ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಜಾನಪದ ಸಾಹಿತ್ಯ ಮತ್ತು ಗ್ರಾಮೀಣಭಿವೃದ್ಧಿ ಶಿಕ್ಷಣ ಟ್ರಸ್ಟ್ ವತಿಯಿಂದ ನವಂಬರ್ ಕೊನೆ ವಾರದಲ್ಲಿ ವಿಚಾರ ಸಂಕಿರಣ ಮತ್ತು ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಆವರಿಸಿದ ಅವಧಿಯಲ್ಲಿ ಜಾನಪದ ಕಲಾವಿದರ ಬದುಕು ಅತ್ಯಂತ ಸಂಕಷ್ಟಕ್ಕೆ ಒಳಗಾಗಿತ್ತು. ನಿತ್ಯ ಜೀವನಕ್ಕೂ ಪರದಾಡುವಂತಹ ಸ್ಥಿತಿಯಿಂದ ನೆಮ್ಮದಿಯ ಬದುಕನ್ನು ಕಾಣದೆ ಅನೇಕ ಕಲಾವಿದರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಜಾನಪದ ಕಲಾವಿದರ ಜೀವನ-ಬದುಕು-ಬವಣೆ ಕುರಿತು ಚಿಂತನ ಮಂಥನ ಕಾರ್ಯಕ್ರಮ ಏರ್ಪಡಿಸಲು ಟ್ರಸ್ಟ್ ಮುಂದಾಗಿದೆ ಎಂದು ಹೇಳಿದರು.
ಜಿಲ್ಲೆಯ ಅನೇಕ ಜಾನಪದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿರುವ ಕಲಾವಿದರನ್ನು ಗುರುತಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಜಿಲ್ಲೆಯಾದ್ಯಂತ ಕಲಾವಿದರಾಗಿ ಸೇವೆಸಲ್ಲಿಸುತ್ತಿರುವ ಸೋಬಾನೆ ಪದ ಹಾಡುಗಾರರು, ಚೌಡಿಕೆ ಪದ, ಜೋಗಿಪದ, ತಮಟೆ ಉರುಮೆ, ನಾಟಕ ಹಿಮ್ಮೇಳಗಾರರು, ತಮಟೆ, ಉರುಮೆ, ಗೀಗಿಪದ, ಇನ್ನೂ ಅನೇಕ ಕ್ಷೇತ್ರದ ಕಲಾವಿದರು ಈ ವೇದಿಕಯನ್ನು ಸದುಪಯೋಗಪಡಿಸಿಕೊಳ್ಳಲು ಟ್ರಸ್ಟ್ ಕೋರುತ್ತದೆ. ರಂಗಭೂಮಿ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಇರುವ ಸಾಧಕರು ತಮ್ಮ ಸ್ವಪರಿಚಯ ಇರುವ ಪತ್ರಗಳೊಂದಿಗೆ ನವೆಂಬರ್ 23ರ ಒಳಗಾಗಿ ನಗರಂಗೆರೆ ಶ್ರೀನಿವಾಸ್, ಅಧ್ಯಕ್ಷರು ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಟ್ರಸ್ಟ್, ಪೋನ್ 9980004384 ಸಂಪರ್ಕಿಸಲು ಕೋರಲಾಗಿದೆ ಎಂದು ತಿಳಿಸಿದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post