ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಾರ್ವಜನಿಕರ ಬೇಡಿಕೆಯಂತೆ ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿಯ ಅವಧಿಯನ್ನು ನ.30ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ಮಣಿಪಾಲ ಕಸ್ತೂರಿ ಬಾ ಆಸ್ಪತ್ರೆಯ ಹಿರಿಯ ವ್ಯವಸ್ಥಾಪಕ ಸಚಿನ್ ಕಾರಂತ್ ಹೇಳಿದರು.
ನಗರದ ದಲ್ಲಾಲರ ಸಮುದಾಯ ಭವನದಲ್ಲಿ ತಾಲೂಕಿನ ಪತ್ರಕರ್ತರಿಗೆ ಮಣಿಪಾಲ ಆರೋಗ್ಯ ಕಾರ್ಡ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಣಿಪಾಲ ಕಸ್ತೂರಿ ಬಾ ಆಸ್ಪತೆ ವತಿಯಿಂದಿ ನೀಡಲಾಗುವ ವಿವಿಧ ಅರೋಗ್ಯ ಸೌಲಭ್ಯಗಳನ್ನು ಒಳಗೊಂಡ ಅರೋಗ್ಯ ಕಾರ್ಡ್ ಫಲಾನುಭವಿಯಾಗಲು ನ.30 ರ ಒಳಗೆ ನೋಂದಾಯಿತರಾಗಲು ಅವಕಶವಿದೆ. ಸಾರ್ವಜನಿಕರು ಕೂಡಲೆ ಈ ಅವಾಕಾಶವನ್ನು ಬಳಸಿಕೊಳ್ಳಬೇಕು. ಆರೋಗ್ಯ ಕಾರ್ಡಿನ ಸಂದರ್ಶನ ಶುಲ್ಕ ಪಾವತಿಸಿ ನುರಿತ ಮತ್ತು ತಜ್ಞ ವೈದ್ಯರನ್ನು ವರ್ಷದಲ್ಲಿ ಎಷ್ಟು ಬಾರಿಯಾದರೂ ಬೇಟಿಯಾಗಬಹದು. ಪ್ರಯೋಗಾಲಯ ಶುಲ್ಕದಲ್ಲಿ ಶೇ.25 ರಷ್ಟು ರಿಯಾಯ್ತಿ ಇದ್ದು ರೋಗಿಗಳಿಗೆ ಇದರಿಂದ ಹಚ್ಚು ಪ್ರಯೋಜನ ಸಿಗುತ್ತದೆ. ಒಳರೋಗಿಯಾದಲ್ಲಿ ಅವರ ಬಿಲ್ಲಿನ ಮೋತ್ತದ ಮೇಲೆ ಉಪಯೋಗವಾಗುವ ವಸ್ತುವನ್ನು ಹೊರತು ಪಡಿಸಿ ಶೇ.25 ರಷ್ಟು ರಿಯಾಯತಿ ಲಭ್ಯವಿದೆ ಎಂದರು.
ಔಷಧಿ ಚೀಟಿಯೊಂದಿಗೆ ಆಸ್ಪತ್ರೆಯ ಔಷಧಗಳ ಮೇಲೆ ಶೇ.10 ರಷ್ಟು ರಿಯಾಯ್ತಿ ನೀಡಲಾಗುವುದು. 20 ನೆಯ ವರ್ಷದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ಇಂದು ವರ್ಷ ಮತ್ತು ಎರಡು ವರ್ಷದ ಜೊತೆಗೆ ಆಸ್ಪತ್ರೆಯನ್ನು ನೆಟ್’ವರ್ಕ್ ಆಸ್ಪತ್ರೆಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಣಿಪಾಲ ಅರೋಗ್ಯ ಕಾರ್ಡ್ ಹೊಂದಿರುವವರು ಮಣಿಪಾಲ ಮತ್ತು ಕಟೀಲಿನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಕುಟುಂಬಕ್ಕೆ ಅಂದರೆ ಕಾರ್ಡ್‌ದಾರ, ಅವರ ಸಗಾಂತಿ, 25 ವರ್ಷದ ಒಳಗಿನ ಮಕ್ಕಳಿಗೆ 500 ಮತ್ತು ಕುಟುಂಬ ಪ್ಲಸ್ ಯೋಜನೆ 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) 650 ರೂ. ಕುಟುಂಬಕ್ಕೆ 700 ಮತ್ತು ಕುಟುಂಬ ಪ್ರೆಸ್ ಯೋಜನೆ 850 ರೂ. ಇರುತ್ತದೆ ಎಂದು ಮಾಹಿತಿ ನೀಡಿದರು.
ಮಣಿಪಾಲ ಅರೋಗ್ಯ ಕಾರ್ಡ್‌ನ ಮುಖ್ಯ ಸಂಯೋಜಕರಾದ ಕೆಂಚೆನಗೌಡ ಮಾತನಾಡಿ, ಮಣಿಪಾಲ ಅರೋಗ್ಯ ಕಾರ್ಡ್ ಹೊಂದಿದ ಫಲಾನುಭವಿಗಳು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ, ಕಟೀಲುನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವಗಳ ಪ್ರಯೋಜನೆ ಪಡೆಯಬಹುದು. ಈ ಕಾರ್ಡ್ ನೋಂದಣಿಗೆ ನ. 30 ಕೊನೆಯ ದಿನಾಂಕವಾಗಿದ್ದು ಗೂಗಲ್ ಪೇ ಮತ್ತು ಮೊಬೈಲ್ ಪೇ ಮೂಲಕ ಹಣ ಸಂದಾಯ ಮಾಡಿ ಕಾರ್ಡ್ ನೊಂದಾಯಿಸಿಕೊಳ್ಳಬಹುದು. ಅಸಕ್ತರು ಮಣಿಪಾಲ ಆರೋಗ್ಯ ಕಾರ್ಡ್ ಮಾಹಿತಿ ಕೇಂದ್ರ ಚಿತ್ರದುರ್ಗ ಮೊಬೈಲ್ 9731709177 ಸಂಖ್ಯೆಗೆ ದೂರವಾಣಿ ನಂಬರ್’ಗೆ ಕರೆ ಮಾಡಬಹುದು ಎಂದರು.
ಮಣಿಪಾಲ ಕಸ್ತೂರಿ ಬಾ ಆಸ್ಪತ್ರೆಯ ಸಹಾಯಕ ವ್ಯವಸ್ಥಾಪಕ ಬಿ.ಎಸ್. ಕೃಷ್ಣಪ್ರಸಾದ್, ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನಿಲ್‌ನಾಯ್ಕ, ಕಾಟಪ್ಪನಹಟ್ಟಿ ಆಟೋ ಶಿವು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post