No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Sunday, March 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಚಿರಂಜೀವಿ ಆನಂದಿ | ಅಮೇರಿಕಾಗೆ ಕಾಲಿಟ್ಟ ಮೊದಲ ಹಿಂದೂ ಮಹಿಳೆ: ಆಕೆಯನ್ನು ನೆನೆಯುವುದೇ ಒಂದು ಪುಣ್ಯ

ಭಾರತದಲ್ಲಿ ನೂರ್ಕಾಲ ಜೀವಂತವಾಗಿ ಬೆಳಗಬೇಕಿದ್ದ ದೀವಿಗೆ ನಂದಿಹೋಗಿತ್ತು 

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 31, 2023
in ಸಚಿನ್ ಪಾರ್ಶ್ವನಾಥ್
0
ಚಿರಂಜೀವಿ ಆನಂದಿ | ಅಮೇರಿಕಾಗೆ ಕಾಲಿಟ್ಟ ಮೊದಲ ಹಿಂದೂ ಮಹಿಳೆ: ಆಕೆಯನ್ನು ನೆನೆಯುವುದೇ ಒಂದು ಪುಣ್ಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್  |

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ. ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ಗಣಪತಿರಾವ್ ಅಮೃತೇಶ್ವರ್ ಜೋಶಿ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಯಮುನಾಳ ಜನನ. ಹೆಣ್ಣು ಅಂದಾಗೆಲ್ಲ ಒಂದು ಹೊರೆ ಎನ್ನುವ ಕಾಲ ಅದು. ಎಷ್ಟು ಬೇಗ ಆಗತ್ತಾದೋ ಅಷ್ಟು ಬೇಗ ಮದುವೆ ಮಾಡಿ ಸಾಗಿ ಹಾಕುವ ಧಾವಂತ. ಅದಕ್ಕೆ ಸರಿಯಾಗಿ ಒಂಬತ್ತು ತುಂಬಿದ್ದೇ ತಡ ಅದಾಗಲೇ ಪತ್ನಿ ಕಳೆದುಕೊಂಡ ಅಂಚೆ ಇಲಾಖೆಯ ತರುಣ ಗೋಪಾಲರಾಯ ಸಿಕ್ಕಿದ್ದ. ಅವನಿಗೋ ಅಜಮಾಸು ಮೂವತ್ತು. ಸದೈವವಶಾತ್ ಗೋಪಾಲನಿಗೆ ಅವಳೆಂದರೆ ಜೀವ. ಅದೇನೋ ಬಿಡಿಸಲಾಗದ ಬಂಧ. ಕಣ್ಣಲ್ಲಿ ಕಣ್ಣಿಟ್ಟು ಕಾದ. ತುಂಬಾ ನೋವು ಬಡಕಲು ಹುಡುಗಿಯ ಎದೆಯಲ್ಲಿ ಆನಂದ ತುಂಬಿದ. ಆ ಯಮುನಾಳ ಆನಂದಿ ಎಂದ. ಅಕ್ಷರ ಕಳಿಸಿದ, ತಿದ್ದಿದ, ಬರೆಸಿದ. ತುಂಬು ಪ್ರೀತಿಯ ಜೋಡಿಗೆ ಹೊಸ ಕಂದನ ಆಗಮನದ ಸಮಯ.

