No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Saturday, August 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ | ಸರಣಿ ಅಪಘಾತಗಳಿಗೆ ಯಾರು ಹೊಣೆ? ಕ್ರೇಜ್’ಗೆ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ

kalpa News by kalpa News
April 1, 2026
in ಶಿವಮೊಗ್ಗ
0
ಶಿವಮೊಗ್ಗ | ಸರಣಿ ಅಪಘಾತಗಳಿಗೆ ಯಾರು ಹೊಣೆ? ಕ್ರೇಜ್’ಗೆ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ವಿಶೇಷ ಲೇಖನ: ರವಿಕುಮಾರ್ ಕೆಎಂ, ಹವ್ಯಾಸಿ ಬರಹಗಾರರು  | 

ನಗರದ ಬಸ್ ನಿಲ್ದಾಣ ಬಳಿ ನಿನ್ನೆ ಭೀಕರ ಅಪಘಾತ ಸಂಭವಿಸಿದ್ದು ಇದಕ್ಕೆ ಮೂಲವಾಗಿ ಕಾರಣ ಯಾರು? ಹೊಣೆಯನ್ನು ಹೊತ್ತಿಕೊಳ್ಳಬೇಕಾದ ಇಲಾಖೆ ಯಾವುದು? ಎಂಬುದೇ ಸಾರ್ವಜನಿಕ ವಲಯದಲ್ಲಿ ಮೂಡುತ್ತಿರುವ ಪ್ರತಿನಿತ್ಯದ ಶಾಪಗ್ರಸ್ತವಾದ ಪ್ರಶ್ನೆಗಳಾಗಿವೆ?

ಅಂದ ಮಾತ್ರಕ್ಕೆ ನಗರದಲ್ಲಿ ನಡೆದ ಅಪಘಾತಗಳು #RoadAccident ಇದೇ ಮೊದಲಲ್ಲ. ಅದೆಷ್ಟೋ ಅಪಘಾತಗಳು ಪ್ರಮುಖ ವೃತ್ತಗಳಲ್ಲಿ ನಡೆದಿರುವುದು ಭಯಾನಕವಾದ ಸಂಗತಿಯಾಗಿದೆ.

Also Read: ಸಂಕೇತ್‌ ಸಮಾಧಿ ಧ್ವಂಸ | ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ

ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ ಇದರ ನಡುವೆ ಅಪಘಾತಗಳು ಕೂಡ ಹೆಚ್ಚಾಗಿದ್ದು ಭಾರೀ ವಾಹನಗಳ ಅವಸರದ ಚಾಲನೆಯೋ, ಇಲ್ಲ ಅಜಾಗರೂಕತೆಯ ಚಾಲನೆಯೋ ಏನೋ ಒಟ್ಟಿನಲ್ಲಿ ಸಣ್ಣ ಪ್ರಮಾಣದ ವಾಹನ ಸವಾರರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅದರಲ್ಲಂತೂ ಪಾದಚಾರಿಗಳ ಕಷ್ಟ ಹೇಳಲಾಗದು ಸಮಸ್ಯೆಯನ್ನು ಅನುಭವಿಸಿದವರಿಗೆ ಗೊತ್ತು. ಒಂದು ಬಾರಿ ರಸ್ತೆಗೆ ಇಳಿದರೆ ಮನೆ ಸೇರುವುದು ಅಷ್ಟು ಸುಲಭವಲ್ಲ ಆ ರೀತಿಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ನರ್ತನವು ನಡೆದು ಕೊನೆಗೆ ಅಪಾಯದ ದರ್ಶನವಾಗುತ್ತದೆ.ಇನ್ನು ವಯಸ್ಸಾದವರು, ರೋಗಿಗಳು, ಶಾಲಾ ಮಕ್ಕಳು, ಸ್ತ್ರೀಯರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಜೀವಕ್ಕೆ ಬೆಲೆ ಇಲ್ಲ, ಡ್ರೈವಿಂಗ್ ಕ್ರೇಜ್ ಗೆ ಬೆಲೆಯಿದೆ ಎಂದೆನಿಸುತ್ತದೆ.

