No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, September 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಕ್ರಿಮಿನಲ್ ಹಿನ್ನೆಲೆಯುಳ್ಳ ಆಟೋ ಚಾಲಕರಿಗೆ ಬ್ರೇಕ್ ಹಾಕಲು ಚಿತ್ರದುರ್ಗ ಪೊಲೀಸರ ಮಾಸ್ಟರ್ ಪ್ಲಾನ್

kalpa News by kalpa News
October 9, 2020
in Small Bytes, ಚಿತ್ರದುರ್ಗ
0
ಕ್ರಿಮಿನಲ್ ಹಿನ್ನೆಲೆಯುಳ್ಳ ಆಟೋ ಚಾಲಕರಿಗೆ ಬ್ರೇಕ್ ಹಾಕಲು ಚಿತ್ರದುರ್ಗ ಪೊಲೀಸರ ಮಾಸ್ಟರ್ ಪ್ಲಾನ್
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಿತ್ರದುರ್ಗ: ಆಟೋ ಸ್ನೇಹಿ ಡೇಟಾ ಬೇಸ್ಡ್‌’ನಿಂದ ಕ್ರಿಮಿನಲ್ ಹಿನ್ನೆಲೆಯುಳ್ಳ ಆಟೋ ಚಾಲಕರುಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ಚಳ್ಳಕೆರೆ ಉಪ ವಿಭಾಗದ ವತಿಯಿಂದ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಟೋ ಸ್ನೇಹಿ ಡಿಜಿಟಲ್ ಆಪ್ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿಯಾಗಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಚಳ್ಳಕೆರೆಯಲ್ಲಿ ಆಟೋ ಸ್ನೇಹಿ ಲಾಂಚ್ ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಬೇರೆ ತಾಲೂಕಿಗೂ ಇದನ್ನು ವಿಸ್ತರಿಸಲಾಗುವುದು. ಮೋಟಾರು ವಾಹನ ಕಾಯ್ದೆ 84 ಜಿ. ಪ್ರಕಾರ ಎಲ್ಲಾ ಆಟೋಗಳಲ್ಲೂ ಡಿಸ್ಪ್ಲೆ ಮಾಡಬೇಕು. ಇದರಿಂದ ಆಟೋ ಚಾಲಕ/ಮಾಲೀಕನ ಸಂಪೂರ್ಣ ಇತಿಹಾಸವೇ ತಿಳಿಯಬಹುದು. ಇದು ಆಟೋ ಏರುವ ಪ್ರಯಾಣಿಕರು ಹಾಗೂ ಚಾಲಕರಿಗೂ ಸುರಕ್ಷತೆ. ಎಲ್ಲಿಯಾದರೂ ಆಟೋ ಚಾಲಕರು ಕ್ರಿಮಿನಲ್ ಅಪರಾಧವೆಸಗಿದರೆ ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಹೇಳಿದರು.

ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಮಹಲಿಂಗ ನಂದಗಾವಿ ಮಾತನಾಡಿ, ಆಟೋ ಸ್ನೇಹಿಯಿಂದ ಚಾಲಕರು ಸಂಪೂರ್ಣ ದಾಖಲೆಗಳನ್ನು ಸರಿಯಾಗಿರಿಸಿಕೊಳ್ಳಬೇಕಾಗುತ್ತದೆ. ಪೊಲೀಸರು ಎಲ್ಲೆಂದರಲ್ಲಿ ಆಟೋಗಳನ್ನು ತಡೆದು ಲೈಸೆನ್ಸ್‌, ಪರ್ಮಿಟ್, ಇನ್ಸುರೆನ್ಸ್‌ ಇವ್ಯಾವುಗಳನ್ನು ಕೇಳುವುದಿಲ್ಲ. ಎಲ್ಲಾ ಮಾಹಿತಿಯೂ ಆಟೋ ಸ್ನೇಹಿಯಲ್ಲಿ ಲಭ್ಯವಿರುತ್ತದೆ. ಪರವಾನಗಿ ನವೀಕರಿಸಿಕೊಳ್ಳದಿದ್ದರೆ. ಜೀವವಿಮೆ ಪಾವತಿಸದಿದ್ದರೆ ಅಂತಹ ಚಾಲಕರು ಮಾಲೀಕರುಗಳಿಗೆ ಎಚ್ಚರಿಸುತ್ತೇವೆ. ಸಂಬಂಧಪಟ್ಟ ಪೊಲೀಸ್ ಠಾಣೆಗಳಿಂದ ಆಟೋಗಳಿಗೆ ಸೀರಿಯಲ್ ಸಂಖ್ಯೆ ನೀಡಿ ಆಟೋ ಎರಡು ಬದಿಗಳಲ್ಲಿ ರಿಫ್ಲೆಕ್ಟರ್ ಸ್ಟಿಕರ್‌ಗಳನ್ನು ಅಂಟಿಸಲಾಗುವುದು. ಇದರಿಂದ ಆಟೋ ಚಾಲಕರು ತಪ್ಪಿನಿಂದ ನುಣುಚಿಕೊಳ್ಳಲು ಅವಕಾಶವಿಲ್ಲ ಎಂದರು.

