ಕಲ್ಪ ಮೀಡಿಯಾ ಹೌಸ್ | ಚಂಡೀಗಢ |
ವಿವಾಹಿತ ಉದ್ಯಮಿಯೊಬ್ಬ ಲಿವ್ ಇನ್ ಸಂಬಂಧದಲ್ಲಿದ್ದ #Live in Relation ಗೆಳತಿಯನ್ನು ಚಾಕುವಿನಿಂದ ಇರಿದು ಕೊಂದು, ಹೆಣವನ್ನು ಸುಟ್ಟು ಹಾಕಿರುವ ಘಟನೆ ಹರಿಯಾಣದ ಸೋನಿಪನ್’ನಲ್ಲಿ ನಡೆದಿದೆ.
ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.
ಕೊಲೆಯಾದ ಮಹಿಳೆಯನ್ನು #Women Murder ಸರಿತಾ ಹಾಗೂ ಕೊಲೆ ಆರೋಪಿಯನ್ನು ಸಿವಿಲ್ ಲೈನ್ಸ್ ಪ್ರದೇಶದ ರಿಷಿ ಕಾಲೋನಿಯಲ್ಲಿ ಉಪಕಾರ್ ಎಂದು ಗುರುತಿಸಲಾಗಿದೆ.
Also read: ಬೆಂಗಳೂರು | ಪಾರ್ಕ್’ನಲ್ಲಿ ಮಲಗಿದ್ದ ವೇಳೆ ಮರ ಬಿದ್ದು ವ್ಯಕ್ತಿ ಸಾವು
ಮೃತ ಸರಿತಾ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಳು. ಈಕೆ ಪತಿಯಿಂದ ಬೇರ್ಪಟ್ಟು 6 ವರ್ಷಗಳಿಂದ ಉದ್ಯಮಿಯೊಂದಿಗೆ ವಾಸಿಸುತ್ತಿದ್ದಳು ಎಂದು ವರದಿಯಾಗಿದೆ.
ಅಲ್ಲದೇ ಉಪಕಾರ್ ಲಿವಿ-ಇನ್ ಸಂಬಂಧ ಬಗ್ಗೆ ಆತನ ಪತ್ನಿಗೆ ತಿಳಿದಿತ್ತು. ಸರಿತಾ ಕೂಡ 2004ರಲ್ಲೇ ತನ್ನ ಪತಿಗೆ ವಿಚ್ಛೇದನ ನೀಡಿದ್ದಳು.
ಇಬ್ಬರೂ ಕಳೆದ 6 ವರ್ಷಗಳಿಂದ ಲಿವ್-ಇನ್ ರಿಲೇಷನ್’ನಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post