ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಮೊಬೈಲ್ ಮೂಲಕ ಮಹಿಳೆಯರಿಗೆ ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಇದು ನಡೆದಿರುವುದು ಎಲ್ಲಿ ಅಂತಿರಾ ಚಳ್ಳಕೆರೆ ನಗರದಲ್ಲಿ. ಒಬ್ಬ ಆಸಾಮಿ ಇವನಿಗೆ 55 ವರ್ಷ ವಯಸ್ಸಾಗಿದೆ, ಆದರೂ ಇವನು ಮಾಡಿರುವ ಕಸಬು ಎಂಥರನ್ನೂ ಬೆಚ್ಚಿ ಬೀಳಿಸುತ್ತದೆ.
ಈ ಚಪಲ ಚನ್ನಿಗರಾಯ ಹಲವು ಮಹಿಳೆಯರ ನಂಬರ್ ಸಂಗ್ರಹಿಸಿ ಅವರಿಗೆ ಆಶ್ಲೀಲ ಪೋಟೋ ಹಾಕೋದು, ಅಶ್ಲೀಲ ಸಂದೇಶ ಕಳುಹಿಸೋದು, ಅವರಿಗೆ ವಿಡಿಯೋ ಕಾಲ್ ಮಾಡಿ ಆಶ್ಲೀಲವಾಗಿ ಬಟ್ಟೆ ಇಲ್ಲದೆ ನಿಂತು ಅವರಿಗೆ ತೋರಿಸೋದು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪಿಎಸ್’ಐ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ನಗರದ ತ್ಯಾಗರಾಜ ನಗರದ ರಾಮಕೃಷ್ಣ ಎನ್ನುವ ವ್ಯಕ್ತಿಯ ಮನೆಗೆ ಹೋದಾಗ ಪೋಲೀಸ್ ಕಂಡಡೊಡನೆ ಕಾಂಪೌಂಡ್ ಹಾರಿ ಹೋಗಲು ಪ್ರಯತ್ನ ಪಟ್ಟಿದ್ದ. ಆದರೆ ಪಟ್ಟು ಬಿಡದೇ ಆತನನ್ನು ಹಿಡಿದು ಠಾಣೆಗೆ ಎಳತಂದು ವಿಚಾರಿಸಿದಾಗ ನಿಜ ಬಾಯಿಬಿಟ್ಟಿದ್ದಾನೆ.
ಆಸಾಮಿಯ ಬಳಿ ಇದ್ದ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಅಶ್ಲೀಲ ಪೋಟೋ ಮತ್ತು ಸಂದೇಶ ಇರುವುದು ಬೆಳಕಿಗೆ ಬಂದಿದೆ.
ಕಳೆದ ಹಲವು ದಿನಗಳಿಂದ ಮಹಿಳೆಯರಿಗೆ ವಿಡಿಯೋ ಕಾಲ್ ಮಾಡುವುದು, ಆಶ್ಲೀಲವಾಗಿ ನಿಲ್ಲುವುದು, ವೀಡಿಯೋ ಕಾಲ್ ಕಟ್ ಮಾಡಿದರೆ ಅಶ್ಲೀಲ ಚಿತ್ರ ಹಾಗೂ ಅಶ್ಲೀಲ ಸಂದೇಶ ಕಳುಹಿಸುವುದು ಮಾಡುತ್ತಿದ್ದೆ ಎಂದು ಆತ ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿ ಹಲವು ಜಿಲ್ಲೆಗಳ ಯುವತಿಯರ ನಂಬರಗಳನ್ನು ಕಲೆಹಾಕಿ ಸಂದೇಶ ಕಳುಹಿಸುತ್ತಿದ್ದ ಎಂದು ವರದಿಯಾಗಿದೆ.
ಈತ ಮೊಬೈಲ್ ಮೂಲಕ ಸುಮಾರು 300ಕ್ಕೂ ಹೆಚ್ಚು ಮಹಿಳೆಯರಿಗೆ ಕಳುಹಿಸಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಯಾವ ಒಬ್ಬ ಮಹಿಯೂ ಮರ್ಯಾದೆಗೆ ಅಂಜಿ ದೂರು ನೀಡಲು ಮುಂದಾಗಿಲ್ಲ.
ಬಾತ್ಮೀದಾರರ ಮೂಲಕ ಮಾಹಿತಿ ಪಡೆದ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ ಎಂದು ಎಸ್’ಪಿ ಜಿ. ರಾಧಿಕಾ ತಿಳಿಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















