ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೀಘ್ರದಲ್ಲಿಯೇ ನಾರಾಯಣ ಹೆಲ್ತ್ ಆಸ್ಪತ್ರೆಯ ಸೇವೆ ಪ್ರಾರಂಭಿಸಲಾಗುವುದು ಎಂದು ನಾರಾಯಣ ಹೆಲ್ತ್ ಕರ್ನಾಟಕ ಕ್ಲಸ್ಟರ್ ಹಾಗೂ ಗ್ರೋಥ್ ಗ್ರೋಥ್ ಇನಿಷಿಯೇಟಿವ್ ನಿರ್ದೇಶಕರಾದ ಡಾ. ವಿಜಯ ಸಿಂಗ್ ಅವರು ತಿಳಿಸಿದರು.
ನಗರದ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ನಲ್ಲಿ ನೂತನವಾಗಿ ಆರಂಭಿಸಲಾದ ಎಂಡೋಸ್ಕೋಪಿ ಮತ್ತು ಕೀಮೋಥೆರಪಿ ಡೇ-ಕೇರ್ ಸೇವೆಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also Read>> ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಎಂಡೋಸ್ಕೋಪಿ, ಕೀಮೋಥೆರಪಿ ಡೇ-ಕೇರ್ ಸೇವೆಗಳಿಗೆ ಚಾಲನೆ
ಕಲ್ಯಾಣ ಕರ್ನಾಟಕದಲ್ಲಿ ನಾರಾಯಣ ಹೆಲ್ತ್ ನ ಆಸ್ಪತ್ರೆಯೂ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಧಾರವಾಡದಲ್ಲಿ ಈಗಾಗಲೇ ಎಸ್ ಡಿ ಎಮ್ ಜೊತೆಗೆ ಹೊಂದಾಣಿಕೆಯಲ್ಲಿ ಹೃದ್ರೋಗ ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು ಮಲ್ಟಿ ಸ್ಪೆಷಲಿಟಿ ಚಿಕಿತ್ಸೆ ಗೆ ಇನ್ನು ಕಾಲ ಕೂಡಿ ಬರಬೇಕಾಗಿದೆ ಎಂದು ಹೇಳಿದರು.
ಮಧ್ಯ ಕರ್ನಾಟಕದ ಶೇ.40 ರಷ್ಟು ಆರೋಗ್ಯ ಅಗತ್ಯತೆಗಳ ಪೂರೈಕೆ
ಶಿವಮೊಗ್ಗ ನಗರದಲ್ಲಿ ನಾರಾಯಣ ಹೆಲ್ತ್ ಸಂಸ್ಥೆಯು ಕಳೆದ 13 ವರ್ಷಗಳಿಂದ ಯಶಸ್ವಿಯಾಗಿ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದು, ಪ್ರಸ್ತುತ ಈ ಭಾಗದ ಶೇಕಡಾ 40 ರಷ್ಟು ಆರೋಗ್ಯ ಅಗತ್ಯತೆಗಳನ್ನು ಸಂಸ್ಥೆಯು ಯಶಸ್ವಿಯಾಗಿ ಪೂರೈಸುತ್ತಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಆಶಯದ ಫಲ
ನಾವು 2012ರಲ್ಲಿ ಶಿವಮೊಗ್ಗಕ್ಕೆ ಬಂದು ನೆಲೆಸಲು ಮತ್ತು ಇಲ್ಲಿ ವೈದ್ಯಕೀಯ ಸೇವೆ ಆರಂಭಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಾಗೂ ಬಿ.ವೈ. ರಾಘವೇಂದ್ರ ಅವರ ದೂರದೃಷ್ಟಿ, ಅಪಾರ ನಂಬಿಕೆ ಮತ್ತು ಆಶಯವೇ ಪ್ರಮುಖ ಕಾರಣ. ಅವರ ಇಚ್ಛೆಯ ಫಲವಾಗಿ ನಾರಾಯಣ ಹೃದಯಾಲಯಕ್ಕೆ ಇಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶ ಸಿಕ್ಕಿತು.
Also Read>> ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ನಿರೀಕ್ಷೆ | ಸಂಸದ ರಾಘವೇಂದ್ರ ಹೇಳಿದ್ದೇನು?
ಪ್ರಸ್ತುತ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮುಲ್ಟಿಸ್ಪೆಷಲಿಟಿ ಆಸ್ಪತ್ರೆ 100ಕ್ಕೂ ಹೆಚ್ಚು ನುರಿತ ವೈದ್ಯರ ಬೃಹತ್ ತಂಡ ರೋಗಿಗಳ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದೆ.
ವರ್ಷಕ್ಕೆ ಸರಾಸರಿ 5,000 ಕ್ಕೂ ಹೆಚ್ಚು ಕೀಮೋಥೆರಪಿ ಇನ್ಫ್ಯೂಷನ್ ಹಾಗೂ 5,000 ಕ್ಕೂ ಅಧಿಕ ಎಂಡೋಸ್ಕೋಪಿ ಪ್ರೊಸೀಜರ್ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















