Monday, February 6, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಪುರಂದರೋಪನಿಷತ್: ಪುರಂದರದಾಸರ ಆರಾಧನೆಗೆ ಓದಲೇಬೇಕಾದ ಲೇಖನ

January 20, 2023
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಹರಿದಾಸ ಸಾಹಿತ್ಯವು ಎಂದಿಗೂ ಪ್ರಸ್ತುತವಾಗಿಯೇ ಇದೆ. ಹರಿದಾಸ ಸಾಹಿತ್ಯವು, ನಮ್ಮ ಜೀವನ ಹೇಗಿರಬೇಕೆಂಬುದನ್ನು ತಿಳಿಸುವ ಪ್ರಾಯೋಗಿಕವಾದ ಸಾಹಿತ್ಯವೆಂದರೆ ತಪ್ಪಾಗಲಾರದು.

ಈ ಸಾಹಿತ್ಯವು ಹರಿಭಕ್ತಿ, ಬೋಧನೆ, ಜ್ಞಾನ, ವೈರಾಗ್ಯ, ಧರ್ಮ ಇವುಗಳ ಸಂಪನ್ನತೆಯನ್ನು ಹೊಂದಿ ದಾಸ ಸಾಹಿತ್ಯದ ಪ್ರಚಾರಕರಾದ ಹರಿದಾಸರುಗಳು ಪರಮಾತ್ಮನ ಕೃಪಾಕಟಾಕ್ಷಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿರಿಸಿದ್ದವರು.

ಇವರು ಸಾಧನೆಯ ಮೆಟ್ಟಿಲುಗಳನ್ನು ಕಾವ್ಯಾತ್ಮಕವಾಗಿ ಸಾಹಿತ್ಯದ ಮೂಲಕ ದೇಶದೆಲ್ಲೆಡೆಯಲ್ಲೂ ಭಿತ್ತರಿಸಿದರು. ಈ ದಾಸರುಗಳ ಪೈಕಿ ನಮ್ಮ ಪುರಂದರದಾಸರೂ ಒಬ್ಬರು. ಇವರು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂಬುದು ನಿಜ ಸಂಗತಿ. ಆದರೆ, ಇವರ ಕೃತಿಗಳಲ್ಲಿ ಅಡಗಿರುವ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉಂಟು, ಇಲ್ಲವಾದರೆ ನಮ್ಮ ಜೀವನವು ಸಾರ್ಥಕತೆಯನ್ನು ಹೊಂದಲಾರದು.
ಪುರಂದರದಾಸರ ಕೃತಿಗಳ ಸಂಖ್ಯೆ 4,75,000 ಎಂದು ಅವರ ಜೀವನ ಚರಿತ್ರೆಯಲ್ಲಿ ಕಂಡುಬರುವುದು.

ಇವರು ಉಪನಿಷತ್ತಿನ ಸಾರವಾದ ಭಗವದ್ಗೀತೆಯನ್ನು ಶ್ರೀ ಕೃಷ್ಣನು ಅರ್ಜುನನಿಗಾಗಿ ತತ್ತ್ವಪೂರಿತವಾಗಿ, ಸತ್ಯಪರಿತವಾಗಿ, ಗುಹ್ಯಭಾಷೆ, ಸಮಾಧಿಭಾಷೆ, ದರ್ಶನಭಾಷೆಯಲ್ಲಿ ಉಪದೇಶ ಮಾಡಿರುವರು. ಆದರೆ, ಆ ಎಲ್ಲಾ ವಿಷಯಗಳು ಸಾಮಾನ್ಯ ಜನರಿಗೆ ಸುಲಭವಾಗಿ ತಿಳಿಯದ ಕಾರಣ ಕನ್ನಡದಲ್ಲಿ ತಮ್ಮ ಪದಗಳ ಮುಖಾಂತರ ಸರಳವಾಗಿ ಕನ್ನಡಿಯಲ್ಲಿ ಕರಿಯನ್ನು ತೋರಿದಂತೆ ತುಂಬಿಸಿಬಿಟ್ಟಿದ್ದಾರೆ ದಾಸರು. ಇದೊಂದು ದೊಡ್ಡ ಉಪಕಾರ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಆದ್ದರಿಂದ ದಾಸರ ಕೃತಿಗಳನ್ನು ನೋಡಿದ ಗುರುಗಳಾದ ಶ್ರೀ ವ್ಯಾಸರಾಯರು “ಪುರಂದರೋಪನಿಷತ್” ಎಂದು ಕರೆದರು. ಈ ಹೆಗ್ಗಳಿಕೆಗೆ ದಾಸವರ್ಯರು ಪಾತ್ರರಾದರು.

