ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಹಳ್ಳಕ್ಕೆ ಬಿದ್ದ ಕಾರೊಂದು ಬೆಂಕಿ ಹೊತ್ತಿಕೊಂಡು ಉರಿದಿದ್ದು, ಕಾರು ಸಹಿತ ಚಾಲಕ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೊಲಪಲ್ಲಿ ಎಂಬಲ್ಲಿ ನಡೆದಿದೆ.
ಮೃತ ಚಾಲಕನನ್ನು ಇಬ್ರಾಹಿಂ(48) ಎಂದು ಗುರುತಿಸಲಾಗಿದೆ.
Also read: ಚಿಕ್ಕಮಗಳೂರು | ಜಲಪಾತದಲ್ಲಿ ಮುಳುಗಿ ಟೆಕ್ಕಿ ದುರ್ಮರಣ
ಇಬ್ರಾಹಿಂ ವ್ಯಾಪಾರ ಮುಗಿಸಿಕೊಂಡು ಒಮಿನಿ ಕಾರಿನಲ್ಲಿ ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕಾರು ಹಳ್ಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಸಮೇತ ಚಾಲಕ ಸುಟ್ಟು ಹೋಗಿದ್ದಾನೆ. ಮೃತ ದೇಹವನ್ನು ಚಿಂತಾಮಣಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಕೆಂಚಾಲಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post