ಚನ್ನಗಿರಿ: ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಸುಮಾರು 30 ಮಂದಿ ವಿಧಾನ ಸಭಾ ಸದಸ್ಯರು ಪ್ರತಿನಿಧಿಸುತ್ತಾರೆ, ಅವರೆಲ್ಲರೂ ಭದ್ರಾ ಕಾಡಾ ಪ್ರಾಧಿಕಾರಕ್ಕೆ ಪ್ರತಿವರ್ಷ 2 ಕೋಟಿಯಂತೆ ಅನುದಾನ ಒದಗಿಸಿ ಕೊಟ್ಟರೆ ಇದರಿಂದ 60ಕೋಟಿ ಅನುದಾನ ಲಭ್ಯವಾಗುತ್ತದೆ. ಈ ಅನುದಾನದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಎದುರಿಸುತ್ತಿರುವ ನೂರಾರು ಸಮಸ್ಯೆಗಳು ಪರಿಹರಿಸುವುದರ ಜೊತೆಗೆ ಪ್ರಾಧಿಕಾರವನ್ನು ಮಾದರಿಯಾಗಿ ಅಭಿವೃದ್ದಿ ಪಡಿಸಲು ಅನುಕೂಲವಾಗುತ್ತದೆ ಎಂದು ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅಭಿಪ್ರಾಯಪಟ್ಟರು.
ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಚ್ಚುಕಟ್ಟು ವ್ಯಾಪ್ತಿಯ ಪ್ರತಿಯೊಂದು ಅಭಿವೃದ್ದಿ ಕೆಲಸಗಳು ಪ್ರಾಧಿಕಾರದ ವತಿಯಿಂದ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರು ಆಲೋಚನೆ ಮಾಡಿ ನಮ್ಮೊಂದಿಗೆ ಕೈಜೋಡಿಸಿದರೆ ರೈತರು ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಳನ್ನುಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಆಯಾ ಶಾಸಕರು ಒದಗಿಸಿದ ಅನುದಾನವನ್ನು ಆಯಾ ಕ್ಷೇತ್ರದ ಅಚ್ಚುಕಟ್ಟು ಅಭಿವೃದ್ದಿಗೆ ವಿನಯೋಗಿಸುತ್ತೇನೆ ಎಂದು ಭರವಸೆ ನೀಡಿದರು.
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ನಿರ್ದೇಶಕರಾದ ನಾಗರಾಜಪ್ಪ ಮಾತನಾಡಿ, ಪವಿತ್ರ ರಾಮಯ್ಯ ಅವರು ಮೂಲತಃ ರೈತ ಸಂಘದಿಂದ ಬಂದವರು ಅವರಿಗೆ ರೈತರ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಅರಿವಿದೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಅನುದಾನ ಒದಗಿಸಲು ಕೈಜೋಡಿಸುತ್ತೆವೆ ಒಬ್ಬ ಹೆಣ್ಣು ಮಗಳಾಗಿ ಮಾಡುತ್ತಿರುವ ಸಾಧನೆ ಎಲ್ಲರೂ ಮೆಚ್ಚುವಂತಹದ್ದು ಎಂದು ಹೇಳಿದರು, ಇದರೊಂದಿಗೆ ಈ ಸ್ಥಳದಲ್ಲಿ ಕೃಷಿ ಪದವಿ ಕಾಲೇಜು ಮಾಡಲು ಎಲ್ಲಾ ರೀತಿಯ ಅನುಕೂಲವಿದ್ದು ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಮಾತನಾಡಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಆನಂದ್ ಕುಮಾರ್ ಮಾತನಾಡಿ, ನಿಮ್ಮ ಭಾಷಣ ಕೇಳಿದರೆ ನಿಮ್ಮ ರೈತರೊಂದಿಗಿನ ಒಡನಾಟ ಯಾವ ಮಟ್ಟದಲ್ಲಿದೆ ಎಂಬುದು ತೋರ್ಪಡಿಸುತ್ತದೆ, ಕೃಷಿಯ ಬಗ್ಗೆ ಇರುವ ಅಪಾರವಾದ ಜ್ಞಾನ ರೈತರ ಬಗೆಗಿನ ಕಾಳಜಿ ನಿಜಕ್ಕೂ ನನಗೆ ಅಚ್ಚರಿಗೆ ನೂಕಿದೆ, ನೀವು ಖಂಡಿತ ಕೃಷಿ ವಿಜ್ಞಾನಿಗಳಿಗೆ ಸರಿಸಮನಾಗಿ ನಿಲ್ಲುತ್ತೀರಿ ನಿಮ್ಮ ಅನುಭವ ನಮ್ಮೆಲ್ಲರಿಗೂ ಮಾದರಿ ಎಂದು ಅಭಿಮಾನ ವ್ಯಕ್ತ ಪಡಿಸಿದರು ನಂತರ ವಿಶ್ವವಿದ್ಯಾಲಯ ಪ್ರಾಂಗಣದಲ್ಲಿ ಕಾಡಾ ವತಿಯಿಂದ ಅಭಿವೃದ್ದಿ ಕೆಲಸಗಳು ಅಗಬೇಕಿದ್ದು ಅನುದಾನ ನೀಡುವಂತೆ ಮನವಿ ಮಾಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಗ್ರಾಮಸ್ಥರು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಧನಂಜಯ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post