ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ನನಗೆ ಹೇರ್ ಕಟ್ ಮಾಡುವವರು ಬಿಡುವಾಗಿಲ್ಲ. ಹೀಗಾಗಿ, ಒಂದು ವೇಳೆ ಬಿಜೆಪಿ #BJP ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #BYVijayendra ಅವರು ಬಿಡುವಾಗಿದ್ದರೆ ಬಂದು ನನಗೆ ಕಟಿಂಗ್ ಮಾಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ #MadhuBangarappa ಕಟಕಿಯಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನನಗೆ ಕಟಿಂಗ್ ಮಾಡುವವರು ಫ್ರೀಯಾಗಿಲ್ಲ. ಒಂದು ವೇಳೆ ವಿಜಯೇಂದ್ರ ಫ್ರೀಯಾಗಿದ್ದರೆ ಬಂದು ನನಗೆ ಕಟಿಂಗ್ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.

Also read: ಪೋಷಕರೇ ಎಚ್ಚರ | ಆಟವಾಡುತ್ತಿದ್ದಾಲೇ ಸಂಪ್’ನಲ್ಲಿ ಬಿದ್ದು 2 ವರ್ಷದ ಮಗು ಸಾವು
ಇನ್ನು, ಜೂನ್ 4ರಂದು ವಿಜಯೇಂದ್ರ ಅವರ ಹಣೆಬರಹ ಏನು ಎಂಬುದು ತಿಳಿಯುತ್ತದೆ. ನನ್ನ ಹಣಬರಹ ನಾನು ನೋಡಿಕೊಳ್ಳುತ್ತೇನೆ, ತೊಂದರೆಯಿಲ್ಲ. ಇಷ್ಟು ವರ್ಷ ಬಿಜೆಪಿ ಹೊಲಸು ಮಾಡಿದ್ದನ್ನು ನಾವು ಸರಿ ಮಾಡುತ್ತಿದ್ದೇವೆ. ಪಠ್ಯ ಪರಿಷ್ಕರಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡಿದ್ದೇವೆ. ಬಿಜೆಪಿ ಹಣೆಬರಹಕ್ಕೆ ಶಿಕ್ಷಕರ ನೇಮಕಾತಿಯನ್ನೂ ಮಾಡಲಾಗಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿದ್ದೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post