ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಗ್ರಾಹಕ ಸಹಕಾರದಿಂದ ಕೆನರಾ ಬ್ಯಾಂಕ್ ಶಾಖೆಯು ದೇಶದಲ್ಲಿ 20 ಲಕ್ಷ ಕೋಟಿಗಿಂತ ಅಧಿಕ ಪ್ರಮಾಣದಲ್ಲಿ ವ್ಯವಹಾರ ನಡೆಯುತ್ತಿದೆ ಎಂದು ಶಿವಮೊಗ್ಗ ಕೆನರಾ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂದೀಪ್ ರಾವ್ ಹೇಳಿದರು.
ಚಂದ್ರಗುತ್ತಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ 80 ಕೆನರಾ ಬ್ಯಾಂಕ್ ಶಾಖೆ ಹೊಂದಿದ್ದು ಹತ್ತು ಸಾವಿರ ಕೋಟಿಗೂ ಮೀರಿ ಜನವರಿ ತಿಂಗಳಿನಲ್ಲಿ ವ್ಯವಹಾರ ನಡೆದಿದೆ. ಎಲ್ಲಾ ಗ್ರಾಹಕರ ಆಶೀರ್ವಾದದಿಂದ ಕೆನರಾ ಬ್ಯಾಂಕ್ ಶಾಖೆ ಮುಂದುವರಿಯುತ್ತಿದೆ ಎಂದರು.
ಚಂದ್ರಗುತ್ತಿಯಲ್ಲಿ ಕೆನರಾ ಬ್ಯಾಂಕ್ ಪ್ರಾರಂಭಿಸಿ 40 ವರ್ಷವಾಗಿದ್ದು 65 ಕೋಟಿ ವ್ಯವಹಾರ ನಡೆದಿದೆ. ಗ್ರಾಹಕರ ಕುಂದು ಕೊರತೆಯನ್ನು ಸರಿಪಡಿಸಿ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕಿನ ಆರ್ಥಿಕ ಪ್ರಗತಿ ಹೆಚ್ಚಿಸಲು ಬ್ಯಾಂಕಿನ ಸಿಬ್ಬಂದಿ ಸಹಕರಿಸಬೇಕು. ಕೆನರಾ ಬ್ಯಾಂಕಿನ ಸಿ.ಎಸ್.ಆರ್. ವೇತನದಲ್ಲಿ ಕೆನರಾ ವಿದ್ಯಾ ಜ್ಯೋತಿ ವೇತನ ಪ್ರಾರಂಭಿಸಿದ್ದೇವೆ. ಸರ್ಕಾರಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಹೆಣ್ಣು ಮಕ್ಕಳಿಗೆ ಶಾಲೆಯ ಶಿಕ್ಷಕರು ನಿರ್ಧರಿಸುವವರೆಗೆ ಕೆನರಾ ವಿದ್ಯಾ ಜ್ಯೋತಿ ವೇತನ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಸಿ.ಎಸ್.ಆರ್ ರೀತಿಯ ಇತರೆ ಅಭಿವೃದ್ಧಿ ಯೋಜನೆಗಳನ್ನು ಕೆನರಾ ಬ್ಯಾಂಕ್ ಒದಗಿಸುತ್ತಿದೆ. ಯಾವುದೇ ಕುಂದು ಕೊರತೆಗಳು ಇದ್ದಲ್ಲಿ ಅದನ್ನು ನಮ್ಮ ಶಾಖೆಯವರು ನಿಮ್ಮ ಸಮಸ್ಯೆಯನ್ನು ಗಮನಿಸಿ ಶೀಘ್ರವಾಗಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ನಿಮ್ಮೆಲ್ಲರ ಸಹಕಾರ ನಮಗೆ ಬಹುಮುಖ್ಯ, ಎಂದರು.
ಗ್ರಾಂ.ಪಂ. ನಿಕಟಪೂರ್ವ ಅಧ್ಯಕ್ಷ ರತ್ನಾಕರ್ ಎಂ.ಪಿ. ಮಾತನಾಡಿ ಕೆನರಾ ಬ್ಯಾಂಕ್ ಈ ಒಂದು ಮಟ್ಟಕ್ಕೆ ತಲುಪಲು ಗ್ರಾಹಕರೇ ಮುಖ್ಯವಾಗಿದ್ದಾರೆ, ಅಲ್ಲದೇ ಕೆನರಾ ಬ್ಯಾಂಕ್ ನ ಎಲ್ಲ ಸಿಬ್ಬಂದಿಗಳ ಕಾರ್ಯವೈಖರಿ ಜನರ ಮೇಲೆ ಇದೇ ರೀತಿ ಆಕರ್ಷಕವಾಗಿರಬೇಕು. ಯಾವುದೇ ಬಡ ವ್ಯಕ್ತಿಯು ನೇರವಾಗಿ ತನ್ನ ಹಣವನ್ನು ಕಟ್ಟಲು ಹಾಗೂ ತೆಗೆದುಕೊಳ್ಳಲು ಮತ್ತು ಸಾಲವನ್ನು ಪಡೆಯುವಲ್ಲಿ ಕೆನರಾ ಬ್ಯಾಂಕ್ ಸಹಕಾರಿಯಾಗಿದೆ.ಅದೇ ರೀತಿ ನಾವುಗಳು ಸಹ ಸಿಮೀತಾವಧಿಯಲ್ಲಿ ಹಣವನ್ನು ಮರುಪಾವತಿ ಮಾಡಿ ವ್ಯವಹಾರವನ್ನು ಉನ್ನತವಾಗಿ ಇಟ್ಟುಕೊಳ್ಳಬೇಕು ಎಂದರು.
ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಇರುವ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಪ್ರಶ್ನಿಸಿದರು. ಉತ್ತಮ ಗ್ರಾಹಕರು ಎಂದು ಗುರುತಿಸಿ ಸುಮಾರು 15 ಗ್ರಾಹಕರಿಗೆ ಸನ್ಮಾನಿಸಿ ಗೌರವಿಸಿದರು.
ಬ್ಯಾಂಕಿನ ಪ್ರಭಂಧಕರಾದ ಅಶೋಕ್, ಸಿಬ್ಬಂದಿಗಳಾದ ನಾಗರಾಜ್ ನಾಯ್ಕ್, ಗಣೇಶ್ ಪೈ, ಪ್ರಕಾಶ್ ಮಿರ್ಜಿ, ಪೂಜಾ, ಮಂಜುಳಾ, ರೈತ ಸಂಘದ ಅಧ್ಯಕ್ಷ ಚಂದ್ರಶೇಖರ ಬಾಪಟ್, ಪ್ರಮುಖರಾದ ಷಣ್ಮುಖಪ್ಪ ಚನ್ನಪಟ್ಟಣ, ಗುತ್ಯಪ್ಪ ಎನ್, ಕೃಷ್ಣ ಕಾಮತ್,ಉಮಾಪತಿ ಗೌಡ್ರು, ಸದಾನಂದ ಕಾಮತ್,ದೇಸಾಯಿ ಗೌಡ್ರು ಬೆನ್ನೂರು, ಪಕೀರಪ್ಪ, ಇಮ್ರಾನ್, ಪ್ರಶಾಂತ್, ರಾಘು, ಸಿಂಧು ವೆಂಕಟೇಶ್ ನಾಯ್ಕ್, ಶಕುಂತಲಾ ಶೇಟ್, ಸೇರಿದಂತೆ ಇತರರಿದ್ದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















