ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು/ಶಿವಮೊಗ್ಗ |
ಈಜುವ ಸಲುವಾಗಿ ತೆರಳಿದ್ದ ತೆಪ್ಪ ಮುಳುಗಿ ಶಿವಮೊಗ್ಗ #Shivamogga ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು #Chikkamagaluru ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ ನಡೆದಿದೆ.
ತಾಲೂಕಿನ ಎನ್ ಆರ್ ಪುರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಶಿವಮೊಗ್ಗದ ವಿದ್ಯಾನಗರದ ಮೂವರು ನೀರು ಪಾಲಾಗಿದ್ದಾರೆ.

ಮೂವರು ಪ್ರವಾಸಕ್ಕೆಂದು ಅಲ್ಲಿಗೆ ತೆರಳಿದ್ದು, ಮಧ್ಯದಲ್ಲಿ ಈಜುವ ಸಲುವಾಗಿ ತೆಪ್ಪದಲ್ಲಿ ತೆರಳಿದ್ದರು ಎಂದು ಹೇಳಲಾಗಿದೆ.
Also read: ಕಾರವಾರ | NIA ದಾಳಿ | ಉಗ್ರರ ಜೊತೆ ಸಂಪರ್ಕ ಹಿನ್ನೆಲೆ ಶುಕ್ಕೂರ್ ಬಂಧನ | ಶಿವಮೊಗ್ಗಕ್ಕೂ ಇದೆಯಾ ಲಿಂಕ್
ವಿಷಯ ತಿಳಿದು ಸ್ಥಳಕ್ಕೆ ವನ್ಯಜೀವಿ ಅರಣ್ಯ ವಿಭಾಗದ ಸಿಬ್ಬಂದಿ ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದೂ, ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post