ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಚಿಕ್ಕಮಗಳೂರು #Chikkamagalur ಹಾಗೂ ಶಿವಮೊಗ್ಗ #Shivamogga ಜಿಲ್ಲೆಗಳಲ್ಲಿ ಅಂಗಡಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ಡಿ.18ರಂದು ರಾತ್ರಿ ಬಾಳೆಹೊನ್ನೂರಿನಲ್ಲಿ ಕಾಫಿ ವ್ಯಾಪಾರ, ದಿನಸಿ ಅಂಗಡಿ ಮತ್ತು ಬಾರ್ ರೋಲಿಂಗ್ ಶಟರ್ ಎತ್ತಿ ಒಟ್ಟು 22,000.00 ನಗದು, 27,000 ಮೌಲ್ಯದ ವಾಚ್’ಗಳು, 11,000 ಬೆಲೆಯ ಡಿವಿಆರ್ ಮತ್ತು 3 ಮದ್ಯದ ಬಾಟಲಿಗಳನ್ನು ಹಾಗೂ ಇನ್ನೊಂದು ದಿನಸಿ ಅಂಗಡಿ ಕಳ್ಳತನಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ ಬಾಳೆಹೊನ್ನೂರು ಪೊಲೀಸರು ಎರಡು ಜನರನ್ನು ದಸ್ತಗಿರಿ ಮಾಡಿದ್ದಾರೆ.
Also Read>> ಮಂಡ್ಯ | ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಭೀಕರ ಆತ್ಮಹತ್ಯೆ | ದೇಹ ಛಿದ್ರ-ಛಿದ್ರ | ಕಾರಣವೇನು?
ಇದೇ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರುಗಳು ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು #Balehonnur ಪಿಎಸ್’ಐ ರವೀಶ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಕೆ.ಜೆ. ಶಂಕರ್, ಜಯರಾಮ, ಮಂಜುನಾಥ, ವಿನಾಯಕ, ಮನು ಮಂಜುನಾಥ್, ಕಿರಣ್, ಭೀಮಸೇನಾ, ಚನ್ನಯ್ಯ ಮತ್ತು ಕಾರ್ತಿಕ್ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post