ಒಂದು ಬಗೆಯಲ್ಲಿ ಇದು ಎಲ್ಲರಿಗೂ ಸುರಕ್ಷತೆ. ವಿಶೇಷವಾಗಿ ಮಹಿಳೆಯರು ನಿರ್ಭಯವಾಗಿ ಆಟೋದಲ್ಲಿ ಸಂಚರಿಸುವಂತಾಗುತ್ತದೆ. ಚಾಲಕರುಗಳು ಲೈಸೆನ್ಸ್‌ ಮಾಡಿಸಿಕೊಳ್ಳುವುದಕ್ಕಾಗಲಿ, ನವೀಕರಣ, ಇನ್ಸುರೆನ್ಸ್‌ ಇವುಗಳೆಲ್ಲವನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ನಿರ್ಲಕ್ಷ, ಸೋಮಾರಿತನ ತೋರಿದರೆ ಸಹಿಸುವುದಿಲ್ಲವೆಂಬ ಎಚ್ಚರಿಕೆ ನೀಡಿದರು.

ಆಟೋ ಸ್ನೇಹಿ ಜಿಲ್ಲೆಯಾದ್ಯಂತ ಆರಂಭಗೊಂಡಾಗ ಅವರವರ ಜಾಗಗಳಲ್ಲಿ ಮಾತ್ರ ಚಾಲಕರು ಆಟೋಗಳನ್ನು ಚಲಾಯಿಸಬಹುದು. ಸಾರ್ವಜನಿಕರು ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಟೋ ಸ್ನೇಹಿ ನೊಂದಣಿ ಮಾಡಿಸಿಕೊಳ್ಳುವುದರಿಂದ ಎಲ್ಲಾ ರೀತಿಯ ಉಪಯೋಗವಿದೆ. ಇದಕ್ಕಾಗಿ ಸದ್ಯದಲ್ಲಿಯೇ ಸ್ಪೆಷಲ್ ಡ್ರೆûವ್ ಮಾಡಲಾಗುವುದು. ದಾಖಲೆಗಳು ನಿಮ್ಮ ಒಳಿತಿಗಾಗಿ ಇರಬೇಕು. ಕೆಲವೊಮ್ಮೆ ಅಪಘಾತಗಳಾಗಿ ಸಾವು ಸಂಭವಿಸಿದಾಗ ಲೈಸೆನ್ಸ್‌, ಇನ್ಸುರೆನ್ಸ್‌ ಇಲ್ಲದಿದ್ದರೆ ಯಾರಿಗೂ ಪರಿಹಾರ ಸಿಗುವುದಿಲ್ಲ. ನಿಮ್ಮ ಸಹಕಾರ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗೆ ಬೇಕು ಎಂದು ಚಳ್ಳಕೆರೆ ತಾಲ್ಲೂಕು ಆಟೋ ಚಾಲಕರುಗಳಲ್ಲಿ ಮನವಿ ಮಾಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಗಡೆ ಮಾತನಾಡಿ, ಚಿತ್ರದುರ್ಗ ಸ್ಮಾರ್ಟ್ ಜಿಲ್ಲೆ ಆಗದಿರಬಹುದು. ಆದರೆ ಆಟೋ ಸ್ನೇಹಿ ಮಾತ್ರ ಸ್ಮಾರ್ಟ್ ಕಾರ್ಯಕ್ರಮ. ಕೆಲವರು ಆಟೋ ಒಡಿಸುತ್ತಾರೆ. ಆದರೆ ಲೈಸೆನ್ಸ್‌ ಇರುವುದಿಲ್ಲ. ಪರ್ಮಿಟ್ ಮುಗಿದರೂ ನವೀಕರಣ ಮಾಡಿಸುವುದಿಲ್ಲ. ಆಟೋ ಸ್ನೇಹಿ ಎಲ್ಲಾ ಸಮಸ್ಯೆಗಳಿಗೂ ಉತ್ತರ ನೀಡುತ್ತದೆ. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸಬೇಡಿ. ಪರವಾನಗಿ, ಪರ್ಮಿಟ್, ನವೀಕರಣಕ್ಕೆ ನೇರವಾಗಿ ನನ್ನ ಕಚೇರಿಗೆ ಬನ್ನಿ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ಚಳ್ಳಕೆರೆ ಡಿವೈಎಸ್’ಪಿ ಶ್ರೀಧರ್ ಮಾತನಾಡಿ, ಚಳ್ಳಕೆರೆಯಲ್ಲಿ ಪ್ರತಿ ತಿಂಗಳು ಕ್ಯಾಂಪ್ ಮಾಡಲು ಸಾರಿಗೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಅವರ ಪ್ರಕಾರ ಎಲ್ಲಕ್ಕೂ ಕ್ಯಾಂಪ್‌ನಲ್ಲಿ ಪರಿಹಾರ ಸಿಗುವುದಿಲ್ಲ. ಹಾಗಾಗಿ ಕಚೇರಿಗೆ ಹೋಗಬೇಕಾಗುತ್ತದೆ. ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲ್ಲೂಕು ಸೇರಿ ಆರ್’ಟಿಓ, ಎಆರ್’ಟಿಓ, ಕಚೇರಿ ತೆರೆಯುವ ಸಂಬಂಧ ಸರ್ಕಾರ ಕೇಳಿರುವ ಮಾಹಿತಿ ನೀಡಿವುದಾಗಿ ಸಾರಿಗೆ ಅಧಿಕಾರಿಗಳು ತಿಳಿದಿದ್ದಾರೆ. ಆಟೋ ಚಾಲಕರು ಮತ್ತು ಮಾಲೀಕರು ಪೊಲೀಸ್ ಇಲಾಖೆ ಹಾಗೂ ನಮ್ಮ ಇಲಾಖೆ ಜೊತೆ ಕೈಜೋಡಿಸಿ ಸಂಪೂರ್ಣ ದಾಖಲೆಗಳನ್ನಿಟ್ಟುಕೊಳ್ಳಿ. ಇದರಿಂದ ಅಪರಾಧಗಳನ್ನು ತಡೆಯಬಹುದು. ಆಟೋ ಚಾಲಕರುಗಳಿಗೆ ಸಾಕಷ್ಟು ಸಮಸ್ಯೆಗಳಿವೆ ಎನ್ನುವುದು ನಮ್ಮ ಗಮನಕ್ಕೂ ಬಂದಿದೆ. ಆಟೋ ಸ್ನೇಹಿ ಮೂಲಕ ಹಂತ ಹಂತವಾಗಿ ಎಲ್ಲವನ್ನು ಬಗೆಹರಿಸೋಣ ಎಂದರು.

ಚಳ್ಳಕೆರೆ ತಾಲೂಕು ಜೈ ಕರ್ನಾಟಕ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಬಿ. ನಾಗರಾಜ್ ಆಟೋ ಚಾಲಕರ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ ಸಶಸ್ತ್ರ ಮೀಸಲು ಪಡೆಯ ಡಿವೈಎಸ್’ಪಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್ಸ್‌ಪೆಕ್ಟರ್‌ಗಳು ಚಳ್ಳಕೆರೆ ವೃತ್ತ ನಿರೀಕ್ಷಕ ನೆಲವಾಗಲು ಮಂಜುನಾಥ, ಪಿಎಸ್‌ಐ ಮಂಜುನಾಥ ಲಿಂಗಾರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Auto-friendly Data BasedBayalu Seeme NewsChallakereChitradurgaKannada News WebsiteLatest News KannadaPoliceಆಟೋ ಸ್ನೇಹಿ ಡೇಟಾ ಬೇಸ್ಡ್ಚಳ್ಳಕೆರೆಚಿತ್ರದುರ್ಗ
Share202Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭಾರೀ ಮಳೆಗೆ ಭದ್ರಾವತಿಯಲ್ಲಿ ಮನೆಗೆ ನುಗ್ಗಿದ ನೀರು: ಶಾಶ್ವತ ಪರಿಹಾರ ಮಾಡುವಂತೆ ಆಯುಕ್ತರಿಗೆ ಮನವಿ

Next Post

ಕೊಪ್ಪಳ ಎಸ್’ಪಿ ಆಗಿ ಹಿರಿಯ ಐಪಿಎಸ್ ಅಧಿಕಾರಿ ಟಿ. ಶ್ರೀಧರ್ ವರ್ಗಾವಣೆ

kalpa News

kalpa News

Next Post
ಕೊಪ್ಪಳ ಎಸ್’ಪಿ ಆಗಿ ಹಿರಿಯ ಐಪಿಎಸ್ ಅಧಿಕಾರಿ ಟಿ. ಶ್ರೀಧರ್ ವರ್ಗಾವಣೆ

ಕೊಪ್ಪಳ ಎಸ್’ಪಿ ಆಗಿ ಹಿರಿಯ ಐಪಿಎಸ್ ಅಧಿಕಾರಿ ಟಿ. ಶ್ರೀಧರ್ ವರ್ಗಾವಣೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL