ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಬಾಡಿಗೆ ನೀಡುವ ನೆಪದಲ್ಲಿ ಕಾರುಗಳ ಮಾಲೀಕರನ್ನು ನಂಬಿಸಿ ಮೋಸ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೋಲಿಸರು ಬಂಧಿತನಿಂದ 70 ಲಕ್ಷ ರೂ. ಮೌಲ್ಯದ 12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ರಾಧಿಕಾ, ನಗರದ ಕಾವಾಡಿಗರಹಟ್ಟಿಯ ಮಧು ಅಲಿಯಾಸ್ ಇನ್ನೋವಾ ಮಧು ಎಂದೇ ಹೆಸರಾಗಿರುವ ಈ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದರು.
ಕಾರುಗಳ ಮಾಲೀಕರಿಂದ ಬಾಡಿಗೆ ಹಾಗೂ ಕಾರಿನ ಕಂತುಗಳನ್ನು ಕಟ್ಟುತ್ತೇನೆ, ಕಾರುಗಳನ್ನು ಕಂಪನಿಗೆ ಬಿಡುತ್ತೇನೆ ಎಂದು ನಂಬಿಸಿ ಲಾಕ್ ಡೌನ್ ಸಮಯದಲ್ಲಿ ತೆಗೆದುಕೊಂಡು ಹೋದವನು ಕಾರಿನ ಬಾಡಿಗೆ, ಕಂನತಿನ ಹಣ ಹಾಗೂ ಯಾವುದೇ ಹಣವನ್ನು ಕೊಡದೇ ಮೋಸ ಮಾಡಿ ಮಾಡಿದ್ದ. ಚಿತ್ರದುರ್ಗದ ಕಾರುಗಳನ್ನು ದಾವಣಗೆರೆ ಹಾಗೂ ದಾವಣಗೆರೆ ಕಾರುಗಳನ್ನು ಚಿತ್ರದುರ್ಗದಲ್ಲಿ ಓಡಿಸಿಕೊಂಡು ಮೋಸ ಮಾಡುತ್ತಿದ್ದ. ಇದರ ಬಗ್ಗೆ ಮಾಲೀಕರು ಮಧು ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದಾಖಲು ಮಾಡಿಕೊಂಡು ಮಧುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದರು.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post