ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ವಿಶಿಷ್ಟ ಆಚರಣೆ: ನಗರದೇವತೆ ಚಳ್ಳಕೆರೆಯಮ್ಮ ಜಾತ್ರೆ ಪ್ರಯುಕ್ತ ನಗರದಲ್ಲಿ ಸಿಡಿಕಂಬ ಹೇರುವ ಉತ್ಸವದ ವಿಶಿಷ್ಟ ಆಚರಣೆ ವಿಜೃಂಭಣೆಯಿಂದ ಜರುಗಿತು.
ಇಲ್ಲಿನ ನಗರ ದೇವತೆ ಚಳ್ಳಕೆರೆಯಮ್ಮನ ಮುಕ್ತಿ ಬಾವುಟ ಹಾರಾಜು ಮಾಡಿದ ನಂತರ ಸಿಡಿ ಬಂಡಿಯ ಉತ್ಸವದ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಮಹಿಳೆಯುರು ದೀಪದ ಆರತಿ ಹಿಡಿದು ಸಿಡಿಕಂಬ ಹೇರುವ ಭಕ್ತರನ್ನು ಉರುಮೆ ವಾದ್ಯಗಳ ಮೂಲಕ ದೇವಿ ಗುಡಿಹತ್ತಿರ ಕರೆ ತಂದರು.

ಗ್ರಂಥಿಕೆ ಅಂಗಡಿ ಮಾಲೀಕ ಹಳೆ ಟೌನ್’ನ ಶಂಕರಪ್ಪ ಮತ್ತು ಮಕ್ಕಳು 1.101 ಲಕ್ಷಕ್ಕೆ ದೇವಿಯ ಮುಕ್ತಿ ಬಾವುಟವನ್ನು ಹಾರಾಜಿನಲ್ಲಿ ಪಡೆದರು.
ವಿಶಿಷ್ಟ ಆಚರಣೆ
ನಗರ ದೇವತೆ ಚಳ್ಳಕೆರೆಯಮ್ಮ ಜಾತ್ರೆ ಪ್ರಯುಕ್ತ ಗುರುವಾರ ನಗರದಲ್ಲಿ ಸಿಡಿಕಂಬ ಏರುವ ಉತ್ಸವದ ವಿಶಿಷ್ಟ ಆಚರಣೆ ವಿಜೃಂಭಣೆಯಿಂದ ಜರುಗಿತು. ಸಿಡಿ ಹರಕೆ ಹೇರಲು ಒಂದೆರಡು ದಿನದಿಂದ ಉಪವಾಸ ಇದ್ದವರನ್ನು ಸ್ನಾನ ಮಾಡಿಸಿ ಮೈ ಕೈಗೆ ಗಂಧವನ್ನು ಬಳಿದು ಬಿಳಿವಸ್ತ್ರ ಹಾಗೂ ಹೂವಿನಿಂದ ಅಲಂಕರಿಸಿ ಹಿಡಿದುಕೊಳ್ಳಲು ಬಲಗೈ ಚಿಕ್ಕದೊಂದು ಬಾಕು, ಎಡ ಕೈಗೆ ನಿಂಬೆಹಣ್ಣು ಕೊಟ್ಟು ಆರಿತಿ ಹಾಗೂ ಉರುಮೆ ವಾದ್ಯ ನುಡಿಸುವ ಮೂಲಕ ಹರಕೆ ಹೊತ್ತ ಭಕ್ತರನ್ನು ದೇವಿ ಗುಡಿಯ ಹತ್ತಿರ ಸಿಡಿ ಕಂಬ ಹೇರಲು ಅವರನ್ನು ಕರೆತಂದರು.

ಜನಾಕರ್ಷಕಗೊಂಡ ಮೆರವಣಿಗೆ
ಹೂ ಮತ್ತು ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸಿಡಿಕಂಬದ ಬಂಡಿಗೆ ಬಣ್ಣ ಬಣ್ಣದ ಕುಚ್ಚು, ಜೂಲು, ಗಗ್ರಿ, ಕೋಡು ಆಣಸು, ಗೆಜ್ಜೆ, ಗಂಟೆ ಸರಗಳಿಂದ ಅಲಂಕರಿಸಿದ 16 ಜೊತೆ ಜೊಡೆತ್ತುಗಳನ್ನು ಕಟ್ಟಿದ್ದರು.

ಚಳ್ಳಕೆರಮ್ಮ ದೇವಿಯ ಗುಡಿಯಿಂದ ಹೊರಟ ಸಿಡಿ ಉತ್ಸವದ ಮೆರವಣಿಗೆ ಮಾರುಕಟ್ಟೆ ಬಳಿ ಹೋಗಿ ದೇವಿಯ ಗುಡಿಗೆ ಹಿಂದಿರುಗಿತು.

ಸಿಡಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.
ಈ ಉತ್ಸವಕ್ಕೆ ಜನಾಕರ್ಷಕಗೊಂಡ ಮೆರವಣಿಗೆ
ಹೂ ಮತ್ತು ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸಿಡಿಕಂಬದ ಬಂಡಿಗೆ ಬಣ್ಣ ಬಣ್ಣದ ಕುಚ್ಚು, ಜೂಲು, ಗಗ್ರಿ, ಕೋಡು ಆಣಸು, ಗೆಜ್ಜೆ, ಗಂಟೆ ಸರಗಳಿಂದ ಅಲಂಕರಿಸಿದ 16 ಜೊತೆ ಜೊಡೆತ್ತುಗಳನ್ನು ಕಟ್ಟಿದ್ದರು.
ಮೈಸೂರು, ದಾವಣಗೆರೆ, ಬಳ್ಳಾರಿ, ರಾಯದುರ್ಗ, ತುಮಕೂರು ಮುಂತಾದ ಭಾಗದಿಂದ ನೂರಾರು ಜನರು ಸಿಡಿ ಉತ್ಸವದಲ್ಲಿ ಭಾಗವಹಿಸಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093






Discussion about this post