No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಾಮರಾಜನಗರ

ಶೃಂಗೇರಿ ಶ್ರೀಗಳ ವರ್ಧಂತಿ: ಅರ್ಥಪೂರ್ಣವಾಗಿ ಆಚರಿಸಿದ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ

ಚಾಮರಾಜನಗರದ ವಿಪ್ರರಿಗೆ ಯಜ್ಞೋಪವೀತ, ಸಂಧ್ಯಾವಂದನೆಯ ಪುಸ್ತಕದ ಕಿಟ್ ವಿತರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 22, 2023
in ಚಾಮರಾಜನಗರ
0
ಶೃಂಗೇರಿ ಶ್ರೀಗಳ ವರ್ಧಂತಿ: ಅರ್ಥಪೂರ್ಣವಾಗಿ ಆಚರಿಸಿದ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  |

ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಕಿರಿಯ ಸ್ವಾಮೀಜಿ ವಿಧುಶೇಖರ ಭಾರತಿ ಶ್ರೀಗಳ #VidhushekharaBharatiSwamiji ವರ್ಧಂತಿ ಮಹೋತ್ಸವವನ್ನು ಮೈಸೂರಿನ #Mysore ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಾದರಿಯಾಗಿದೆ.

ಚಾಮರಾಜನಗರದ #Chamarajanagar ಪಟ್ಟಾಭಿ ರಾಮಮಂದಿರದಲ್ಲಿ ನೆಡೆದ ವರ್ಧಂತಿ ಮಹೋತ್ಸವದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದಿಂದ ನೆರೆದಿದ್ದ 50ಕ್ಕೂ ಹೆಚ್ಚು ಬ್ರಾಹ್ಮಣರಿಗೆ #Brahmin ಉಪಾಕರ್ಮಕ್ಕೆ ಯಜ್ಞೋಪವೀತ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶೃಂಗೇರಿ #Sringeri ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕದ ಕಿಟ್ ವಿತರಣೆ ಮಾಡಲಾಯಿತು.
ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಆರ್. ಗಣೇಶ್ ಅವರು ಮಾತನಾಡಿ, ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿದಾನಂಗಳವರು ತಿಳಿಸಿದಂತೆ ಬ್ರಾಹ್ಮಣರಿಗೆ ಸಂಧ್ಯಾವಂದನೆಯೇ ಅತ್ಯಂತ ಪ್ರಮುಖವಾದುದು. ಅವರ ಅನುಗ್ರಹ ಸಂದೇಶವನ್ನು ಸ್ವೀಕರಿಸಿ ಚಾಮರಾಜನಗರದ ಕೂಡ್ಲೂರು ಗ್ರಾಮದ ಸ್ಥಳ ಪುರೋಹಿತರಾಗಿದ್ದ ಕೀರ್ತಿಶೇಷ ಗುಂಡಪ್ಪನವರ ಹೆಸರಿನಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಎಂದು ಸ್ಥಾಪಿಸಿ ಅದರ ಮೂಲಕ ಸಾಮಾಜಿಕ ಚಟುವಟಿಕೆ ಮಾಡಲು ಸಂಕಲ್ಪಿಸಿದೆ ಎಂದರು.

