸ ಸಾಗರದಿಂದ ನೀರು ತರುವಂತಹ ಕೆಲಸ ಮಾಡಿದ್ದೇನೆ. ಇನ್ನು ಸ್ವಲ್ಪ ದಿನಗಳಲ್ಲಿ ಪ್ರತಿ ಮನೆಮನೆಗೂ ನೀರು ಕೊಡಿಸುವಂತಹ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮದೆ ಇದೆ. ಪಟ್ಟಣ ಪಂಚಾಯಿತಿ ಅಭಿವೃದ್ಧಿಯಾಗಬೇಕೆಂದರೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ, ಪಟ್ಟಣದಲ್ಲಿ 3 ಕೋಟಿ ವೆಚ್ಚದ ವಾಲ್ಮೀಕಿ ಭವನ ಭೂಮಿ ಪೂಜೆ ಮಾಡಿದ್ದೇವೆ. ಒಳಮಠದಲ್ಲಿ 5 ಕೋಟಿ ವೆಚ್ಚದ ಸಿಸಿ ರಸ್ತೆ ಮಾಡಿದ್ದೇವೆ. ತೇರು ನಿಲ್ಲುವ ಸ್ಥಳದಿಂದ ವಾಲ್ಮೀಕಿ ವೃತ್ತದವರೆಗೂ 5 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ ಮಾಡಿಸಿದ್ದೇವೆ ಎಂದರು.
ಹಿರೇಹಳ್ಳಿ ಕ್ಷೇತ್ರದ ಮಾಜಿ ಜಿಲ್ಲಾಪಂಚಾಯಿತಿ ಸದಸ್ಯರಾದ ಓ. ಮಂಜುನಾಥ, ತಳಕು ಮತ್ತು ನಾಯಕನಹಟ್ಟಿ ಮಂಡಲ ಅಧ್ಯಕ್ಷರಾದ ಈ. ರಾಮರೆಡ್ಡಿ, ಮಾಜಿ ತಳಕು ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಓಬಳೇಶ್, ರಾಮದಾಸ್, ಚನ್ನಗಾನಹಳ್ಳಿ ಮಲ್ಲೇಶ್, ಗೋವಿಂದಪ್ಪ, ಕೆ.ಟಿ.ಸ್ವಾಮಿ, ಸಿ.ಬಿ.ಮೋಹನ್, ಪ್ರಕಾಶ್‌ರೆಡ್ಡಿ, ರೂಪ ಹಿರೇಹಳ್ಳಿ, ಚಿತ್ರದುರ್ಗದ ಸೋಮು, ಪಾಪೇಶ್‌ನಾಯಕ, ಮಹಂತಣ್ಣ, ಎಂ.ವೈ.ಟಿ.ಸ್ವಾಮಿ, ನಾಗರಾಜ್, ಬೊಸೆರಂಗಪ್ಪ ಹಾಗೂ ಬಿಜೆಪಿ ಮುಖಂಡರು, 16 ವಾರ್ಡಿನ ಬೆಂಬಲಿತ ಅಭ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post