ಕಲ್ಪ ಮೀಡಿಯಾ ಹೌಸ್ | ಚಿಕ್ಕೋಡಿ |
ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ಬಳಿಯ ಅಳಖನೂರು ಹೊರ ವಲಯದಲ್ಲಿ ನಡೆದಿದೆ.
ಮೃತರನ್ನು ಗಿರೇಪ್ಪಾ ಕುಂದರಾಳಿ (38), ಪತ್ನಿ ಮಂಜುಳಾ ಕುದ್ರಾಳಿ (28) ಹಾಗೂ ಮಗಳು ಆರಾಧ್ಯಾ (7) ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದ ಮೂವರು ಬೈಕ್’ನಲ್ಲಿ ಜಯಸಿಂಗಪುರದಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಜಮಖಂಡಿ-ಮೀರಜ ರಾಜ್ಯ ಹೆದ್ದಾರಿಯ ಅಲಖನೂರ ಗ್ರಾಮ ಹೊರವಲಯದಲ್ಲಿ ಎದುರಿಗೆ ಬಂದ ಲಾರಿ ಬೈಕ್’ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಹಾರುಗೇರಿ ಪೊಲೀಸ್ ಸ್ಟೇಷನ್’ನಲ್ಲಿ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















