ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿರುವ ರೇಡಿಯೋ ಶಿವಮೊಗ್ಗ 90.8 ಎಫ್’ಎಂ, ನ.14ರ ನಾಳೆ ದಿನ ಸಂಪೂರ್ಣ ಕಾರ್ಯಕ್ರಮಗಳನ್ನು ಮಕ್ಕಳಿಂದಲೇ ನಡೆಸಲಿದೆ.
ಇದು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಜೂನಿಯರ್ ಆರ್’ಜೆ ಹೆಸರಿನ ಮಕ್ಕಳಿಗಾಗಿಯೇ ಸಿದ್ಧಪಡಿಸಿದ ವಿಭಿನ್ನ ಕಾರ್ಯಕ್ರಮ ಮೂಡಿಬರುತ್ತಿದೆ.
ಬೆಳಗ್ಗೆ 6 ರಿಂದ ರಾತ್ರಿ 8 ಘಂಟೆಯವರೆಗೂ ನಡೆಯುವ ಕಾರ್ಯಕ್ರಮಗಳು, ಜಾಗೃತಿಯ ಕಾರ್ಯಕ್ರಮಗಳು, ನೇರಪ್ರಸಾರ, ಸುದ್ಧಿ ಸಮಾಚಾರ ಎಲ್ಲವನ್ನೂ ಮಕ್ಕಳೇ ನಡೆಸಿಕೊಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಿವಮೊಗ್ಗ, ಬೆಂಗಳೂರು, ಹಾವೇರಿ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಹೀಗೆ ವಿವಿಧ ಜಿಲ್ಲೆಯ 25 ಕ್ಕೂ ಹೆಚ್ಚಿನ ಮಕ್ಕಳು ಜೂನಿಯರ್ ಆರ್’ಜೆ’ಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ದಿನಚರಿಯನ್ನು ಜೂನಿಯರ್ ಆರ್’ಜೆ ಪೂಜಾ.ಡಿ.ಜಿ, ಚಂದನ್. ಡಿ.ಜಿ, ಅರುಣೋದಯ’ ಈ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆ ಅಬ್ಧಿ ಆರ್ ನಾಡಿಗ್, ಗಾಂಧಿಓದು’ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆ ಮೇಘನಾ.ಎ.ಬಿ, ವಚನ ವಿಹಾರ’ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆ ಪ್ರಯಾಗ್.ಡಿ.ಎಚ್, ಸಾನ್ವಿ ಪಿ. ದೇವಾಡಿಗ ಮತ್ತು ಸಂಸ್ಕೃಪತಿ, ಜೂನಿಯರ್ ಆರ್’ಜೆ ಖುಷಿ ಮತ್ತು ಕೃತಿಕಾ ಮಂಕುತಿಮ್ಮನ ಕಗ್ಗ’ ದ ವಾಚನ ಮತ್ತು ನಿರೂಪಣೆ ಮಾಡಲಿದ್ದಾರೆ.
ಸೋಶಿಯಲ್ ಮೀಡಿಯಾ ಕಥೆಗಳು’ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆ ಕರಣ್ ನಡೆಸಿಕೊಡಲಿದ್ದಾರೆ. ವಿಜ್ಞಾನದ ವಿಶೇಷತೆಯ ಜಾಣಸುದ್ದಿ ಬಗ್ಗೆ ಜೂನಿಯರ್ ಆರ್’ಜೆ ವಚನ.ಎಂ.ಬಿ, ಪರಿಸರದ ಬಗ್ಗೆ ಜೂನಿಯರ್ ಆರ್’ಜೆ ವೈಷ್ಣವಿ, ಆವಿಷ್ಕಾರದ ಅಸ್ಮಿತೆ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆ ಪ್ರಣವ್.ಡಿ.ಎಚ್, ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆ ಲಿಖಿತ, ಅಡುಗೆ ಮನೆಯಲ್ಲೊಂದು ಸುತ್ತು’ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆ ಆರೋಹಣ, ಸ್ಥಳೀಯ ಸುದ್ಧಿಗಳನ್ನು ತಿಳಿಸುವ ಸುತ್ತಮುತ್ತಾ’ ಸುದ್ಧಿ ಸಮಾಚಾರವನ್ನು ಜೂನಿಯರ್ ಆರ್’ಜೆ ಸಮನ್ವಿತ, ಪಂಚತಂತ್ರ ಕಥೆಯನ್ನು ಜೂನಿಯರ್ ಆರ್’ಜೆ ವೈಷ್ಣವಿ, ಕಾಫಿ ವಿತ್ ಆರ್ ಜೇಸ್, ಸಿನಿಕಹಾನಿ ನೇರ ಫೋನ್ ಇನ್ ಕಾರ್ಯಕ್ರಮವನ್ನು ಜೂನಿಯರ್ ಆರ್’ಜೆಗಳಾದ ದಿಶಾ.ಪಿ, ಪ್ರಯಾಗ್ ಮತ್ತು ಪರ್ಣವಿ ಇವರುಗಳು ನಡೆಸಿಕೊಡಲಿದ್ದಾರೆ.

ಒಟ್ಟಾರೆಯಾಗಿ 25 ಕ್ಕೂ ಹೆಚ್ಚಿನ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಸೇರಿ ಇಡೀ ದಿನದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದು ಜೊತೆಗೆ ಕಾರ್ಯಕ್ರಮಗಳ ಮಧ್ಯೆ ಪ್ರಸಾರ ಆಗುವ ಹಲವು ಹಾಡುಗಳನ್ನು ಮಕ್ಕಳೇ ಹಾಡಿದ್ದಾರೆ. ಇದು ಮಕ್ಕಳಲ್ಲಿ ರೇಡಿಯೋ ಬಗ್ಗೆ ಅಭಿರುಚಿ, ಆಸಕ್ತಿಯನ್ನು ಮೂಡಿಸುವ ಕಾರ್ಯವಾಗಿದೆ. ಮಕ್ಕಳ ಪ್ರತಿಭೆಗೊಂದು ಅವಕಾಶವನ್ನು ರೇಡಿಯೋ ಶಿವಮೊಗ್ಗ ನೀಡಿದೆ.
ಕಾರ್ಯಕ್ರಮದ ಸಂಯೋಜಕರು, ಆರ್’ಜೆಗಳು ಎಲ್ಲಾ ಮಕ್ಕಳಿಗೆ ಮಾರ್ಗದರ್ಶನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಎಲ್ಲಾ ಮಕ್ಕಳನ್ನು ಸಜ್ಜುಗೊಳಿಸಿದ್ದಾರೆ. ಒಂದು ದಿನದ ಸಂಪೂರ್ಣ ಕಾರ್ಯಕ್ರಮವನ್ನು ಮಕ್ಕಳೇ ನಡೆಸಿಕೊಡುತ್ತಿರುವುದರಿಂದ ಇದೊಂದು ದಾಖಲೆಯ ಕಾರ್ಯಕ್ರಮವಾಗಿದೆ. ಕೇಳುಗರು ಎಲ್ಲಾ ಕಾರ್ಯಕ್ರಮಗಳನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ನಮ್ಮ ರೇಡಿಯೋ ಶಿವಮೊಗ್ಗ 90.8 ಎಫ್’ಎಂ’ನ ಸಂಖ್ಯೆ 9686096279 ಗೆ ಕಳುಹಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post