ಮೈಸೂರು #Mysore ಹಾಗೂ ಚಾಮರಾಜನಗರದಲ್ಲಿ ಮುಂಬರುವ ಋಗುಪಾಕರ್ಮದ #Upakarma ಪ್ರಯುಕ್ತ ಬ್ರಾಹ್ಮಣರಿಗೆ ಯಜ್ಞೋಪವೀತ, ಶೃಂಗೇರಿ ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶಾರದಾ ಮಾತೆಯ ಭಾವಚಿತ್ರ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ನೀಡಲಾಗಿದೆ ಎಂದರು.
ಪ್ರತಿಯೊಬ್ಬರು ಸಹ ಪ್ರತಿ ನಿತ್ಯ ಸಂಧ್ಯಾವಂದನೆ ಹಾಗೂ ಗಾಯತ್ರಿ ಜಪವನ್ನು ಮಾಡಬೇಕು. ಜಪ ತಪ ಧ್ಯಾನಗಳನ್ನು ಮಾಡುವುದರಿಂದ ಮನಸ್ಸನ್ನು ನಿಯಂತ್ರಣ ಮಾಡಬಹುದು. ಇಂದಿನ ಕಾಲದ ಔದ್ಯೋಗಿಕ ಹಾಗೂ ಸಾಮಾಜಿಕ ಒತ್ತಡಗಳಿಂದ ಸುಲಭವಾಗಿ ಹೊರಬರಲು ದೇಹ ಮತ್ತು ಮನಸ್ಸನ್ನು ಪ್ರಶಾಂತತೆ ಇಂದ ಇಡಲು ಸಂಧ್ಯಾವಂದನೆ #Sandhyavandanam ಅತ್ಯಂತ ಸಹಕಾರಿ. ಮನೆಯ ಮಕ್ಕಳಿಗೆ ನಾವೇ ಮಾದರಿ ನಾವು ಎಷ್ಟು ಧರ್ಮ ನಿಷ್ಠರಾಗಿ ಇರುತ್ತೇವೋ ಅದನ್ನೇ ಮಕ್ಕಳು ಕಲಿಯುತ್ತಾರೆ. ನಾವು ಪೂಜೆ ಪುನಸ್ಕಾರ ಸಂಸ್ಕಾರ ಸಂಸ್ಕೃತಿಗಳನ್ನು ಮನೆಯಲ್ಲಿ ಮಕ್ಕಳು ಸಹ ಕಲಿಯುತ್ತಾರೆ. ನಮ್ಮ ಸಂಸ್ಕಾರಗಳು ಅವಿಚ್ಛಿನ್ನವಾಗಿ ಮುಂದುವರೆಯುತ್ತದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳ ಪರಿಚಯವೇ ಇಲ್ಲದಂತಾಗುತ್ತದೆ ಎಂದರು.

ಧರ್ಮೋ ರಕ್ಷತಿ ರಕ್ಷಿತಾಃ ಎಂದು ಶಾಸ್ತ್ರ ಹೇಳುತ್ತದೆ ಅಂತಹ ಧರ್ಮವನ್ನು ನಾವು ದಿನನಿತ್ಯದ ಜೀವನದಲ್ಲಿ ಕಾಪಾಡಿಕೊಂಡರೆ ಆ ಧರ್ಮವೇ ನಮ್ಮನ್ನು ಕಾಪಾಡುತ್ತದೆ. ಇಲ್ಲಿ ಧರ್ಮವೆಂದರೆ ಉತ್ತಮ ಜೀವನ ಶೈಲಿ, ಉತ್ತಮವಾದ ಜೀವನ ಶೈಲಿ ರೂಢಿಸಿಕೊಂಡರೆ ಆ ಜೀವನ ಶೈಲಿಯೇ ನಮ್ಮನ್ನು ಕಾಪಾಡುತ್ತದೆ ಎಂಬುದೇ ಇದರ ಅರ್ಥ ಎಂದರು.
ಅಗತ್ಯ ಉಪಾಕರ್ಮ ಸಾಮಾಗ್ರಿಗಳನ್ನು ಒಳಗೊಂಡ ಈ ಕಿಟ್ ಅನ್ನು ಚಾಮರಾಜನಗರದ ರಾಮಮಂದಿರ ಹಾಗೂ ಬೆಂಗಳೂರಿನ ವಸುಂಧರಾ ಕೃಷ್ಣಾರ್ಷಯ ವಸತಿ ಸಂಕೀರ್ಣದ ಕೃಷ್ಣರತ್ನದಲ್ಲಿ ಹಾಗೂ ಮೈಸೂರಿನ ಆದರ್ಶ ಸೇವಾ ಸಂಘದ ಕಾರ್ಯಾಲಯದಲ್ಲಿ ಈಗಾಗಲೇ ವಿತರಿಸಲಾಗಿದೆ. ಉಪಾಕರ್ಮದ ಒಳಗೆ ಸುಮಾರು 500 ಕಿಟ್’ಗಳನ್ನು ವಿತರಿಸುವ ಯೋಜನೆ ಇದೆ ಎಂದು ತಿಳಿಸಿದರು.