ಪುರಂದರದಾಸರು ತಮ್ಮ ಕೆಲವು ಕೃತಿಗಳಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಗೀತೆಯ ಉಪದೇಶಕ್ಕೆ ಅನ್ವಯವಾಗಿ ಕೃತಿಗಳ ಪ್ರಾರಂಭದಲ್ಲಿ ಅಥವಾ ಮಧ್ಯದಲ್ಲಿ ಪದಗಳನ್ನು ರಚಿಸಿ ಉಲ್ಲೇಖಗೊಳಿಸಿದ್ದಾರೆ.
ಅದನ್ನು ನಾವು ಯೋಗ ಗೀತೆಯ ಸಂದೇಶವೇನು? ಗೀತೆಯನ್ನು ಅನುಸರಿಸಿ ದಾಸರ ಗೀತೆ ಹೀಗೆ ನಿರೂಪಗೊಂಡಿದೆ ಎಂಬುದನ್ನು ಚಿಂತೆ ಮಾಡೋಣ.
ಕೃಷ್ಣನು ಅರ್ಜುನನನ್ನು ನಿಪ ಮಾಡಿಕೊಂಡು ಯುದ್ಧಭೂಮಿಯಲ್ಲಿ 17 ಅಧ್ಯಾಯಗಳಿಂದ ನಮ್ಮೆಲ್ಲರಿಗೂ ನೀಡಿದ ಉಪದೇಶ. ಅದರಲ್ಲಿ ಒಂದೆರಡನ್ನು ತಿಳಿಯಲು ಪ್ರಯತ್ನಿಸೋಣ.

ತಮ್ಮ ಬಂಧು ಬಳಗದವರ ಮೇಲಿರುವ ಮೋಹದಿಂದ ಉಂಟಾದ ಮನೋದೌರ್ಬಲ್ಯದಿಂದ ಕೃಷ್ಣನುನ್ನು ಕುರಿತು “ಕೃಷ್ಣ ನಾನು ಯುದ್ಧ ಮಾಡುವುದಿಲ್ಲ, ಇವರೆಲ್ಲರೂ ನನ್ನವರು, ಇವರನ್ನು ಕೊಂದು ನಾನು ಬದುಕುಳಿದರೆ ಏನು ಪ್ರಯೋಜನ? ಈ ಯುದ್ಧ ಬೇಡ ಎಂದು ವಿಷಾದ ಪಡಿಸುತ್ತಾ ನಿಷ್ಭಾತನಾದನು.

ಎರಡನೇ ಅಧ್ಯಾಯದಲ್ಲಿ ಕೃಷ್ಣನ ಮಾತು “ಅರ್ಜುನ ಇದು ಸರಿಯಲ್ಲ ಅನಗತ್ಯವಾದ ಹೆದರಿಕೆ, ಮೋಹ, ದುಃಖ ಬೇಡ. ಇದು ಧರ್ಮಯುದ್ಧ. ಈ ಯುದ್ಧವನ್ನು ನೀನು ತ್ಯಜಿಸಿದರೆ, ಅಧರ್ಮವಾಗುವುದು. ಧರ್ಮವನ್ನು ಗಳಿಸು ಉಳಿಸು” ಈ ಮಾತಿಗೆ ದಾಸರ ಅನ್ವಯ ಕೃತಿ
ಧರ್ಮವೆಂಬ ಸಂಬಳ ಗಳಿಸಿರೋ
ಹೆಮ್ಮೆಯಿಂದ ಈ ಶರೀರ ನಂಬಬೇಡಿರು || ಪ ||
ಅರ್ಜುನ ಯುದ್ಧ ಬೇಡ ಯುದ್ಧದಲ್ಲಿ ಇವರೆಲ್ಲ ಸಾಯುತ್ತಾರೆ ಎನ್ನುತ್ತೀಯಾ? ಜೀವ-ಪರಮಾತ್ಮ ಶಾಶ್ವತ, ಜಡ ಶರೀರಕ್ಕೆ ನಾಶ. ನಾಶವಾಗುವ, ನಿತ್ಯವಲ್ಲದ ಈ ಶರೀರಕ್ಕೆ ಏಕೆ ದುಃಖಪಡುವೆ ?

