ಶಿವಮೊಗ್ಗ: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಲಾಯಿತು.
ಆಶಾಕಿರಣ ಬುದ್ಧಿಮಾಂಧ್ಯ ಮಕ್ಕಳ ವಸತಿಶಾಲೆಯಲ್ಲಿ ಸ್ವಚ್ಛಗೊಳಿಸಿ ಶ್ರಮದಾನ ಹಾಗೂ ಮಕ್ಕಳಿಗೆ ಸಿಹಿತಿಂಡಿ ಹಂಚುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಎಚ್.ಎಂ.ವಾಗ್ದೇವಿ, ಗಾಂಧಿ ಈ ದೇಶ ಕಂಡ ಅಪೂರ್ವ ಚೇತನ. ಈ ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸುವಲ್ಲಿ ಅವರು ತೋರಿದ ಸಂಯಮ, ಶಾಂತಿ, ಸತ್ಯಾಗ್ರಹ, ಅಹಿಂಸೆಯ ಮಂತ್ರಗಳು ಇಂದಿಗೂ ಮಾದರಿಯಾಗಿವೆ.
ಗಾಂಧಿಯವರ ನೂರೈವತ್ತನೇ ಜನ್ಮದಿನಾಚರಣೆಯನ್ನು ಆಚರಿಸುವುದರ ಮೂಲಕ ಅವರ ಸ್ವಚ್ಛ, ಸದೃಢ ಭಾರತವನ್ನು ನಾವು ನಿರ್ಮಾಣ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮಾಧಿಕಾರಿಗಳಾದ ಡಾ. ಶುಭಾ ಮರವಂತೆ, ಎಂ. ಪರಶುರಾಮ್, ಎಂ.ಎಸ್. ಲೋಹರ್, ಎ. ಸುಮನಾರಾಣಿ ಉಪಸ್ಥಿತರಿದ್ದರು. ಕಿರಣ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶ್ರಮದಾನ ನಡೆಯಿತು.
Discussion about this post