ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಜಿಲ್ಲೆಯ ಕೂಡ್ಲೂರಿನಲ್ಲಿ ಪ್ರತಿವರ್ಷ ಯುಗಾದಿ ವೇಳೆ ಆಚರಿಸುವ ಗ್ರಾಮ ದೇವತೆಗಳ ಮೆರವಣಿಗೆಯ ಜಾತ್ರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನೆರವೇರಿತು.
ಗ್ರಾಮದಲ್ಲಿ ದೇವತೆಗಳ ಸತ್ತಿಗೆ (ದೇವರ ಛತ್ರ ಚಾಮರಾದಿಗಳು) ಮೆರವಣಿಗೆಯನ್ನು ಪ್ರತಿ ಬೀದಿಗಳಲ್ಲೂ ನಡೆಸಲಾಗುತ್ತದೆ. ಪ್ರಾತಃ ಕಾಲ ಸುವರ್ಣಾವತಿ ಹಾಗೂ ಚಿಕ್ಕ ಹೊಳೆಯ ಸಂಗಮ ಸ್ಥಳವಾದ ಕೂಡ್ಲೂರಿನಲ್ಲಿ ಗಂಗಾ ಪೂಜೆ ಹಾಗೂ ಗ್ರಾಮದೇವತೆ ಆವಾಹನೆ ಮಾಡಿ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು.
ಊರಿನ ಪ್ರತಿ ಬೀದಿಯಲ್ಲೂ ಉತ್ಸವ ಸಂಚರಿಸುವುದರಿಂದ ಎಲ್ಲಾ ಮನೆಗಳ ಮುಂದೆ ಸಾಧಿಸಿ ರಂಗೋಲಿಯಿಂದ ಅಲಂಕರಿಸಿ ಪೂಜೆ ಸಲ್ಲ್ಲಿಸಲಾಯಿತು. ಮೆರವಣಿಗೆಯಲ್ಲಿ ಯುವಶರಣರು ಪ್ರತಿ ಮನೆ-ಮನೆಯಲ್ಲೂ ಸಾಂಪ್ರದಾಯಿಕವಾಗಿ ಭಿಕ್ಷಾಟನೆ ನಡೆಸಿದರು.
ಅಪರೂಪದ ಖಡ್ಗ ಸೇವೆ ಹಾಗೂ ಕತ್ತಿ ಪವಾಡ:
ಈ ಊರಿನ ಜಾತ್ರೆಯ ವಿಶೇಷವೆಂದರೆ ಖಡ್ಗ ಸೇವೆ ಹಾಗೂ ಕತ್ತ ಪವಾಡ. ದೇವಾಲಯದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕತ್ತಿ ಪವಾಡವೆಂಬ ವಿಶೇಷ ಕಲೆಯ ಪ್ರದರ್ಶನ ನಡೆಯುತ್ತದೆ. ಹರಿತವಾದ ಖಡ್ಗಗಳನ್ನು ಹಿಡಿದು ವಿಶೇಷ ಜಾನಪದ ಕಲಾ ಪ್ರದರ್ಶನ ನಡೆಸುವ ಭಕ್ತರು, ದೇವಿಗೆ ಇದನ್ನು ಸಮರ್ಪಿಸುತ್ತಾರೆ. ಇದಾದ ನಂತರ ನಿಯೋಜಿತ ಭಕ್ತರಿಬ್ಬರ ತಲೆಯ ಮೇಲೆ ಎಳನೀರನ್ನು ಹೊಡೆದು ಅದರ ನೀರು ಹೊರಬರುತ್ತದೆ. ಆಶ್ಚರ್ಯವೆಂದರೆ ಎಳನೀರನ್ನು ಹೊಡೆಸಿಕೊಂಡವಿಗೆ ನೋವಾಗಲಿ… ಗಾಯವಾಗಲಿ ಆಗದೆ ಸ್ವಾಭಾವಿಕವಾಗಿರುತ್ತಾರೆ.
Also read: ಭದ್ರಾವತಿ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಇನ್ಫೋಸಿಸ್ ಸುಧಾ ನಾರಾಯಣಮೂರ್ತಿ ಭೇಟಿ
ಇದೆಲ್ಲದರ ಜೊತೆ ಮಕ್ಕಳ ಆಟಿಕೆ, ಕುದುರೆ ಮುಂತಾದ ಮಕ್ಕಳ ಆಕರ್ಷಕ ಆಟಗಳು ಇರುತ್ತವೆ, ಎಂದಿನಂತೆ ಜಾತ್ರೆ ಗ್ರಾಹಕರಿಗೆ ಪುರಿ ಬತಾಸು ತಿಂಡಿ ತಿನಿಸುಗಳನ್ನು ಮಾರುತ್ತಾರೆ. ಒಟ್ಟಾರೆ ಗ್ರಾಮಸ್ಥರು ಒಟ್ಟಿಗೆ ಎಲ್ಲರನ್ನೂ ಸೇರಿಸಿ, ಹಬ್ಬ ಜಾತ್ರೆ ಆಚರಿಸುವುದು ವಾಡಿಕೆ ಹಾಗೂ ಸಂಪ್ರದಾಯವಾಗಿದೆ.
ಪುನೀತ್ ಭಾವಚಿತ್ರ ಪ್ರದರ್ಶಿಸಿದ ಅಭಿಮಾನಿ:
ಪುನೀತ್ ರಾಜಕುಮಾರ್ ಅಭಿಮಾನಿ ಶ್ರೇಯಸ್ .ಕೆ ರವರು ಕೂಡ್ಲೂರು ಗ್ರಾಮದ ಜಾತ್ರೆಯಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರ ಪ್ರದರ್ಶಿಸಿ ತಮ್ಮ ಅಭಿಮಾನ ತೋರಿಸಿ ಗಮನಸೆಳೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post