ನಂಜನಗೂಡು #Nanjanagud ಶ್ರೀಕಂಠೇಶ್ವರ ದೇವಸ್ಥಾನದ ಆಗಮಿಕರಾದ ಶ್ರೀ ನೀಲಕಂಠ ದೀಕ್ಷಿತರು ಮಾತನಾಡಿ, ನಾವು ಬೆಳೆದ ಮೇಲೆ ಎಷ್ಟೊ ಸಣ್ಣ ವಿಚಾರಗಳನ್ನು ಮರೆಯುತ್ತೇವೆ. ಯಾವುದು ಸಣ್ಣ ವಿಚಾರವೆಂದು ಪರಿಗಣಿಸಿ ನಿರ್ಲಕ್ಷ ಮಾಡುತ್ತೇವೊ ಅದೇ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಪೂಜೆ, ಸಂಧ್ಯಾವಂದನೆ, ಧ್ಯಾನ ಹಾಗೂ ಜಪ ನಮ್ಮ ನಿತ್ಯ ಕಾಯಕವಾಗಬೇಕು ಎಂದು ತಿಳಿಸಿದರು.

ಪಟ್ಟಾಭಿ ರಾಮಮಂದಿರ ಟ್ರಸ್ಟ್ ಅಧ್ಯಕ್ಷರಾದ ಕೆ. ಬಾಲಸುಬ್ರಹ್ಮಣ್ಯಂ ಅವರು ಮಾತನಾಡಿ, ಯುವಕರು ತಮ್ಮ ಶಿಕ್ಷಣ, ಹವ್ಯಾಸ, ಉದ್ಯೋಗದ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳಬೇಕು. ಸನಾತಾನ ಸಂಸ್ಕೃತಿಯ ವಾರಸುದಾರರು ನೀವು ಯುವಕರು, ಧರ್ಮ, ಶಿಕ್ಷಣ, ಸಂಸ್ಕಾರ ವಿಚಾರಗಳನ್ನು ಜಗತ್ತಿಗೆ ತಿಳಿಸಲು ಚಾಮರಾಜನಗರದ ಪಟ್ಟಾಭಿ ರಾಮಮಂದಿರ ಯಾವಾಗಲೂ ಸಿದ್ದವಾಗಿರುತ್ತದೆ ಎಂದು ತಿಳಿಸಿದರು.
ಚಾಮರಾಜನಗರದ ಮುಖಂಡರಾದ ಲಕ್ಷ್ಮೀ ನರಸಿಂಹ ಅವರು ಮಾತನಾಡಿ, ಬ್ರಾಹ್ಮಣ ಸಮುದಾಯದ ಮಂದಿ ಇಂದು ಶಿಕ್ಷಣ, ಉದ್ಯೋಗದ ದೃಷ್ಟಿಯಿಂದ ವಲಸೆ ಹೋಗುತ್ತಿದ್ದಾರೆ. ವಲಸೆ ಹೋದವರು ಮತ್ತೆ ಮರಳಿ ಬಂದು ಅವರಿಗೆ ಗ್ರಾಮಗಳಲ್ಲಿ ಅವರಿಗೆ ಇದ್ದ ಧಾರ್ಮಿಕ ಜವಾಬ್ದಾರಿ ಮುಂದುವರೆಸಲು ಆಗುತ್ತಿಲ್ಲ. ಇದರಿಂದ ಸ್ಥಳೀಯವಾಗಿ ಧಾರ್ಮಿಕ ಚಟುವಟಿಕೆಗಳು ನಡೆಸಲು ಬೇರೆ ಊರುಗಳಿಂದ ಬರಬೇಕಾದ ಪರಿಸ್ಥಿತಿ ಇದೆ. ಯುವಕರು ಶಿಕ್ಷಣದೊಂದಿಗೆ ವೇದಾಧ್ಯಯನ, ಆಗಮ, ಜ್ಯೋತಿಷ್ಯ, ಶಾಸ್ತ್ರ, ಪುರಾಣಗಳ ವಿಚಾರಗಳನ್ನು ಸಹ ತಿಳಿಯಬೇಕು. ಇದರಿಂದ ಮುಂದಿನ ತಲೆಮಾರಿಗೆ ನಾವು ಸನಾತನ ಸಂಸ್ಕೃತಿಯನ್ನು ಉಳಿಸಬಹುದು ದಕ್ಷಿಣಾನ್ಮಯ ಶ್ರೀ ಶೃಂಗೇರಿ ಶಾರದಾ ಪೀಠ ನಮಗೆಲ್ಲ ಈ ವಿಚಾರದಲ್ಲಿ ಮಾದರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಂದಿರಮ್ಮ ಗುಂಡಪ್ಪ, ಕೆ.ಆರ್. ರಂಗರಾಜು, ಕೆ.ಆರ್. ಕೃಷ್ಣ, ಕೆ.ಆರ್. ನಾಗರಾಜ್, ಕೆ.ಆರ್. ಮಂಜು, ರಾಧಾ ಪ್ರೇಮ್ ಕುಮಾರ್, ವಿನಯ್, ನಿರಂಜನ್, ಕಾಶ್ಯಪ ಸಿಂಹ, ನಿರಂಜನ್, ಪುನೀತ್ ಹಾಗೂ ಕೂಡ್ಲೂರು ಗುಂಡಪ್ಪ ರವರ ಕುಟುಂಬ ವರ್ಗ, ಪಟ್ಟಾಭಿ ರಾಮಮಂದಿರದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯಂ ರವರು, ಭಾಜಪ ಮುಖಂಡರಾದ ಬಾಲಸುಬ್ರಹ್ಮಣ್ಯ, ಸೇವಾ ಭಾರತಿಯ ರಮೇಶ್, ಬ್ರಾಹ್ಮಣ ಮುಖಂಡರಾದ ಲಕ್ಷ್ಮೀ ನರಸಿಂಹ ಅವರು, ಚಾಮರಾಜನಗರದ ಯುವ ವೇದ ನಿಧಿ ಕಾರ್ತಿಕ್ ಭಾರದ್ವಾಜ್, ಫಲಾಶ ಭಾರದ್ವಾಜ್ ಹಾಗೂ ಶಂಕರಾಚಾರ್ಯರ ಪೀಠದ ಅಪಾರ ಭಕ್ತರು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BrahminChamarajanagaraKannada News WebsiteKoodluru Gundappa FoundationLatest News KannadamysoreSringeriUpakarmaVidhushekara Bharathi Swamijiಕೂಡ್ಲೂರು ಗುಂಡಪ್ಪ ಪ್ರತಿಷ್ಠಾನಚಾಮರಾಜನಗರಜಗದ್ಗುರು ವಿಧುಶೇಖರ ಭಾರತಿ ಶ್ರೀಬ್ರಾಹ್ಮಣಮೈಸೂರುಯಜ್ಞೋಪವೀತಶಂಕರಾಚಾರ್ಯಶೃಂಗೇರಿಸಂಧ್ಯಾವಂದನೆ
Share197Tweet123Send
Previous Post

