ಕಲ್ಪ ಮೀಡಿಯಾ ಹೌಸ್ | ಚಂಡೀಗಢ |
ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತಪಟ್ಟ ಗಾಯಕ ಸಿಧು ಮೂಸೆವಾಲಾ Sidhu Mosevala ಅವರ ದೇಹದೊಳಗೆ ಬರೋಬ್ಬರಿ 19 ಗುಂಡುಗಳು ಹೊಕ್ಕಿರುವುದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.
ಸಿಧು ಮೂಸೆವಾಲಾ ಎಂದೇ ಖ್ಯಾತರಾಗಿದ್ದ ಶುಭ್ ದೀಪ್ ಸಿಂಗ್ ಸಿಧು ಅವರ ಮೇಲೆ ಕಳೆದ ಭಾನುವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದಿದ್ದರು. ಐವರು ವೈದ್ಯರ ತಂಡ ಮೂಸೆವಾಲಾ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಗುಂಡುಗಳು ಅವರ ದೇಹ ಹೊಕ್ಕ 15 ನಿಮಿಷಗಳಲ್ಲೇ ಸಿಧು ಸಾವನ್ನಪ್ಪಿದ್ದಾರೆ ಎಂದು ಅವರ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.
Also read: ಸಿಇಟಿ ಪರೀಕ್ಷೆ ಎದುರಿಸುವುದು ಹೇಗೆ? ಜೂ.6, 7ರಂದು ಶಿಕ್ಷಣ ತಜ್ಞರಿಂದ ಮಾಹಿತಿ ಕಾರ್ಯಾಗಾರ
ಸಿಧು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ನೀಡಿದ್ದ ಭದ್ರತೆಯನ್ನು ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಹಿಂಪಡೆಯುತ್ತಿದ್ದಂತೆ ಭಾನುವಾರ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಮೃತಪಟ್ಟಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post