ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಇಲ್ಲಿನ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ನ.1ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ವಿವಿಧ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ.
ಟಿ. ನಗರದ ಡಾ.ಯು. ರಾಮ ರಾವ್ ಕಲಾಮಂಟಪದಲ್ಲಿ ಕಾರ್ಯಕ್ರಮ ಅಂದು ಇಡೀ ದಿನ ನಡೆಯಲಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಮೂಲ್ಕಿ/ಮೂಡಬಿದರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, ಮಧ್ಯಾಹ್ನ 2.30ರಿಂದ 3.15ರವರೆಗೂ ಮುಂಬೈನ ವಿನಯಾ ಅನಂತಕೃಷ್ಣ ಅವರಿಂದ ನೃತ್ಯ, 3.15ರಿಂದ 5 ಗಂಟೆಯವರೆಗೂ ಮೈಸೂರಿನ ನಟನ ತಂಡದಿಂದ ಕಣಿವೆಯ ಹಾಡು ಪ್ರಸಿದ್ದ ನಾಟಕ ಪ್ರದರ್ಶನ, ಸಂಜೆ 5.35ರಿಂದ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
Also read: ಚೆನ್ನೈ ಕನ್ನಡ ಬಳಗದ ಜಾನಪದ ಗೀತೆ ಸ್ಪರ್ಧೆ ಎಂದರೆ ಅದೊಂದು ಸಂಭ್ರಮ! ಸಂತಸ!!
ಯಾರಿಗೆಲ್ಲಾ ಸನ್ಮಾನ?
ಪ್ರಮುಖವಾಗಿ ಜೀವಮಾನದ ಸಾಧನೆಗಾಗಿ ಸಮಿತಿಯಿಂದ ಕೊಡಮಾಡುವ `ಚೆನ್ನೈ ಕನ್ನಡ ರತ್ನ’ ಪ್ರಶಸ್ತಿಯನ್ನು ಎಸ್. ರಾಮಚಂದ್ರ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
ಉದ್ಯಮಿ ಕೆ. ಪ್ರವೀಣ್ ಶೆಟ್ಟಿ, ಸಾಹಿತಿ ಶಾಂತಿ ಕೆ. ಅಪ್ಪಣ್ಣ, ಸಮಾಜ ಸೇವಕ ಜೀವನ್ ದಾಸ್ ರೈ, ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಿಂದ ಡಾ. ಮಂಜುನಾಥ್ ಮಂಡಿಕಲ್, ಕಲಾ ಕ್ಷೇತ್ರದಿಂದ ಅಪೇಕ್ಷಾ ಭಟ್, ಶಿಕ್ಷಣ ಕ್ಷೇತ್ರದಲ್ಲಿ ಯುವ ಪ್ರತಿಭೆ ಸುಶ್ರುತ್ ವಿನಾಯಕ್, ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭೆ ಅಪರ್ಣಾ ಎನ್. ಶರ್ಮಾ, ಕಲಾ ಕ್ಷೇತ್ರದಲ್ಲಿ ಯುವ ಪ್ರತಿಭೆ ಸ್ಮೃತಿ ಸುಧಾಕರ್ ಅವರುಗಳನ್ನು ಸನ್ಮಾನಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post