ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ರಾಷ್ಟ್ರೀಯ ಹೆದ್ದರಿಯ ಸಮೀಪ ಬುಕ್ಲೋರಹಳ್ಳಿ ಎನ್ನುವ ಗ್ರಾಮದ ಸಮೀಪ ಜಮೀನೊಂದರ ಬಳಿ ಕಂತೆ ಕಂತೆ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ.
ದುಷ್ಕರ್ಮಿಗಳು ಕದ್ದಿರೋ ಹಣವನ್ನು ಹೆದರಿ ಬಿಸಾಕಿ ಹೋಗಿರುವ ಅನುಮಾನ ವ್ಯಕ್ತವಾಗಿದೆ. ಕಾರಣ ಕಳೆದ ಮೂರು ದಿನಗಳ ಹಿಂದೆ ದಿಲೀಪ್ ಬ್ಯುಲ್ಡ್ ಕಾನ್ ಕಂಪನಿಯಲ್ಲಿ 36 ಲಕ್ಷ ರೂಪಾಯಿ ಕಳ್ಳತನವಾಗಿತ್ತು. ಇದೀಗ ದಿಲೀಪ್ ಬ್ಯುಲ್ಡ್ ಕಾನ್ ಕಚೇರಿ ಹಿಂಭಾಗದ ಜಮೀನಿನಲ್ಲಿ ಈ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಭಾರೀ ಮೊತ್ತದ ಹಣವನ್ನು ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ತಳಕು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಇದು ಕಳ್ಳರು ಬಿಸಾಕಿರುವ ಹಣವೇ ಎಂಬ ಬಗ್ಗೆ ವಿಚಾರಣೆಯಿಂದ ತಿಳಿದುಬರಬೇಕಿದೆ.
ಬುಕ್ಲೋರಹಳ್ಳಿ ಬಳಿಯ ದಿಲೀಪ್ ಬುಲ್ಡ್ ಕಂಪನಿ ರಸ್ತೆ ಕಾರ್ಯ ವನ್ನು ಮಾಡುತ್ತಿದ್ದು ಅಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೊಡಬೇಕಿದ್ದ 36 ಲಕ್ಷ ರೂ. ಹಣವನ್ನೂ ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಕುರಿತಂತೆತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಣ ಕದ್ದ ಕಳ್ಳರು ಭಯದಿಂದ ಜಮೀನೊಂದರಲ್ಲಿ ಹಾಕಿರುವ ಶಂಕ ವ್ಯಕ್ತವಾಗಿದೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರೊಂದಿಗೆ ವೃತ್ತ ನಿರೀಕ್ಷಕರಾದ ನೆಲವಾಗಲು ಮಂಜುನಾಥ ತಳಕು ಠಾಣಾ ಪಿಎಸ್‌ಐ ಕೆ. ಸತೀಶ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post