ಪಠ್ಯಗಳಲ್ಲಿ ಜನಪದ ಸಾಹಿತ್ಯ ಅಳವಡಿಕೆ ಅಭಿನಂದನಾರ್ಹ: ಡಿ. ಮಂಜುನಾಥ

Next Post

ಶ್ರೀ ಭೀರಲಿಂಗೇಶ್ವರ ಜಾತ್ರೆ: ಮಾಜಿ ಶಾಸಕ ಬಂಡೆಪ್ಪ ಖಾಶೆಂಪುರ್ ವಿಶೇಷ ಪೂಜೆ ಸಲ್ಲಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶ್ರೀ ಭೀರಲಿಂಗೇಶ್ವರ ಜಾತ್ರೆ: ಮಾಜಿ ಶಾಸಕ ಬಂಡೆಪ್ಪ ಖಾಶೆಂಪುರ್ ವಿಶೇಷ ಪೂಜೆ ಸಲ್ಲಿಕೆ

ಶ್ರೀ ಭೀರಲಿಂಗೇಶ್ವರ ಜಾತ್ರೆ: ಮಾಜಿ ಶಾಸಕ ಬಂಡೆಪ್ಪ ಖಾಶೆಂಪುರ್ ವಿಶೇಷ ಪೂಜೆ ಸಲ್ಲಿಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

April 10, 2026
ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

April 10, 2026
ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

April 10, 2026
ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

April 10, 2026
ಖಾಲಿ ಹುದ್ದೆ ಭರ್ತಿ ಮಾಡದೇ ಯುವ ಜನತೆಗೆ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ NSUI ಪ್ರತಿಭಟನೆ 

ಖಾಲಿ ಹುದ್ದೆ ಭರ್ತಿ ಮಾಡದೇ ಯುವ ಜನತೆಗೆ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ NSUI ಪ್ರತಿಭಟನೆ 

April 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL