ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪ್ರತಿ ತಿಂಗಳು ಅಹವಾಲು ಸ್ವೀಕಾರ ಸಾರ್ವಜನಿಕರ ಸಭೆ ಮಾಡಬೇಕಿತ್ತು. ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹದಳದ ಎಸಿಬಿ ಅಧಿಕಾರಿ ಪ್ರಹ್ಲಾದ್ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲುಗಳನ್ನು ಸ್ವೀಕರಿಸಿಅವರು ಮಾತನಾಡಿದರು.
ನೌಕರರು ಯಾವುದೇ ಸಾರ್ವಜನಿಕ ನ್ಯಾಯಯುತವಾಗಿ ಮಾಬೇಕಾದ ಕೆಲಸಕ್ಕೆ ಲಂಚ ಪಡೆಯುವುದು ಲಂಚದ ರೂಪದಲ್ಲಿ ಬೇರೆ ರೀತಿಯ ಅವ್ಯವಹಾರಗಳನ್ನು ನಡೆಸುವುದು ತಪ್ಪು. ಇದೇ ರೀತಿಯಾಗಿ ಹುದ್ದೆ ದುರ್ಬಳಕೆ ಮಾಡಿಕೊಂಡು ಗಳಿಕೆ ಮಾಡುವುದು 1988 ಭ್ರಷ್ಟಚಾರ ನಿಯಂತ್ರಣ ಕಾಯ್ದೆಯನ್ವಯ ಅಪರಾದವಾಗುತ್ತದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಹೊಂದಿರುವ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.
ಒಂದು ವೇಳೆ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಕಾನೂನು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ಕೆಲಸ ಮಾಡಿಕೊಡಲು ಲಂಚದ ಹಣಕ್ಕೆ ಒತ್ತಾಯಿಸಿದ ಅಧಿಕಾರಿಗಳ ವಿರುದ್ಧ ತಪ್ಪದೇ ದೂರು ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ಆರು ಪ್ರಕರಣದಗಳು ದಾಖಲಾಗಿದ್ದು, ಮೂರು ಪ್ರಕರಣಗಳು ಟ್ರಾಪ್ ಮಾಡಲಾಗಿದೆ. ಜಿಲ್ಲೆಯಲ್ಲಿ ಹೊಸದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳಲ್ಲಿ ಪ್ರಕರಣಗಳು ಹೆಚ್ಚುವ ದೂರುಗಳು ಬರುತ್ತಿವೆ. ಕೆಲವರು ನೇರವಾಗಿ ಕಚೇರಿಗೆ ಬಂದು ಕೇಸ್ ಮಾಡಿಸುತ್ತಾರೆ ಕೆಲವರು ಅಂಚೆ ಮೂಲಕ ಕೇಸ್ ಕಳುಹಿಸುತ್ತಾರೆ ಎಂದರು.
ಯಾರಾದರು ಲಂಚಕ್ಕಾಗಿ ಬೇಡಿಕೆ ಇಟ್ಟರೆ ಭ್ರಷ್ಠಚಾರ ನಿಗ್ರಹ ದಳ ಕಚೇರಿ 08194-230600, ಮೊಬೈಲ್ ಸಂಖ್ಯೆ 9480806286ಗೆ ಸಂಪರ್ಕಿಸಿ ದೂರು ನೀಡಿ ಎಂದರು.
ಭ್ರಷ್ಟಾಚಾರ ನಿಗ್ರಹ ದಳ ವಿಭಾಗದ ಯತಿರಾಜ, ತಾಲೂಕು ಪಂಚಾಯಿತಿ ಅಕೌಂಟೆಂಟ್ ರಮೇಶ್, ಮಂಜುನಾಥ್, ಸಾಣಿಕೆರೆ ರಘು, ಶಿವಣ್ಣ, ಮಹಾಂತೇಶ್, ಮಂಜುನಾಥ, ಸಾರ್ವಜನಿಕರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post