ಹದಿನಾಲ್ಕರ ಹರೆಯದ ಆನಂದಿಯ ಬಾಳಲ್ಲಿ ಪುಟ್ಟ ಗಂಡು ಮಗ ಬಂದ. ಆದರೇನು ಮಾಡುವುದು ಹುಟ್ಟು ಅನಾರೋಗ್ಯ ಪೀಡಿತ ಮಗು ಹುಟ್ಟಿದ ಕೆಲವೇ ದಿನಕ್ಕೆ ಮಣ್ಣಾಗಿ ಹೋಯಿತು; ಅವಳ ಖುಷಿಯು ಕೂಡ. ಕಷ್ಟದ ದಿನಗಳಲ್ಲಿ ಆನಂದಿ ಅಂತರ್ಮುಖಿಯಾದಳು. ಬದುಕಿನ ಅರ್ಥ ಹುಡುಕಿದಳು. ಗಟ್ಟಿ ಮನಸು ಮಾಡಿ ವೈದ್ಯೆಯಾಗುವ ಕನಸು ಕಂಡಳು. ಆ ಸಮಯವೋ ಸರಿಯಾದ ಒಂದು ಕಾಲೇಜು ಇರಲಿಲ್ಲ. ಛಲ ಬಿಡಲಿಲ್ಲ. ಇಂಗ್ಲಿಷ್ ಕಲಿತಳು. ಅಲ್ಲೆಲ್ಲೋ ಅಮೇರಿಕೆಯ ಅಂಗಳದಲ್ಲಿ ಒಂದು ಭರವಸೆಯ ರೇಖೆ ಕಂಡಿತು.
ಹೌದು ಕಾಲೇಜು ಇದೆ ಅಂತ ಗೊತ್ತಾಗಿದ್ದೇ ತಡ ಗೋಪಾಲರಾಯ ಒಂದು ಪತ್ರ ಬರೆದೇಬಿಟ್ಟರು. ತನ್ನೆಲ್ಲ ನೋವು, ಕನಸುಗಳ ಬರೆದು ಕಳಿಸಿದ ಮೇಲೆ ಉತ್ತರವೂ ಬಂತು. ತುಂಬಾ ಸರಳವಾಗಿತ್ತು ನೀವಿಬ್ಬರೂ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದಾದರೆ ನಿಮ್ಮ ಜವಾಬ್ದಾರಿ ನಮ್ಮದೇ ಅಂತ! ಹೇಗೆ ಒಪ್ಪೀತು ಆ ಜೀವ? ಕನಸಿಗಾಗಿ ಬದುಕು ಮಾರುವುದೇ? ಛೇ, ಎಂತ ದುಷ್ಟ ಸಮಾಜ ಎನ್ನುವಾಗಲೇ ಅದು ಹೇಗೋ ಈ ಪತ್ರ ವ್ಯವಹಾರ ತಿಳಿದ ಅಮೇರಿಕನ್ ಮಹಿಳೆಯೊಬ್ಬರು ಆನಂದಿ ಇನ್ನು ನನ್ನ ಮನೆಮಗಳು ಕಳಿಸಿಕೊಡಿ, ಅವಳ ಜವಾಬ್ದಾರಿ ನನ್ನದೇ ಎಂದು ಒಂದು ಪತ್ರ ಬರೆದಿದ್ದರು. ಕನಸಿಗೆ ಒಂದು ಕಾಣದ ಆಸರೆ ದೊರಕಿತ್ತು. ಸ್ವರ್ಗಕ್ಕೆ ಮೂರೇ ಗೇಣು. ಆನಂದಿಗೆ ರೆಕ್ಕೆ ಬಂದಿರಲಿಕ್ಕೂ ಸಾಕು. ಉಹುಂ ಹಾಗೇ ಬಹಳ ದಿನ ಉಳಿಯಲಿಲ್ಲ. ಎಂದೂ ಕಾಣದ ಊರಿಗೆ, ಯಾರು ಗೊತ್ತಿರದ ಪರದೇಶಿಗಳ ನಾಡಿಗೆ ತಮ್ಮ ಮನೆಮಗಳು ಹೊರಟದ್ದು ಯಾಕೋ ಕೆಲವರಿಗೆ ಸರಿ ಕಾಣಲಿಲ್ಲ. ಆದರೆ ಅದೆಲ್ಲಿತ್ತೋ ಧೈರ್ಯ? ಅವರೆಲ್ಲರ ಎದುರು ನಿಂತ ಆನಂದಿ ಎಲ್ಲರಿಗೂ ಉತ್ತರ ನೀಡಿದಳು. ರಾಶಿ ಕನಸುಗಳ ಕಟ್ಟಿಕೊಂಡು ಪಶ್ಚಿಮದ ನಾಡಿನ ಅಮ್ಮನ ಮನೆಗೆ ಹೊರಟಿದ್ದಳು.
ಅದೇ ಚಂದದ ಪತ್ರ ಬರೆದ ಅಮೇರಿಕೆಯ ತಾಯಿ ತಿಯೊಡಿಸಿಯ ಆನಂದಿಯ ಅಪ್ಪಿದಳು. ಒಲುಮೆಯಿಂದ ಸಾಕಿ ಸಲಹಿದಳು. 1886 ಆನಂದಿಯ ವರ್ಷ. ಹೌದು, ಆ ವರ್ಷ ಅವಳು ಕನಸನ್ನು ಸಾಧಿಸಿದ್ದಳು. ಪೆನ್ಸಿಲ್ವೆನಿಯಾ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದಳು. ಅವಳು ಭಾರತಕ್ಕೆ ಮರಳಿದ್ದು ಬರಿ ವೈದ್ಯೆಯಾಗಿಯಲ್ಲ. ಅವಳಂತಹ ಸಾವಿರಾರು ಮಹಿಳೆಯರಿಗೆ ಒಂದು ಧ್ಯೇಯವಾಗಿ. ಅಮೇರಿಕಾಗೆ ಕಾಲಿಟ್ಟ ಏಷ್ಯಾದ ಮೊದಲ ಮಹಿಳೆ, ಮೊದಲ ಹಿಂದೂ ಮಹಿಳೆ, ಅಷ್ಟೇ ಏಕೆ? ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊಟ್ಟಮೊದಲ ಮಹಿಳಾ ವೈದ್ಯೆ ಎಂದೆಲ್ಲಾ ಕರೆಸಿಕೊಂಡ ಆನಂದಿ ವೈದ್ಯೆಯಾಗಿ ಭಾರತಕ್ಕೆ ಬಂದಳು. ಎಲ್ಲೆಲ್ಲೂ ಅಭಿನಂದನೆಯ ಮಹಾಪೂರ.

ಕೊಲ್ಲಾಪುರ ಸಂಸ್ಥಾನದ ರಾಜಾಶ್ರಯದಲ್ಲಿ ವೈದ್ಯೆಯಾಗಿ, ಮುಖ್ಯಸ್ಥೆಯಾಗಿ ಉನ್ನತ ಸೇವೆ ನೀಡುತ್ತಿರುವಾಗಲೇ ಕಾಲ ಮತ್ತೆ ಟೊಂಕ ಕಟ್ಟಿಕೊಂಡು ಎದುರು ಬಂದು ನಿಂತಿತ್ತು. ಕಷ್ಟಗಳ ಬಾನಿಗೆ ಏರಿ, ಸಮಾಜದ ತೊಡರುಗಳ ಜೀಕಿ, ಸಪ್ತ ಸಾಗರದ ಆಚೆಯಿಂದ ಯಶಸ್ಸು ದುಡಿದು ತನ್ನೊಳಗೆ ಬೆಳೆದಿದ್ದ ಕ್ಷಯ ರೋಗಕ್ಕೆ ಇನ್ನಿಲ್ಲದಂತೆ ದಣಿದಳು. ಯಾರಿಗೆ ಭವ್ಯ ಭಾರತದ ಶಿಲ್ಪಿ ಬಾಲಗಂಗಾಧರನಾಥ ತಿಲಕರು ಉಧೋ ಎಂದಿದ್ದರೋ, ಆ ತಾಯಿ ಔಷಧವಿಲ್ಲದೆ ಕ್ಷಯ ರೋಗಕ್ಕೆ ಶರಣಾದಳು. ಕಾಯಿಲೆಗಳು ಜಿದ್ದು ಕಟ್ಟಿಕೊಂಡು ನಿಂತಿದ್ದವೋ ಏನೋ? ಅಂದು ಫೆಬ್ರವರಿ 26, 1887 ಭಾರತದಲ್ಲಿ ನೂರ್ಕಾಲ ಜೀವಂತವಾಗಿ ಬೆಳಗಬೇಕಿದ್ದ ದೀವಿಗೆ ನಂದಿಹೋಗಿತ್ತು.

