ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ವಿದ್ಯಾರ್ಥಿಗಳ #Student ಮೇಲೆ ಖಾಸಗಿ ಬಸ್’ವೊಂದು #Bus ಹರಿದಿದ್ದು, ಪರಿಣಾಮವಾಗಿ ಓರ್ವ ಬಾಲಕಿ ದುರ್ಮರಣವನ್ನಪ್ಪಿದ್ದಾಳೆ.
ಜಿಲ್ಲೆಯ ತರೀಕೆರೆ #Tarikere ತಾಲೂಕಿನ ಕಾವಲ್ ದುಗ್ಲಾಪುರ ಗೇಟ್’ನಲ್ಲಿ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತುಳಸಿ(15) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ.

ಬಸ್ ಮಿತಿ ಮೀರಿದ ವೇಗದಿಂದ ಚಲಿಸಿ, ನಿಯಂತ್ರಣ ತಪ್ಪಿದ್ದು ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ. ಮಕ್ಕಳ ಮೇಲೆ ಹರಿದ ಬಸ್, ಅಲ್ಲಿನ ನಿಲ್ದಾಣ
ಹಾಗೂ ಮನೆಗಳಿಗೂ ಸಹ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಐವರು ಮಕ್ಕಳು ಸ್ಪಲ್ಪದರಲ್ಲಿ ಪಾರಾಗಿದ್ದಾರೆ.

ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.











Discussion about this post