“ನಿತ್ಯವಲ್ಲ ಈ ಶರೀರ ಅನಿತ್ಯವೆಂದು ತಿಳಿಯಿರಯ್ಯ
ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋ”
“ಈ ಶರೀರದ ಬ್ರಾಂತಿ ಇನ್ನೇಕೆ ಮನವೆ? || ಪ ||
ವಾಸುದೇವನ ನೆನೆ ನೆನೆ ನೆನೆದು ಸುಖಿಯಾಗು ಮನವೆ”
ಮಾನವರು ಅವರವರ ವರ್ಣಕ್ಕೆ ತಕ್ಕಂತೆ ಕರ್ಮವನ್ನು ಮಾಡಬೇಕು “ಕ್ಷತ್ರಿಯರು ಯುದ್ಧದಲ್ಲಿ ಕಾದಾಡಬೇಕು ಉಳಿದರೆ ವೀರ ಮಾಡಿದರೆ ವೀರ ಸ್ವರ್ಗ, ಬ್ರಾಹ್ಮಣ ವೇದವನ್ನು ಓದಬೇಕು, ವೈಶ್ಯ ವ್ಯಾಪಾರ ಮಾಡಬೇಕು, ಶೂದ್ರನಾದವನು ವ್ಯವಸಾಯ ಮಾಡಬೇಕು”ಹೀಗಿದೆ ಚತುರ್ವರ್ಣದ ಕರ್ಮಗಳು.

ವೇದವ ನೋಡಿದ ವಿಪ್ರತಾನೇಕೆ
ಕಾದಲರಿಯತಾ ಕ್ಷತ್ರಿಯನೇಕೆ?
ಹರಿಯ ನೆನೆಯದ ನರಜನ್ಮವೇಕೆ?
ಅರ್ಜುನ! ಭೋಗಗಳಲ್ಲಿ ಆಸಕ್ತಿ ತೋರಿ ವಿವೇಕಗಳನ್ನು ಹಾಳು ಮಾಡಿಕೊಳ್ಳಬಾರದು ಪ್ರಾರಂಭದಲ್ಲಿ ಸುಖ ಕ್ರಮೇಣ ಅನುಭವಿಸಲಾರದಷ್ಟು ಕಹಿ. ಮಾನವನು ತನ್ನ ಹನ್ನೊಂದು ಇಂದ್ರಿಯಗಳನ್ನು ಹರಿ ಬಿಡದೆ ತೃಣೀಕರಿಸಿ, ಇಂದ್ರಿಯಗಳನ್ನು ನನ್ನತ್ತ ಹರಿಸಬೇಕು.

ವಿಷಯ ಭೋಗದ ತೃಣಕೆ ಉರಿಯಾಗಿ ಇರಬೇಕು
ಹಗಲು ನಿಷೇ ಶ್ರೀಹರಿ ನೆನೆ ನೆನೆದು ಸುಖಿಯಾಗಬೇಕು
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಾಡಬೇಕು ಅರ್ಜುನ, ಅಂದರೆ ನಿಷ್ಕಾಮ ಕರ್ಮ ಮಾಡು ಇದೇ ಶ್ರೇಷ್ಠವಾದ ಕರ್ಮ. ಫಲಕೊಡುವವನು ನಾನಿರುವಾಗ ಏಕೆ ಯೋಚಿಸುವೆ?
“ಕೊಡುವ ಕರ್ತ ಬೇರೆ ಇರುತಿರೆ
ಬಿಡು ಬಿಡು ಚಿಂತೆಯನು
ಒಡೆಯನಾಗಿ ಮೂರ್ಜಗವನು ಪಾಲಿಪ
ಬಡವರಾಧಾರಿಯು ಭಕ್ತರ ಪ್ರಿಯನು”
ತತ್ತ್ವ ಜ್ಞಾನಕ್ಕೆ ಶರಣಾಗತನಾಗಬೇಕು. ಕರ್ಮಕ್ಕಿಂತ ತತ್ತ್ವ ಜ್ಞಾನ ದೊಡ್ಡದು. ತತ್ತ್ವ ಜ್ಞಾನ ಅಂದರೆ ನಾನು ಮಾಡುವ ಸ್ನಾನ, ಉಡುವುದು, ಊಟ ಮಾಡುವುದು, ಮಾತನಾಡುವುದು ಎಲ್ಲವೂ ಭಗವಂತನ ಇಚ್ಛೆ. ಅವನೇ ಕರ್ಮ ಮಾಡಿಸುವುದು. ಎಲ್ಲವೂ ಅವನ ಪೂಜೆ ಎಂಬ ಜ್ಞಾನ, ಮುಕ್ತಿಗೆ ಸೋಪಾನ.

ಜ್ಞಾನವೊಂದೇ ಸಾಕು
ಮುಕ್ತಿಗೆ ಇನ್ನೇನು ಬೇಕು ಹುಚ್ಚು ಮನವೇ
ಪತಿಸುತರನ್ನು ಅಗಲಬೇಡ
ಯತಿಯಾಗಿ ತಿರುಗಬೇಡ
ಸ್ವಕರ್ಮವನ್ನು ಭಗವಂತನ ಸೇವೆ ಎಂದು ಮಾಡು. ನಾನು ನನ್ನದು ಎಂಬ ಅಹಂಕಾರ ಮಮಕಾರಗಳನ್ನು ತೊರೆದು ಜೀವಿಸು.

