ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಪ್ರಾಚೀನ ಕಾಲದಿಂದಲೂ ದೀಪಾರಾಧನೆಗೆ ಭಾರತೀಯರು ಅತ್ಯಂತ ಮಹತ್ವ ನೀಡಿದ್ದು, ಕಾರ್ತೀಕೋತ್ಸವ ಸಂದರ್ಭದಲ್ಲಿ ನಡೆಸುವ ದೀಪಾರಾಧನೆ ತಂಪು ಬೆಳಕಿನ ಜೊತೆಗೆ ಮಾನವನ ಜಂಜಾಟದ ಬವಣೆಗೆ ತುಸು ವಿರಾಮ ನೀಡುವಂತಹುದು ಎಂದು ಅರ್ಚಕ ಕೃಷ್ಣಭಟ್ ಹೇಳಿದರು.
ಮುಜರಾಯಿ ಸಸ್ತಿಕ್ ಅನುದಾನ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಇಲ್ಲಿನ ಐತಿಹಾಸಿಕ ವಿಠ್ಠಲ ದೇವಸ್ಥಾನದಲ್ಲಿ ಕಾರ್ತೀಕೋತ್ಸವ ನೆರವೇರಿಸಿ ಮಾತನಾಡಿದರು.
ಕಲಾತ್ಮಕ ಗ್ರಾನೈಟ್ ಶಿಲೆಯ ಕಂಬಗಳಮೇಲೆ ಬಿದ್ದ ಹಣತೆಯ ಪ್ರಖರತೆ ಹಂಪಿಯ ವಿರೂಪಾಕ್ಷ ದೇವಾಲಯವನ್ನು ನೆನಪಿಸುವಂತಿತ್ತು. ದೇಗುಲ ಶಿಥಿಲಗೊಂಡಿದ್ದು ಪ್ರಾಚ್ಯ ಇಲಾಖೆಯ ಮುಖೇನಾ ದುರಸ್ಥಿಗೊಳ್ಳಬೇಕಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ಜೀರ್ಣೋದ್ಧಾರ ಆಗಲಿದೆ ಎಂದು ಶ್ರೀ ರೇಣುಕಾಂಬ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನಶೇಟ್ ಈ ವೇಳೆ ತಿಳಿಸಿದರು.
ಪುರ ಪ್ರಮುಖರಾದ ಶಿವಶಂಕರಗೌಡ, ಬಸವರಾಜಶೇಟ್, ಸದಾನಂದ ಕಾಮತ್, ವಸಂತ, ವಿನೋದಾ ಟೀಚರ್, ರವಿಭಟ್ ಗ್ರಾಮಸ್ಥರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post