ಒಂಬತ್ತರ ಹರೆಯಕ್ಕೆ ಮದುವೆ, ಹದಿನಾಲ್ಕಕ್ಕೆ ಮಗು, ಇಪ್ಪತ್ತೆರಡರ ಹರೆಯಕ್ಕೆ ಎಂದೂ ಮರೆಯಲಾಗದಷ್ಟು ಯಶಸ್ಸಿನ ಕಥೆಯ, ನೆನಪುಗಳ ಗಂಟು ನೀಡಿ ಆನಂದಿ ಹೊರಟು ಹೋದಳು. ಪ್ರೀತಿಯ ಧಾರೆ ಎರೆವ ಗಂಡ, ಅವನ ಗಟ್ಟಿ ನೌಕರಿ, ಒಳ್ಳೆಯ ಮನೆ ಎಲ್ಲವನ್ನೂ ತೊರೆದು ಕನಸ ಭೇಟಿಯಾಗಿ, ಭಾರತವನ್ನು ಆರೈಸಲು ಬಂದ ಮಗಳು ಒಡಲಲಿ ಸಾವು ಕಟ್ಟಿಕೊಂಡು ಬಂದಳು. ಬದುಕಿದ್ದು ಕಾಲು ಶತಮಾನವೂ ಅಲ್ಲ. ಆದರೆ ಒಂದೂವರೆ ಶತಮಾನ ಕಳೆದರೂ ಆಕೆ ಚಿರಂಜೀವಿ. ಇಂದು ಮಾರ್ಚ್ 31, ಅವರ ಜನುಮದಿನ. ಅವರನ್ನು ನೆನೆಯುವುದು ಒಂದಿಷ್ಟು ಪುಣ್ಯ ಸಂಪಾದಿಸುವುದೇ ಸರಿ. ಈ ಲೇಖನ ಕ್ಷಣ ಹಣಗಳ ಲೆಕ್ಕ ಹಾಕದೇ ಅನೇಕರನ್ನು ಉಪಚರಿಸುವ ದೈವಸದೃಶ ಸುವೈದ್ಯರಿಗೆ ಅರ್ಪಣೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Balagangadharnath TilakChiranjeevi AnandiKannada News WebsiteKolhapurLatest News KannadaMaharashtraPennsylvaniaSachin Parshwanathಕೊಲ್ಲಾಪುರ ಸಂಸ್ಥಾನಚಿರಂಜೀವಿ ಆನಂದಿಪೆನ್ಸಿಲ್ವೆನಿಯಾಬಾಲಗಂಗಾಧರನಾಥ ತಿಲಕರುಮಹಾರಾಷ್ಟ್ರ
Share196Tweet123Send
Previous Post

ಜಿಲ್ಲಾಧಿಕಾರಿ ಹೈಅಲರ್ಟ್: ತಡರಾತ್ರಿವರೆಗೂ ಚುನಾವಣಾ ಚೆಕ್ ಪೋಸ್ಟ್ ಪರಿಶೀಲಿಸಿದ ಡಿಸಿ ಸೆಲ್ವಮಣಿ

Next Post

ಶಿವಮೊಗ್ಗ ಜಿಲ್ಲೆಯ ಐವರಿಗೆ ಪೊಲೀಸರಿಗೆ ಮಖ್ಯಮಂತ್ರಿಗಳ ಪದಕದ ಗೌರವ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ ಜಿಲ್ಲೆಯ ಐವರಿಗೆ ಪೊಲೀಸರಿಗೆ ಮಖ್ಯಮಂತ್ರಿಗಳ ಪದಕದ ಗೌರವ

ಶಿವಮೊಗ್ಗ ಜಿಲ್ಲೆಯ ಐವರಿಗೆ ಪೊಲೀಸರಿಗೆ ಮಖ್ಯಮಂತ್ರಿಗಳ ಪದಕದ ಗೌರವ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

February 28, 2026
ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

February 28, 2026
ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

February 28, 2026
ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

February 28, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಮಾರ್ಚ್ 1 ರಂದು ಬೆಂಗಳೂರಿನಿಂದ ಮುಂಬೈಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

February 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL