ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚರ್ಲಪಲ್ಲಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (Charlapalli SMVT Bengaluru) ನಡುವೆ ಸಂಚರಿಸುವ ವಾರದ ವಿಶೇಷ ಎಕ್ಸ್ಪ್ರೆಸ್ ರೈಲುಗಳ (Special Train) ನಿಗದಿತ ಸಂಚಾರವನ್ನು ನವೆಂಬರ್ ಮತ್ತು ಡಿಸೆಂಬರ್ 2026ರ ನಿರ್ದಿಷ್ಟ ದಿನಾಂಕಗಳಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 07065
ಚರ್ಲಪಲ್ಲಿ–ಎಸ್ಎಂವಿಟಿ ಬೆಂಗಳೂರು ವಾರದ ವಿಶೇಷ ಎಕ್ಸ್ಪ್ರೆಸ್ (07065) ರೈಲು ಸೋಮವಾರಗಳಂದು ಸಂಚರಿಸಲಿದ್ದು, ನವೆಂಬರ್ 2, 9, 16, 23 ಮತ್ತು 30ರಂದು ನಿಗದಿಯಾಗಿದ್ದ ಒಟ್ಟು ಐದು ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.
Also Read>> ಹುಬ್ಬಳ್ಳಿ | ನೈಋತ್ಯ ರೈಲ್ವೆಯಲ್ಲಿ ವಿಜಿಲೆನ್ಸ್ ಜಾಗೃತಿ ಸಪ್ತಾಹ ಉದ್ಘಾಟನೆ
Charlapalli SMVT Bengaluru: ರೈಲು ಸಂಖ್ಯೆ 07066
ಎಸ್ಎಂವಿಟಿ ಬೆಂಗಳೂರು–ಚರ್ಲಪಲ್ಲಿ ವಾರದ ವಿಶೇಷ ಎಕ್ಸ್ಪ್ರೆಸ್ (07066) ರೈಲು ಮಂಗಳವಾರಗಳಂದು ಸಂಚರಿಸಲಿದ್ದು, ನವೆಂಬರ್ 3, 10, 17, 24 ಹಾಗೂ ಡಿಸೆಂಬರ್ 1ರಂದು ನಿಗದಿಯಾಗಿದ್ದ ಒಟ್ಟು ಐದು ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ.
ಈ ಮೂಲಕ ಎರಡೂ ಮಾರ್ಗಗಳಲ್ಲಿ ಒಟ್ಟು 10 ನಿಗದಿತ ಟ್ರಿಪ್ಗಳು ರದ್ದಾಗಿವೆ. ಈ ದಿನಗಳಲ್ಲಿ ಪ್ರಯಾಣಿಸಲು ಯೋಜಿಸಿರುವ ಪ್ರಯಾಣಿಕರು ರೈಲುಗಳ ರದ್ದತಿಯನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










