ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಇಲ್ಲಿನ ಭೋವಿ ಮಹಾ ಸಂಸ್ಥಾನ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ, #Geetha Shivarajkumar ನಟ ಶಿವರಾಜಕುಮಾರ ಭೇಟಿ ನೀಡಿ, ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಬಳಿಕ ನಿಟ್ಟೂರಿನ ನಾರಾಯಣ ಗುರು ಮಹಾ ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ, ಹೊಸದುರ್ಗದ ಭೋವಿ ಗುರುಪೀಠದ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ , ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠದ ಮಹಾಲಿಂಗ ಸ್ವಾಮೀಜಿ, ಇರಕಲ್ ಮಠದ ಬಸವ ಪ್ರಸಾದ್ ಸ್ವಾಮೀಜಿಯವರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಭೋವಿ ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಲಾಗಿದೆ. ಆದ್ದರಿಂದ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಪರ ಬೆಂಬಲ ಸೂಚಿಸುವುದಾಗಿ ಎಲ್ಲಾ ಸ್ವಾಮೀಜಿಗಳು ಸಭೆಯಲ್ಲಿ ಭರವಸೆ ನೀಡಿದರು.
Also read: ಭದ್ರಾವತಿಯಲ್ಲಿ ಗೀತಾ ಶಿವರಾಜಕುಮಾರ ರೋಡ್ ಷೋ | ತೆರೆದ ವಾಹನದಲ್ಲಿ ಮತಯಾಚನೆ
ಚುನಾವಣಾ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಭೋವಿ ಅಭಿವೃದ್ದಿ ನಿಗಮದ ರಾಜ್ಯ ಘಟಕ ಅಧ್ಯಕ್ಷ ಎಸ್. ರವಿಕುಮಾರ್, ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಕೆ. ತಾಜ್ ಪೀರ್, ಎನ್.ಡಿ. ಕುಮಾರ್, ಸಂದೀಪ, ದೇವಿಕುಮಾರ್, ಪ್ರಮುಖರಾದ ಬಿ. ಜಗದೀಶ್, ಧೀರರಾಜ್ ಹೊನ್ನವಿಲೆ, ದೇಶಾದ್ರಿ ಹೊಸ್ಮನೆ, ಕೆ.ಹರ್ಷ ಭೋವಿ, ತಿಮ್ಮರಾಜು, ಕೃಷ್ಣಪ್ಪ, ಸೊರಬ ಸುರೇಶ್ ಹಾವಣ್ಣನವರ್, ಸಾಗರ ಎಲ್. ಚಂದ್ರಪ್ಪ, ಶಿಕಾರಿಪುರದ ಸುನೀಲ್, ಭದ್ರಾವತಿಯ ಶಿವು ಪಾಟೀಲ್, ವಕೀಲ ಪ್ರಕಾಶ್ ಸೇರಿ ಭೋವಿ ಸಮಾಜದ ಪ್ರಮುಖರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

























