ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉದ್ಯಾನವನದಲ್ಲಿ ಮಲಗಿದ್ದ ವೇಳೆ ಬೃಹತ್ ಮರವೊಂದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ರಾಜಾಜಿನಗರದ ನವರಂಗ್ ಬಳಿಯಿರುವ ಪಾಲಿಕೆ ಪಾರ್ಕ್’ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಲಕ್ಷ್ಮಣ್(31) ಎಂದು ಗುರುತಿಸಲಾಗಿದೆ.
Also read: ಕಾಂತಾರ-1 ಚಿತ್ರದ ಶೂಟಿಂಗ್’ಗೆ ತೆರಳುತ್ತಿದ್ದ ಬಸ್ ಅಪಘಾತ | 6 ಜನರಿಗೆ ಗಂಭೀರ ಗಾಯ
ಮೃತ ಲಕ್ಷ್ಮಣ್ ಪಾಲಿಕೆಯ ಕಸದ ಗಾಡಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಭಾನುವಾರ ಸಂಜೆ ಕೆಎಎಲ್‌ಇ ಮೈದಾನದ ಬಳಿ ಇರುವ ಬಿಬಿಎಂಪಿ ಪಾರ್ಕ್’ನಲ್ಲಿ ಮಲಗಿದ್ದ ವೇಳೆ ಬೃಹತ್ ಮರ ಬಿದ್ದಿದೆ.
ಮರ ಬಿದ್ದ ಪರಿಣಾಮ ಲಕ್ಷ್ಮಣ್ ಎದೆ ಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post