ಕಲ್ಪ ಮೀಡಿಯಾ ಹೌಸ್ | ಕಾರ್ಕಳ (ಉಡುಪಿ) |
ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ವತಿಯಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಆಶ್ರಯದಲ್ಲಿ ಕಾರ್ಕಳ (Karkala) ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ (Christking) ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಐವರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ರಿಲೇ ತಂಡಕ್ಕೆ ಪ್ರಥಮ ಸ್ಥಾನ
ಬಾಲಕಿಯರ ರಿಲೇ ಸ್ಪರ್ಧೆಯಲ್ಲಿ ಏಳನೇ ತರಗತಿಯ ತ್ರಿಷ್ಮ, ಪ್ರನ್ವಿ ಎಸ್. ದೇವಾಡಿಗ, ಆಶೀ ಶೆಟ್ಟಿ ಹಾಗೂ ಎಂಟನೇ ತರಗತಿಯ ಆ್ಯಶೆಲ್ ಡಿ ಅಲ್ಮೆಡಾ ಅವರನ್ನೊಳಗೊಂಡ ಕ್ರೈಸ್ಟ್ಕಿಂಗ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ ತಂಡದ ನಾಲ್ವರು ವಿದ್ಯಾರ್ಥಿನಿಯರು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Also Read>> ಕಾರ್ಕಳ | ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೈಸ್ಟ್ಕಿಂಗ್ ವಾಲಿಬಾಲ್ ಆಟಗಾರ್ತಿಯರಿಗೆ ಭವ್ಯ ಸ್ವಾಗತ
ಶಾಟ್ಪುಟ್ನಲ್ಲಿ ಸೃಷ್ಟಿ ಪೂಜಾರಿಗೆ ದ್ವಿತೀಯ ಸ್ಥಾನ
ಏಳನೇ ತರಗತಿಯ ಸೃಷ್ಟಿ ಪೂಜಾರಿ ಶಾಟ್ಪುಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕ್ರೈಸ್ಟ್ಕಿಂಗ್ ಶಾಲೆಯಿಂದ ಒಟ್ಟು ಐವರು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.
ಇನ್ನು ಏಳನೇ ತರಗತಿಯ ಪ್ರನ್ವಿ ಎಸ್. ದೇವಾಡಿಗ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡರೆ, ಎಂಟನೇ ತರಗತಿಯ ಪ್ರಸ್ತುತ್ 80 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











