ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ತಮಿಳುನಾಡಿನ ಚೆನ್ನೈನ ಕನ್ನಡ ಬಳಗ ಪ್ರಕಾಶನದಲ್ಲಿ ಪ್ರಕಟಗೊಳ್ಳುತ್ತಿರುವ ಚೆನ್ನೈಲಹರಿ ಪತ್ರಿಕೆ ಯುಗಾದಿ ವಿಶೇಷ ಸಂಚಿಕೆ ಹೊರತರುತ್ತಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಕಥೆ ಸ್ಪರ್ಧೆ #StoryCompetition ಏರ್ಪಡಿಸಿದೆ.
ದೇಶ-ವಿದೇಶದ ಯಾವುದೇ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ನಿಯಮಗಳು ಹೀಗಿವೆ:
- ಕಥೆ ಸ್ವಂತದ್ದಾಗಿರಬೇಕು. ಬೇರೆಲ್ಲೂ ಪ್ರಕಟಗೊಂಡಿರಬಾರದು.
- ಕಥೆ ನುಡಿ ಬರವಣಿಗೆಯಲ್ಲಿ ಟೈಪ್ ಮಾಡಿದ ಐದಾರು ಪುಟಗಳನ್ನು (ಸುಮಾರು 3000 ಪದಗಳು) ಮೀರದಂತೆ ಇರಬೇಕು.
- ಕಥಾ ವಿಭಾಗದಲ್ಲಿ ಪ್ರಥಮ/ದ್ವಿತೀಯ/ತೃತೀಯ ಬಹುಮಾನಗಳಿದ್ದು ಅನುಕ್ರಮವಾಗಿ 5000/3000/2000 ರೂಪಾಯಿ, ತಲಾ ಒಂದು ಸಾವಿರ ರೂಪಾಯಿಯ ಸಮಾಧಾನಕರ ಬಹುಮಾನ ನೀಡಲಾಗುವುದು.
- ಬಹುಮಾನಕ್ಕೆ ಆಯ್ಕೆಯಾಗದ, ಪ್ರಕಟಣೆಗೆ ಯೋಗ್ಯವೆನಿಸಿದ ಬರಹಗಳನ್ನು ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ಬಳಸಿಕೊಳ್ಳಲಾಗುವುದು.
ತಮ್ಮ ಕಥೆಗಳನ್ನು ಲೇಖಕರ ಫೋಟೋ, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ 2026ರ ಫೆಬ್ರವರಿ 15ಕ್ಕೆ ಮುನ್ನ ತಲುಪುವಂತೆ ಸಂಪಾದಕರು, ಚೆನ್ನೈ ಲಹರಿ, ಕನ್ನಡ ಬಳಗ ಸೋಷಿಯೋ ಕಲ್ಚರಲ್ ಅಸೋಸಿಯೇಷನ್, ಅ/o ಜಯಂತಿ ಪ್ರಿಂಟರ‍್ಸ್, ನಂ. 5, ಗೋವಿಂದರಾಜನ್ ರಸ್ತೆ, ಪುಲಿಯೂರುಪುರಂ, ಕೋಡಂಬಾಕಮ್, ಚೆನ್ನೈ–600024 ಇಲ್ಲಿಗೆ ಕಳುಹಿಸಬೇಕು.
ಅಥವಾ laharibalaga@gmail.com ಇಲ್ಲಿಗೆ ಸಾಫ್ಟ್’ಕಾಪಿಯ ವರ್ಡ್ ಮತ್ತು ಪಿಡಿಎಫ್ ಕಾಪಿಯನ್ನು ಈಮೇಲ್ ಮಾಡಬೇಕಿದೆ. ಹೆಚ್ಚಿನ ಮಾಹಿತಿಗೆ 9962035934/9449821225 ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















