No Result
View All Result
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
English Articles

LinkedIn shares Bengaluru’s Top Companies for career growth in 2026

by ಕಲ್ಪ ನ್ಯೂಸ್
May 20, 2026
0

Kalpa Media House  |  India | LinkedIn, the world's largest professional network, today unveiled its 2026 Top Companies list for...

Read moreDetails
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
  • Advertise With Us
  • Grievances
  • About Us
  • Contact Us
Wednesday, May 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಾಮರಾಜನಗರ

ಒತ್ತಡ ನಿವಾರಣೆಗೆ ಅದ್ವೈತ ತತ್ವವೇ ಪರಿಹಾರ: ಸುರೇಶ್ ಋಗ್ವೇದಿ ಅಭಿಪ್ರಾಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 30, 2026
in ಚಾಮರಾಜನಗರ
0
ಒತ್ತಡ ನಿವಾರಣೆಗೆ ಅದ್ವೈತ ತತ್ವವೇ ಪರಿಹಾರ: ಸುರೇಶ್ ಋಗ್ವೇದಿ ಅಭಿಪ್ರಾಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  |

ಆಧುನಿಕ ಬದುಕಿನ ಗೊಂದಲಗಳಿಗೆ ಶ್ರೀ ಶಂಕರಾಚಾರ್ಯರ ಅದ್ವೈತ ತತ್ವದಲ್ಲಿ ಸರ್ವ ಪರಿಹಾರವಿದೆ. ಇಂದು ಮಾನವ ಅತಿ ಆಸೆ, ಸ್ಪರ್ಧೆ, ಒತ್ತಡ,ದ್ವೇಷ, ಅಸೂಯೆ ಮುಂತಾದ ಮಾನಸಿಕ ಒತ್ತಡಗಳ ನಡುವೆ ಬದುಕುತ್ತಿರುವ ನಮಗೆ ನಮ್ಮ ಒಳಗಿನ ಶಾಂತಿಯನ್ನು ಹೆಚ್ಚಿಸಿಕೊಂಡು ಅನಗತ್ಯ ಆಸೆಗಳಿಂದ ಮುಕ್ತಗೊಳಿಸಿ ಒಳಗಿನ ಸುಖವನ್ನು ಪಡೆಯುವ ಅದ್ವೈತ ತತ್ವ ಎಲ್ಲಾ ಒತ್ತಡಗಳಿಗೆ ಮದ್ದು ಎಂದು ಉಪನ್ಯಾಸಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ರಾಜಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಶಂಕರರು ಪ್ರತಿಯೊಬ್ಬ ಮನುಷ್ಯನಿಗೂ ನೀನು ಸಾಮಾನ್ಯನಲ್ಲ,ನೀನೆ ಆ ದೈವದ ಅಂಶ ಎಂಬ ಆತ್ಮವಿಶ್ವಾಸವನ್ನು ತುಂಬಿ ಸಮಭಾವದ ಮಾನಸಿಕ ಶ್ರೇಷ್ಠ ಗುಣವನ್ನು ಬೆಳೆಸಿದವರು. ಪ್ರತಿಯೊಂದು ಕ್ಷಣವನ್ನು ಪೂರ್ಣ ಅರಿವಿನಿಂದ ಬದುಕಬೇಕು. ಜಾಗೃತ ಸ್ಥಿತಿಯ ಬಗ್ಗೆ ಸಾಕ್ಷಿ ಪ್ರಜ್ಞೆಯಿಂದ ಬದುಕನ್ನು ಹಸನಗೊಳಿಸಿಕೊಳ್ಳಬೇಕು. ಅದ್ವೈತ ತತ್ವ ಅಹಂ ಬ್ರಹ್ಮಾಸ್ಮಿ ನಾನೇ ಬ್ರಹ್ಮ ಎಂಬ ಚಿಂತನೆಯ ಮೂಲಕ ಜಗತ್ತು ಅದ್ವೈತ ತತ್ವದ ಮೂಲ ಚಿಂತನೆಯ ಬಗ್ಗೆ ಅಪಾರ ಸಂಶೋಧನೆಯನ್ನು ಹೊಸ ವಿಚಾರಧಾರೆಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಭಾರತದ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ಆದಿ ಗುರು ಶಂಕರರು ತೀಕ್ಷ್ಣ ಬುದ್ಧಿ, ದೂರ ದೃಷ್ಟಿ, ಆಳವಾದ ಆಲೋಚನೆ,ಹರಿತವಾದ ಜ್ಞಾನವನ್ನು ಹೊಂದಿದ ಪರಿಣಾಮವಾಗಿ ತಮ್ಮ 32 ವರ್ಷದಲ್ಲಿ ಅಖಂಡ ಭಾರತವನ್ನು ಮೂರು ಬಾರಿ ಸುತ್ತಿ 4 ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ, 4 ವೇದಗಳನ್ನು ಸಂರಕ್ಷಿಸಿ, ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ಬರೆದು ಜನಸಾಮಾನ್ಯರು ವೇದವನ್ನು ವೇದಾಂತವನ್ನು ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದ ಮಹಾಜ್ಞಾನಿ. ಶಂಕರರ ಜನ್ಮ ದಿನವನ್ನು ಭಾರತ ಸರ್ಕಾರ, ಕರ್ನಾಟಕ ಸರ್ಕಾರ ವಿಶ್ವ ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸುವ ಮೂಲಕ ಗೌರವ ನೀಡುತ್ತಿರುವುದು

ಅಭಿನಂದನೀಯವೆಂದರು.ಶಂಕರರು ಸಾಹಿತ್ಯ,ಸಾಂಸ್ಕೃತಿಕ, ಆಧ್ಯಾತ್ಮಿಕ,ರಾಷ್ಟ್ರೀಯ ಏಕತೆಯ ಹರಿಕಾರರು. ಅವರ ನೂರಾರು ಶ್ಲೋಕಗಳು,ಸ್ತೋತ್ರಗಳು ಮಾನವನ ಬದುಕಿಗೆ ಸದಾ ಕಾಲ ಉಸಿರಾಗಿದೆ. ಇತಿಹಾಸ ಇರುವವರೆಗೂ ಶ್ರೀ ಶಂಕರಾಚಾರ್ಯರು ಮತ್ತು ಅವರ ಅದ್ವೈತ ತತ್ವ ಶಾಶ್ವತವಾಗಿ ಇರುತ್ತದೆ. ಕನಕದಾರ ಸ್ತೋತ್ರ ಶಿವಾನಂದ ಲಹರಿ,ಸೌಂದರ್ಯ ಲಹರಿ,ಮೋಹ ಮುದ್ಗರ, ವಿವೇಕ ಚೂಡಾಮಣಿ, ಭಜ ಗೋವಿಂದ ಸ್ತೋತ್ರಗಳು ಮಾನವನ ಅಂತರಂಗದ ಶುದ್ದಿಗಾಗಿ ನೀಡಿದ ಮಹಾನ್ ಸಾಹಿತ್ಯವಾಗಿದೆ ಎಂದು ಋಗ್ವೇದಿ ತಿಳಿಸಿದರು.
ಉದ್ಘಾಟನೆಯನ್ನು ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಉದ್ಘಾಟಿಸಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉದ್ಘಾಟಿಸುವ ಪುಣ್ಯ ದೊರೆತಿರುವುದು ನಮ್ಮ ಸೌಭಾಗ್ಯ. ಸರ್ವರನ್ನು ಒಂದುಗೂಡಿಸಿ ಏಕತೆಯಿಂದ ಬಾಳಬೇಕು ಎಂಬ ದಿವ್ಯ ಸಂದೇಶವನ್ನು ಶಂಕರಾಚಾರ್ಯರು ಹೇಳಿದ್ದಾರೆ. ದೇಶಾದ್ಯಂತ ಸಂಚರಿಸಿ ಅದ್ವೈತ ತತ್ವವನ್ನು ಬೋಧಿಸಿದ್ದಾರೆ. ಅದರ ಸಾರವನ್ನು ತಿಳಿಯುವ ಪ್ರಯತ್ನ ಮಾಡೋಣ. ಎಲ್ಲರೂ ಸಂತೋಷದಿಂದ ಇರುವ ಸಮಾಜವನ್ನು ನಿರ್ಮಿಸೋಣ ಎಂದರು.

ಅಧ್ಯಕ್ಷತೆಯನ್ನು ಜಿಲ್ಲಾ ಅಪರ ಜಿಲ್ಲಾಧಿಕಾರಿ ಜವರೇಗೌಡರವರು ವಹಿಸಿ ಆದಿಶಂಕರರ ಅದ್ವೈತ ತತ್ವ ಎರಡಲ್ಲದ್ದು ಅಂದರೆ ಒಂದೇ. ಜೀವ ಮತ್ತು ಪರಮಾತ್ಮ ಬೇರೆ ಬೇರೆ ಎಲ್ಲ ಅವೆರಡು ಒಂದೇ ಎಂಬ ಅದ್ವೈತ ತತ್ವವನ್ನು ಬೋಧಿಸಿದ ಮಹಾನ್ ತತ್ವಜ್ಞಾನಿ. ಭಾರತೀಯ ಚಿಂತನಾಕ್ರಮವನ್ನು ಬೋಧಿಸಿದ ಶಂಕರರ ತತ್ವಗಳ ಅಧ್ಯಯನ ಎಲ್ಲರಿಗೂ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಜಿ ಎಂ ಹೆಗಡೆ,ಬಾಲಸುಬ್ರಹ್ಮಣ್ಯ, ಸುರೇಶ್ ಎನ್ ಋಗ್ವೇದಿ, ಮಾಜಿ ನಗರಸಭಾ ಸದಸ್ಯ ರಾದ ಮಮತಾ, ಗಾಯತ್ರಿ, ಶಾಂತಲಾ ಕನ್ನಡ ಹೋರಾಟಗಾರ ಶ್ರೀನಿವಾಸ ಗೌಡ,ಜಿಲ್ಲಾಧಿಕಾರಿ ಕಚೇರಿಯ ರಂಗರಾಜು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಜು ಮತ್ತು ಜಿಲ್ಲಾ ಪಂಚಾಯತಿಯ ಶ್ರೀಕಂಠ ರಾಜ ಅರಸ್ ಉಪಸ್ಥಿತರಿದ್ದರು.

ಶ್ರೀ ಶಂಕರಾಚಾರ್ಯರ ಬಗ್ಗೆ ಮುಖ್ಯ ಭಾಷಣ ನೆರವೇರಿಸಿದ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಯವರಿಗೆ ಜಿಲ್ಲಾಡಳಿತದ ಮೂಲಕ ಗೌರವಿಸಿ ಸನ್ಮಾನಿಸಲಾಯಿತು.

ಶ್ರೀ ಶಂಕರಾಚಾರ್ಯರ ಭವ್ಯ ಮೆರವಣಿಗೆ

ಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಬೆಳ್ಳಿರಥದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರ ನಾದಸ್ವರ ವೇದ ಘೋಷದೊಡನೆ ಡಾ. ರಾಜಕುಮಾರ್ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: ChamarajanagaraKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಚಾಮರಾಜನಗರ
Share198Tweet124Send
Previous Post

ಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು: ಉಮ್ಮತ್ತೂರು ಇಂದುಶೇಖರ್

Next Post

ನಾಳೆಯಿಂದ ಇಂಡಿಗೋ ವಿಮಾನ ಹಾರಾಟ ಸ್ಥಗಿತ: ಸಂಸದ ರಾಘವೇಂದ್ರ ಹೇಳಿದ್ದೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಾಳೆಯಿಂದ ಇಂಡಿಗೋ ವಿಮಾನ ಹಾರಾಟ ಸ್ಥಗಿತ: ಸಂಸದ ರಾಘವೇಂದ್ರ ಹೇಳಿದ್ದೇನು?

ನಾಳೆಯಿಂದ ಇಂಡಿಗೋ ವಿಮಾನ ಹಾರಾಟ ಸ್ಥಗಿತ: ಸಂಸದ ರಾಘವೇಂದ್ರ ಹೇಳಿದ್ದೇನು?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
GE Aerospace to Invest ₹100 Crore in Pune Facility, Boosting India Manufacturing

ಪುಣೆಯ 100 ಕೋಟಿ ಹೂಡಿಕೆಯೊಂದಿಗೆ ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವೇಗಗೊಳಿಸಲು ಮುಂದಾಗಿರುವ GE ಏರೋಸ್ಪೇಸ್

May 20, 2026
ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

May 20, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
ಕರ್ನಾಟಕಕ್ಕೆ ದೇವೇಗೌಡರ ನಿರಂತರ ಸೇವೆ ಅವಿಸ್ಮರಣೀಯ: ಸುರೇಶ್ ಋಗ್ವೇದಿ

ಕರ್ನಾಟಕಕ್ಕೆ ದೇವೇಗೌಡರ ನಿರಂತರ ಸೇವೆ ಅವಿಸ್ಮರಣೀಯ: ಸುರೇಶ್ ಋಗ್ವೇದಿ

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL