ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ರಾಜ್ಯದ ಹೆಸರಾಂತ ದಸರಾ ಹಬ್ಬವಾದ ಮೈಸೂರು ದಸರಾ ಹಬ್ಬ ಅರಮನೆ ಒಳಗೆ ನಡೆಸಲು ತೀರ್ಮಾನಿಸಿರುವುದರಿಂದ ಚಳ್ಳಕೆರೆ ನಗರದಲ್ಲಿ ದಸರ ಹಬ್ಬವನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ವೃತ್ತ ನಿರೀಕ್ಷಕ ನೆಲವಾಗಲು ಮಂಜುನಾಥ ಹೇಳಿದರು.
ಪೊಲೀಸ್ ಠಾಣೆಯ ಆವರಣದಲ್ಲಿ ದಸರಾ ಹಬ್ಬದ ಪೂರ್ವ ಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಕೊರೋನಾ ಸಾಂಕ್ರಮಿಕ ರೋಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಸರ ಹಬ್ಬವನ್ನು ಸರಳವಾಗಿ ಆಚರಿಸಲು ಸರ್ಕಾರ ತಿಳಿಸಿರುವುದರಿಂದ ಸಂಪ್ರದಾಯದಂತೆ ಪೂಜೆಗಳು ಮಾತ್ರ ಮಾಡಿಬೇಕು. ದೇವಸ್ಥಾನಗಳಲ್ಲಿ ಸರಳವಾಗಿ ಪೂಜೆಗಳನ್ನು ಮಾಡಬಹುದು. ದೇವಸ್ಥಾನಗಳಲ್ಲಿಯೂ ಸಹ ನೂರು ಜನಕಿಂತ ಹೆಚ್ಚು ಸೇರುವಂತಿಲ್ಲ. ಸೇರಿದಂತೆ ಜನರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕಡಿಮೆ ಭಕ್ತರು ಸೇರಿದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಮೆರವಣಿಗೆ ಮಾಡಕೂಡದು ಈ ಬಾರಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿ ಎಂದರು.
ಪಿಎಸ್’ಐ ಟಿ.ಆರ್. ರಾಘವೇಂದ್ರ ಮಾತನಾಡಿ, ಸರ್ಕಾರ ಆದೇಶ ನೀಡಿರುವದಿಂದ ಪ್ರತಿವರ್ಷದಂತೆ ಈ ಬಾರಿ ದಸರ ಹಬ್ಬವನ್ನು ವಿಜೃಂಭಣೆಯಿಂದ ಮಾಡುಲು ಅವಕಾಶವಿರುವುದಿಲ್ಲ. ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಸರ ಹಬ್ಬವನ್ನು ಸರಳವಾಗಿ ಸರ್ಕಾರ ಮಾರ್ಗಸೂಚಿಗಳನ್ನು ಅನುಸರಿಸಿ ಹೆಚ್ಚಿನ ಜನ ಸಂದಣಿಯನ್ನು ತಪ್ಪಿಸಿ, ಹಬ್ಬವನ್ನು ಆಚರಿಸಬೇಕು. ಪ್ರತಿ ವರ್ಷದಂತೆ ವೀರಭದ್ರ ಸ್ವಾಮಿ ದೇವಸ್ಥಾನದಿಂದ ಹೊರಡುವ ಹಲವು ದೇವರುಗಳು ಮೆರವಣಿಗೆ ಈ ಬಾರಿ ರದ್ದುಮಾಡಲಾಗಿದೆ. ಸರಳವಾಗಿ ದೇವಸ್ಥಾನಗಳಲ್ಲಿ ಪೂಜೆಗಳನ್ನು ಮಾಡಿ ಮುಗಿಸಬೇಕು. ಪ್ರತಿವರ್ಷದಂತೆ ಅಂಬು ಹೊಡೆಯುವ ಪದ್ದತಿಯನ್ನು ಈ ಬಾರಿ ನಿಷೇಧ ಮಾಡಲಾಗಿದೆ. ಆದ ಕಾರಣ ನಗರದ ನಾಗರೀಕರು ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ. ಹಬ್ಬವನ್ನು ಅವರವರ ಮನೆಯಲ್ಲೇ ಸರಳವಾಗಿ ಆಚರಿಸಿ ಕೋರೋನಾದಿಂದ ದೂರವಿರಿ ಎಂದರು.

ಗೌಡರ ರಾಮಣ್ಣ ನಾಯಕ, ಸೂರಣ್ಣ ದಳವಾಯಿ ಮೂರ್ತಿ, ಕಾರೆಗೌಡ್ರ, ಮಂಜುನಾಥ, ನಾಗರಾಜ, ಪಿ.ಟಿ. ತಿಪ್ಪೇಸ್ವಾಮಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post