ಸಮಯದ ಅಭಾವದಿಂದ ಎಲ್ಲರೂ ಅವಸರವಾಗಿ ಹೋಗುವಂತಿದ್ದು, ಚಾಲನೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಆ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಪೋಲಿಸ್ ಇಲಾಖೆಯು ಇತ್ತೀಚೆಗೆ ಹತ್ತು ಹಲವು ರೀತಿಯಲ್ಲಿ ವಾಹನ ಸವಾರರಿಗೆ ನಿಯಮಗಳನ್ನು ಪಾಲಿಸುವುದು ಹೇಗೆ ಎಂದು ಸಾರ್ವಜನಿಕವಾಗಿ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಹಾಗೆಯೇ ನಗರದಲ್ಲಿ 14 ಪ್ರಮುಖ ವೃತ್ತಗಳಲ್ಲಿ, ಹಂಪ್ಸ್’ಗಳು ಇರುವ ಕಡೆಗಳಲ್ಲಿ ಸೋಲಾರ್ ಸ್ಟಡ್’ಗಳನ್ನು ಅಳವಡಿಸಿ ರಾತ್ರಿ ನಡೆಯುವ ಅಪಘಾತಗಳು ತಡೆಗಟ್ಟಲು ಪಣತೊಟ್ಟಿದ್ದಾರೆ. ಇನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರಿಗೆ ITMS (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ಮೂಲಕ ಇ- ಚಲನ್ ವ್ಯವಸ್ಥೆಯಲ್ಲಿ ದಂಡ ಹಾಕುವುದರ ಜೊತೆಯಲ್ಲಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಗಾಳಿಗೆ ತೂರಿ ಹಿಂದಕ್ಕೆ ಒರೆಸಿಕೊಂಡು ಇನ್ನೊಬ್ಬರ ಜೀವಕ್ಕೆ ಕುತ್ತು ತರುವ ಸವಾರರಿಗೆ ಇದಷ್ಟೇ ಅಲ್ಲದೇ ಇನ್ನು ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾಗಿದೆ. ಏಕೆಂದರೆ, ಅವರ ಕ್ರೇಜ್ ಇನ್ನೊಂದು ಜೀವ ತೆಗೆಯುವ ಹಕ್ಕು ಯಾರಿಗೂ, ಯಾವನಿಗೂ ಇಲ್ಲ.ಇಷ್ಟೆಲ್ಲ ನಿಯಮಗಳನ್ನು ಮಾಡಿದರೂ ಕೂಡ ಅಪಘಾತಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ. ಇದು ಪೋಲಿಸ್ ಇಲಾಖೆಗೆ ಪ್ರತಿನಿತ್ಯದ ತಲೆನೋವಾಗಿ ಪರಿಣಮಿಸಿದೆ.

ಅವಸರವೇ ಅಪಘಾತಕ್ಕೆ ಕಾರಣ
ಇದು ವಾಹನ ಸವಾರರಿಗೆ ದಿನನಿತ್ಯದ ಗೋಳಾಗಿದೆ. ಎದುರುಗಡೆ, ಅಕ್ಕ-ಪಕ್ಕದಿಂದಲೂ ಯಾವುದೋ ರೂಪದಲ್ಲಿ ಅಪಘಾತಕ್ಕೆ ನೇರವಾಗಿ ಕಾರಣವಾಗುತ್ತಿರುವುದು ಪ್ರಮುಖ ವೃತ್ತಗಳಲ್ಲಿನ ಅವೈಜ್ಞಾನಿಕ, ಅಸಡ್ಡೆಯ ಕೆಂಪು, ಹಳದಿ, ಹಸಿರು ತೋರಿಸುವ ಸಿಗ್ನಲ್. ಯಾಕೆಂದರೆ, ನಗರದ ರೈಲ್ವೆ ನಿಲ್ದಾಣ ಬಳಿ ಇರುವ ಸಿಗ್ನಲ್ ವೃತ್ತದಲ್ಲಿ ಟೈಮರ್ ವಾಹನ ಸವಾರರಿಗೆ ಕಾಣಿಸುವಂತೆ ಇರುವುದು ಬಿಟ್ಟರೆ ನಗರದ ಬೇರೆ ವೃತ್ತದಲ್ಲಿ ಈ ಟೈಮರ್ ಇದ್ದು ಇಲ್ಲದಂತಾಗಿದೆ. ಇದರಿಂದಾಗಿ ಸಿಗ್ನಲ್ ಬಿಡುತ್ತದೆ, ಬೀಳುತ್ತದೆ ಎನ್ನುವಂತ ಗಾಬರಿ ಹಾಗೂ ಅವಸರದಲ್ಲಿ ಸಿಗ್ನಲ್ ಜಂಪ್ ಮಾಡಿ ಅಪಘಾತ ಕಾರಣ ಆಗಿರುವುದು ಹೆಚ್ಚಿನ ಸಂಖ್ಯೆಯಲ್ಲಿವೆ.

ಇಂತಹ ಅತ್ಯಾಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಅಡಗೂಲಜ್ಜಿ ಕಾಲದ ತಂತ್ರಜ್ಞಾನದಲ್ಲಿ ಇದ್ದು ದಂಡ ಕಟ್ಟಿಸಿಕೊಳ್ಳುವವುದು ಮುಖ್ಯವಾಗಬಾರದು. ಬದಲಾಗಿ ಇನ್ನಾದರೂ ಎಚ್ಚೆತ್ತುಕೊಂಡು ನಗರದ ಎಲ್ಲಾ ವೃತ್ತದಲ್ಲಿ ಸಿಗ್ನಲ್ ಕಡೆ ಟೈಮರ್, ಸೆಕೆಂಡ್, ನಿಮಿಷದ ಅಂಕೆಗಳು ಕಾಣುವಂತೆ ಮಾಡಿದರೆ ಅವಸರದಿಂದ ಸಿಗ್ನಲ್ ಜಂಪ್ ಮಾಡಿ ಅಪಘಾತ ಸಂಭವಿಸುವ ಇನ್ನೊಂದು ಜೀವ ತೆಗೆಯುವ ಕೆಲಸ ಆಗುವುದಿಲ್ಲ.

ಪೋಲಿಸ್ ಇಲಾಖೆಯ ಕೆಲಸಕ್ಕೆ ನಾವು ಸದಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಇದೊಂದು ಕೆಲಸವಾದರೆ ಸ್ವಲ್ಪೇ ಸ್ವಲ್ಪ ಮಟ್ಟಿಗೆ ಸಣ್ಣ ಪ್ರಮಾಣದ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: accidentKannada NewsKannada News LiveKannada News Online ShivamoggaKannada WebsiteKannadaNewsWebsiteLatestNewsKannadaLocalNewsMalnadNewsNews in KannadaNews KannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share300Tweet188Send
Aniruddha Vasishta S R

Aniruddha Vasishta S R

Editor-in-Chief

Previous Post

ಮಳೆಯಿಂದಾಗಿ ಜನಸಾಮಾನ್ಯರಿಗೆ ಸಂಕಷ್ಟ: ಶಾಸಕ ಚನ್ನಬಸಪ್ಪ ವಿಷಾದ

Next Post

ಸಂಕೇತ್‌ ಸಮಾಧಿ ಧ್ವಂಸ | ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ

kalpa News

kalpa News

Next Post
ಸಂಕೇತ್‌ ಸಮಾಧಿ ಧ್ವಂಸ | ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ

ಸಂಕೇತ್‌ ಸಮಾಧಿ ಧ್ವಂಸ | ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL