ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಮಾಜದ ಕಲ್ಯಾಣಕ್ಕಾಗಿ ಅನೇಕ ಸಾಧು ಸಂತರು, ಶರಣರು, ಪವಾಡ ಪುರುಷರು ಜನಿಸಿದ್ದಾರೆ.ಲ್ಲಿ ಮೌಢ್ಯತೆ ಕಂದಾಚಾರ ನಿರ್ಮೂಲನೆಗೆ ಶ್ರಮಿಸಿದವರಲ್ಲಿ ಸಂತ ಸೇವಾಲಾಲ್ ಕೂಡ ಒಬ್ಬರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಜಾರ ಸಮುದಾಯವು ಭಾರತೀಯ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ತನ್ನದೇ ಆದ ವಿಶೇಷ ವೇಷ-ಭೂಷಣ ಹಾಗೂ ಭಾಷೆಯನ್ನು ಹೊಂದಿದೆ ಎಂದು ಹೇಳಿದರು.
ಬಂಜಾರ ಸುಮುದಾಯದವರು ಕಷ್ಟ ಜೀವಿಗಳು. ಶ್ರಮದ ದುಡಿಮೆ ಶಕ್ತಿಯ ಬದುಕು ಎಂಬ ತತ್ವದ ಮೇಲೆ ಈ ಸಮುದಾಯ ನಿಂತಿದ್ದು, ಸಮುದಾಯದಲ್ಲಿ ಹೆಚ್ಚಿನ ಶಿಕ್ಷಣವನ್ನು ಕಲಿಯಬೇಕು, ಸುಸಂಸ್ಕೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಿವಸಾಧು ಸ್ವಾಮಿಜಿ, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ನಗರ ಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ವೀರಭದ್ರಯ್ಯ, ನಗರಸಭೆ ಸದಸ್ಯರು ತಾಲ್ಲೂಕು ಪಂಚಾಯಿತಿ ಸದಸ್ಯರು. ಗೀತಬಾಯಿ, ಪುರುಷೋತ್ತಮ ಸುಮುದಾಯದ ಮುಂಖಡರು ತಾಲ್ಲೂಕು ಅಧಿಕಾರಿಗಳಾದ ಚಂದ್ರಶೇಖರ್, ಶ್ರೀನಿವಾಸ್, ರಾಜೇಶ ಇದ್ದರು
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post