ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ನೆಹರೂ ರಸ್ತೆಯಲ್ಲಿ ಸಿಟಿ ಬಸ್ ಟೈರ್ ಸ್ಪೋಟಗೊಂಡ #TyreBlast ಪರಿಣಾಮ ಬಸ್ ಒಳಗಿದ್ದ ಬಾಲಕಿ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ನೆಹರೂ ರಸ್ತೆಯಲ್ಲಿ ವೀರಭದ್ರೇಶ್ವರ ಸಿಟಿ ಬಸ್ #CityBus ಟೈರ್ ಸ್ಪೋಟಗೊಂಡಿದೆ. ಪರಿಣಾಮವಾಗಿ ಬಸ್ ತೂತ ಬಿದ್ದಿದ್ದು ಬಾಲಕಿ ಕೆಳಕ್ಕೆ ಬಿದ್ದಿದ್ದಾಳೆ.

ಟೈರ್ ಸ್ಪೋಟಗೊಂಡ ರಭಸಕ್ಕೆ ಬಸ್ ಡಿವೈಡರ್’ಗೆ ಡಿಕ್ಕಿ ಹೊಡೆದಿದೆ.

ಬಿಸಿಲಿನ ಝಳಕ್ಕೆ ಟೈರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.
ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post