ಸಕಲವೆಲ್ಲವೂ ಹರಿಯ ಸೇವೆಯೆನ್ನಿ
ರುಕ್ಮಿಣಿ ರಮಣ ವಿಠಲ ಇಲ್ಲದಿಲ್ಲವೆನ್ನಿ
ನುಡಿಗಳೆಲ್ಲ ನಾರಾಯಣನ ಕೀರ್ತನೆಯೆನ್ನಿ
ಕೊಡುವುದೆಲ್ಲ ಕಾಮಜನಕಕ್ಕೆ ಅರ್ಪಿತವೆನ್ನಿ.
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೇ ಗತಿ ಎಂದು ನಂಬಿದ ದಾಸನ ಮೇಲೆ
ಇನ್ನೂ ದಯಬಾರದೇ ದಾಸನ ಮೇಲೆ
ಹೀಗೆ ಕೃಷ್ಣಗೀತೆಯೆಂಬ ಅಮೃತೋಪದೇಶ ನೀಡಿದ. ದಾಸರು ಕೂಡ ಕೃಷ್ಣನ ಉಪದೇಶವನ್ನೇ ತಮ್ಮ ನುಡಿ ಮುತ್ತಿನಲ್ಲಿ “ಮನವೇ, ಮರುಳೇ, ಮಾನವನೇ, ಸ್ವಾಮಿ” ಎಂದು ಅನೇಕ ಶಬ್ದಗಳಲ್ಲಿ ತಿಳಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: bhagavad gitaDasa SahityaHaridasa SahityaKannada News WebsiteLatest News KannadaSpecial ArticleSri Purandaradasaruಪುರಂದರದಾಸರುಪುರಂದರೋಪನಿಷತ್ಭಗವದ್ಗೀತೆವಿಶೇಷ ಲೇಖನಶ್ರೀ ಕೃಷ್ಣಹರಿದಾಸ ಸಾಹಿತ್ಯ
Previous Post

ವಿಕಲಚೇತನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ: ಶಿವಮೊಗ್ಗ ಜಿಲ್ಲಾ ಸಕ್ಷಮ ಘಟಕ ಮನವಿ

Next Post

ಆರ್ಥಿಕ ಪ್ರಗತಿ ಹೆಚ್ಚಿಸಲು ಬ್ಯಾಂಕಿನ ಸಿಬ್ಬಂದಿ ಸಹಕರಿಸಿ: ಕೆನರಾ ಬ್ಯಾಂಕ್ ಡಿಜಿಎಮ್ ಸಂದೀಪ್ ರಾವ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಆರ್ಥಿಕ ಪ್ರಗತಿ ಹೆಚ್ಚಿಸಲು ಬ್ಯಾಂಕಿನ ಸಿಬ್ಬಂದಿ ಸಹಕರಿಸಿ: ಕೆನರಾ ಬ್ಯಾಂಕ್ ಡಿಜಿಎಮ್ ಸಂದೀಪ್ ರಾವ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಗಾಯಕಿ ವಾಣಿ ಜಯರಾಂ ಮರಣೋತ್ತರ ವರದಿಯಲ್ಲೇನಿದೆ? ಇಲ್ಲಿದೆ ಮಾಹಿತಿ

February 6, 2023

ಪ್ರೀತಿ ನಿರಾಕರಣೆ ಹಿನ್ನೆಲೆ ಅಪ್ರಾಪ್ತ ಬಾಲಕಿಗೆ ಆಸಿಡ್ ದಾಳಿ ಬೆದರಿಕೆ

February 6, 2023

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಸ್ವಾಗತ ಕೋರಿದ ಸಿಎಂ ಬೊಮ್ಮಾಯಿ

February 6, 2023

ತಂಗಿಯ ನಿಶ್ಚಿತಾರ್ಥದ ದಿನವೇ ನೇಣಿಗೆ ಶರಣಾದ ಯುವಕ!

February 6, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ. ಸುದರ್ಶನ್ ಆಚಾರ್
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಗಾಯಕಿ ವಾಣಿ ಜಯರಾಂ ಮರಣೋತ್ತರ ವರದಿಯಲ್ಲೇನಿದೆ? ಇಲ್ಲಿದೆ ಮಾಹಿತಿ

February 6, 2023

ಪ್ರೀತಿ ನಿರಾಕರಣೆ ಹಿನ್ನೆಲೆ ಅಪ್ರಾಪ್ತ ಬಾಲಕಿಗೆ ಆಸಿಡ್ ದಾಳಿ ಬೆದರಿಕೆ

February 6, 2023

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಸ್ವಾಗತ ಕೋರಿದ ಸಿಎಂ ಬೊಮ್ಮಾಯಿ

February 6, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!