ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲೂಕಿನ ಜನತೆಗೆ ಕೊವಿಡ್ ಲಸಿಕೆ ಹಾಕಿಸುವುದರ ಮೂಲಕ ಕೋವಿಡ್ ಮುಕ್ತ ತಾಲೂಕಾಗಿ ಮಾಡಬೇಕು ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಕರೆ ನೀಡಿದರು.
ಅವರು ನಗರದ ರೋಟರಿ ಬಾಲ ಭವನದಲ್ಲಿ ಆಯೋಜಿಸಿದ್ದ ಸರಕಾರದ ಫ್ರಂಟ್ ಲೈನ್ ವರ್ಕರ್‍ಸ್‌ಗಳಿಗೆ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಒಟ್ಟಾರೆ 3341 ವಿವಿಧ ಅಧಿಕಾರಿಗಳಿಗೆ ಮೊದಲ ಹಂತದ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು. ಆದ್ದರಿಂದ ಮೊದಲು ಅಧಿಕಾರಿಗಳು ಸನ್ನದ್ಧರಾಗಿ ನಂತರ ಸಾರ್ವಜನಿಕರ ರಕ್ಷಣೆಗೆ ಮುಂದಾಗಿ, ತಾಲೂಕಿನಲ್ಲಿ ಈಗಾಗಲೇ ಕೊವಿಡ್ ಲಸಿಕೆ ಸುಮಾರು ಮೊದಲ ಹಂತದಲ್ಲಿ ಶೇ.95ರಷ್ಟು ಹಾಗೂ ಎರಡನೇ ಹಂತದ ಲಸಿಕೆ ಶೇ.76 ರಷ್ಟು ಪ್ರಗತಿ ಕಂಡಿದೆ. ಇನ್ನೂ 15 ರಿಂದ 18 ವರ್ಷದ ವಯೋಮಾನದ ಮಕ್ಕಳಿಗೆ ಲಸಿಕೆ ತಾಲೂಕಿನಲ್ಲಿ ಒಟ್ಟಾರೆ 11950 ಜನ ಮಕ್ಕಳು ಇದ್ದಾರೆ ಅದರಲ್ಲಿ 9561 ಮಕ್ಕಳು ಈಗಾಗಲೇ ಲಸಿಕೆ ಪಡೆದಿದ್ದಾರೆ ಎಂದರು.
ತಾಲೂಕಿನಲ್ಲಿ 10144 ಹಿರಿಯ ನಾಗರೀಕರು, 320 ಆಶಾ ಕಾರ್ಯಕರ್ತರು, 370 ಅಂಗನವಾಡಿ ಕಾರ್ಯಕರ್ತರು, 442 ಖಾಸಗಿ ಕ್ಲಿನಿಕ್ ಸಿಬ್ಬಂದಿ, 186 ಕಂದಾಯ ಅಧಿಕಾರಿಗಳು, 168 ಪೊಲೀಸ್ ಇಲಾಖೆ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿ 845, ಹಾಗೂ ನಗರಸಭೆ ಸಿಬ್ಬಂದಿ 144 ಅಧಿಕಾರಿ ವರ್ಗ ಈ ಬೂಸ್ಟರ್ ಡೋಸ್ ಲಸಿಕೆ ಪಡೆಯುತ್ತಾರೆ. ಇಂದು ಲಸಿಕೆ ಪಡೆದ ಒಟ್ಟಾರೆ 273 ದಿನಗಳು ಆಗಿರುವ ಪ್ರತಿಯೊಬ್ಬ ನೌಕರರು ಲಸಿಕೆ ಪಡೆಯಬೇಕಾಗಿದೆ. ತಾಲೂಕಿನಲ್ಲಿ ಈಗಾಗಲೇ ಕೊವಿಡ್ ಲಸಿಕೆ ಸುಮಾರು ಮೊದಲ ಹಂತದಲ್ಲಿ ಶೇ.95ರಷ್ಟು ಹಾಗೂ ಎರಡನೇ ಹಂತದ ಲಸಿಕೆ ಶೇ. 76ರಷ್ಟು ಪ್ರಗತಿ ಸಾಧಿಸಿದೆ. ಇನ್ನೂ 15 ರಿಂದ 18 ವರ್ಷದ ವಯೋಮಾನದ ಮಕ್ಕಳಿಗೆ ಲಸಿಕೆ ತಾಲೂಕಿನಲ್ಲಿ ಒಟ್ಟಾರೆ 11950 ಜನ ಮಕ್ಕಳು ಇದ್ದಾರೆ ಅದರಲ್ಲಿ 9561 ಮಕ್ಕಳು ಈಗಾಗಲೇ ಲಸಿಕೆ ಹಾಕಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಆರೊಗ್ಯಾಧಿಕಾರಿ ಡಾ. ಪ್ರೇಮಸುಧಾ, ಆರೋಗ್ಯ ಸಹಾಯಕ ಕುದಾಪುರ ತಿಪ್ಪೆಸ್ವಾಮಿ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post