ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಮನೆಕಳ್ಳ ಹಾಗೂ ಬೈಕ್’ಗಳು ದೇವಸ್ಥಾನದಲ್ಲಿ ಕಳವು ಮಾಡಿದ್ದ ಒಟ್ಟು ಮೂರು ಜನ ಕಳ್ಳರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೋಲಿಸರು ಬಂಧಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಧಿಕಾ, ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪರಮೇಶ್ವರಪ್ಪ ಎಂಬುವರ ತೋಟದ ಮನೆಯಲ್ಲಿ ಮನೆ ಬೀಗ ಮುರಿದು ಬೀರುವಿನಲ್ಲಿದ್ದ 11 ಲಕ್ಷ ರೂ. ಮೌಲ್ಯದ 310 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದ ಕಳ್ಳ, ದಾವಣಗೆರೆ ಚನ್ನಗಿರಿ ತಾಲೂಕಿನ ನಾಗರಾಜ್ ನನ್ನು ಹೊಳಲ್ಕೆರೆ ಪೋಲಿಸರು ಬಂಧಿಸಿದ್ದಾರೆ.
ಬಂಧಿತನು ಕಳವು ಮಾಡಿದ್ದ ಒಡವೆಗಳನ್ನು ಫೈನಾನ್ಸ್’ಗಳಿಗೆ ಮಾರಾಟ ಮಾಡಿದ್ದು, ಫೈನಾನ್ಸ್’ಗಳಿಂದ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇನ್ನು ಹಾಗೂ ಹೊಸದುರ್ಗ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್’ಗಳ ಕಳ್ಳರಿಬ್ಬರನ್ನು ಬಂಧಿಸಿ ಅವರಿಂದ 6 ಮೌಲ್ಯದ 5 ಬೈಕ್’ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರಿಬ್ಬರು ಹೊಸದುರ್ಗ ದೇವಸ್ಥಾನಗಳಲ್ಲಿ ಕೂಡ ಕಳವು ಮಾಡಿದ್ದಾರೆ. ಅಷ್ಟೆ ಅಲ್ಲದೆ ಬಾರ್ ಅಂಡ್ ರೆಸ್ಟೋರೆಂಟ್ ಕಳವಿಗೆ ಯತ್ನಿಸಿದ್ದರು. ಈ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದರು.
ಈ ಕಳ್ಳರ ಬಂಧನಕ್ಕೆ ಎಸ್’ಪಿ ಜಿ. ರಾಧಿಕಾ ಹಾಗೂ ಎಎಸ್’ಪಿ ಮಹಲಿಂಗ ಬಿ. ನಂದಗಾವಿ ಮಾರ್ಗದರ್ಶನದಲ್ಲಿ ಡಿವೈಎಸ್’ಪಿ ಎಸ್. ಪಾಂಡುರಂಗ ವೃತ್ತ ನಿರೀಕ್ಷಕ ಕೆ.ಎನ್. ರವೀಶ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post