ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಪ್ಪಟ ಕನ್ನಡ ಭಾಷೆ ಬಳಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಪರಿಸರ, ಜನಪದ, ಅರಣ್ಯ ಕ್ಷೇತ್ರಗಳ ಸಂರಕ್ಷಣೆ ಕನ್ನಡಿಗರ ಅಭಿಮಾನ ಜಾಗೃತಿಯಿಂದ ಉಳಿದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಉಪನ್ಯಾಸಕರವಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಅಮಚವಾಡಿ ಸರ್ಕಾರಿ ಸಮುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ #Kannada Rajyothsava ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಉಪನ್ಯಾಸಕರಾದ ರಮೇಶ್ ರವರು ಮಾತನಾಡಿ ಕನ್ನಡದ ಇತಿಹಾಸ ,ರಾಜಕೀಯ, ಸಾಂಸ್ಕೃತಿಕ ,ಆರ್ಥಿಕ ವೈವಿಧ್ಯತೆಗಳ ವಿವರಣೆಯನ್ನು ನೀಡಿ ಪ್ರತಿ ಹಂತದಲ್ಲೂ ಕನ್ನಡ ಭಾಷೆಯ ಬೆಳವಣಿಗೆಗೆ ನಮ್ಮೆಲ್ಲರ ಶ್ರಮ ಅಗತ್ಯವೆಂದರು.
ಹಿರಿಯ ಉಪನ್ಯಾಸಕರಾದ ಮೂರ್ತಿರವರು ಕನ್ನಡ ಗೀತೆಗಳನ್ನು ಹಾಡಿದರು. ಉಪನ್ಯಾಸಕರಾದ ಬಸವಣ್ಣ, ಸುರೇಶ್ , ದೊಡ್ಡಮ್ಮಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಿವನಂಜಪ್ಪ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post